ಮಾತೋಶ್ರೀ ನಳಿನಿದೇವಿ ಅಗಲಿಕೆ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಶೋಕಾಚರಣೆ

ಕಲಬುರಗಿ:ಏ.18: ಶ್ರೀ ಶರಣಬಸವೇಶ್ವರ್ ಮಹಾದಾಸೋಹ ಸಂಸ್ಥಾನದ ಬಸವರಾಜ್ ಅಪ್ಪಾ ಅವರ ಪತ್ನಿಯಾದ ಮಾತೋಶ್ರೀ ನಳಿನಿದೇವಿಯವರು ಶನಿವಾರ ದೈವಾಧೀನರಾಗಿದ್ದನ್ನು ನೆನೆದು ಶರಣಬಸವ ವಿಶ್ವವಿದ್ಯಾಲಯ ಆವರಣದ ಕಂಪ್ಯೂಟರ್ ಸೈನ್ ವಿಭಾಗದಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ಶೋಕಾಚರಣೆ ಆಚರಿಸಲಾಯಿತು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ್ ಶಾಸ್ತ್ರಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ಅವ್ವಾಜೀಯವರ ಅಗಲಿಕೆಯಿಂದಾದ ದು:ಖವನ್ನು ತಡೆದುಕೊಳ್ಳುವ ಶಕ್ತಿ ಶ್ರೀ ಶರಣಬಸವೇಶ್ವರರು ಕುಟುಂಬಕ್ಕೆ ದಯಪಾಲಿಸಲಿ ಹಾಗೂ ದೇವರು ಅವ್ವಾಜಿಯವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಡೀನ್ ಡಾ. ಬಸವರಾಜ್ ಮಠಪತಿ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದು ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು. ಅದೇ ರೀತಿ ಗೋದುತಾಯಿ ಇಂಜೀನಿಯರಿಂಗ್ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿಯೂ ಮೌನಾಚರಣೆ ಮಾಡಲಾಯಿತು.