ಮಾದಕವಸ್ತು ಪ್ರಕರಣ: ನಿರ್ಮಾಪಕ‌ ನಾಡಿಯಾವಾದ್ ಪತ್ನಿ ಜೈಲಿಗೆ

ಮುಂಬೈ,.ನ.9-ಬಾಲಿವುಡ್ ನಲ್ಲಿ ಸದ್ದು ಮಾಡಿರುವ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ‌ ಪಿರೋಜ್ ನಾದಿಯಾವಾಲ ಅವರ ಪತ್ನಿ ಶಬಾನಾ ಸಯೀದ್ ಅವರಿಗೆ ನ.23 ರ ವರಗೆ ನ್ಯಾಯಂಗ ಬಂಧನ‌ ವಿಧಿಸಿ ಮುಂಬೈ ನ್ಯಾಯಾಲಯ ಆದೇಶಿಸಿದೆ.

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಗ್ರಹ ಪಡೆ ಶಬಾನಾ ಸಯೀದ್ ಅವರನ್ನು ನಿನ್ನೆ ಬಂಧಿಸಿತ್ತು.‌ಈ ಸಂಬಂಧಿಸಿದ ಜಾಮೀನಿಗಾಗಿ ಸಯೀದಾ ಅರ್ಜಿ ಸಲ್ಲಿಸಿದ್ದರು.

ಜುಹು ನಿವಾಸದಲ್ಲಿ ನಿನ್ನೆ ಸಯೀದಾ ‌ಮತ್ತು ಇತರೆ ನಾಲ್ಕು ಮಂದಿಯನ್ನು ಮಾದಕವಸ್ತು ನಿಗ್ರಹ ಪಡೆ ಬಂಧಿಸಿದೆ .‌ಮನೆಯಲ್ಲಿ 10 ಗ್ರಾಮ್ ಮರಿಜುವಾನ ಮನೆಯಲ್ಲಿ ಪತ್ತೆಯಾಗಿತ್ತು.ಇನ್ನುಳಿದ ನಾಲ್ಕು ಮಂದಿ ಡ್ರಗ್ ಪೆಡ್ಲರ್ ಆಗಿದ್ದಾರೆ.

ಈ ನಡುವೆ ಶಬಾನಾ ಸಯೀದ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅಪೇಕ್ಷೆಣೆ ಸಲ್ಲಿಸಿವಂತೆ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಪಡೆಗೆ ಮುಂಬೈನ ಎಸ್‌ಫ್ಲೆಂಡೆ ನ್ಯಾಯಾಲಯ
ಸೂಚನೆ ನೀಡಿದೆ.

727.1 ಗ್ರಾಮ್ ಗಾಂಜಾ ವಶ:

ಪ್ರತ್ಯೇಕ ತನಿಖೆ ನಡೆಸಿದ ರಾಷ್ಟ್ರೀಯ ಮಾದಕವಸ್ತು ನಿಗ್ರಹ ಪಡೆ 727.21 ಗ್ರಾಮ್ ಗಾಂಜಾ,74.1 ಗ್ರಾಮ್ ಚರಾಸ್, 95.1 ಗ್ರಾಮ್ ಎಂಡಿ ವಾಣಿಜ್ಯ ಬಳಕ ಹಾಗು ಮಾದಕ ವಸ್ತು ಜಾಲ ಪ್ರಕರಣದಿಂದ 3,58,610 ರೂ ನಗದು ವಶ ಪಡಿಸಿಕೊಳ್ಳಲಾಗಿದೆ.

ಈಗಾಗಲೇ ವಾಹೀದ್ ಅಬ್ದುಲ್ ಕದೀರ್ ಶೇಕ್ ಅಲಿಯಾಸ್ ಸುಲ್ತಾನ್ ಮಿರ್ಜಾ ಎನ್ನುವ ವ್ಯಕ್ತಿ ಶಬಾನ ಸಯೀದ್ ಅವರಿಗೆ ಮಾದಕ ವಸ್ತು ಸರಬರಾಜು ಮಾಡಿದ ಆರೋಪ ಕೇಳಿ ಬಂದಿದೆ.

ಹೀಗಾಗಿ ಜುಹು ನಲ್ಲಿರುವ ಶಬನಾ ಮನೆಗೆ ನಿನ್ನೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿ ಬಂದಿಸಿದ್ದಾರೆ