ಮಾತೆ ಮಾಣಿಕೇಶ್ವರಿ ಮಹಿಮೆ ಅಪಾರ:ಮೇತ್ರಿ

ಹುಮನಾಬಾದ:ಜು.15:ಶ್ರೀ ಶ್ರೀ ಶ್ರೀ ಮಹಾಯೋಗಿಣಿ ಮಾತೆ ಮಾಣಿಕೇಶ್ವರಿ ಮಹಿಮೆ ಅಪಾರವಾಗಿದೆ ಹಲವಾರು ಪವಾಡಗಳನ್ನು ಮಾಡಿ ಭಕ್ತರ ಹೃದಯ ಗೆದ್ದ ಮಹಾ ತಾಯಿ ಆಗಿದ್ದರು ಎಂದು ಬಿಜೆಪಿ ಎಸ್.ಟಿ. ಮೋರ್ಚಾದ ತಾಲ್ಲ್ಲೂಕಾ ಅಧ್ಯಕ್ಷ ದಯಾನದ ಮೇತ್ರಿ ಹಮ್ಮಿಕೊಂಡಿದ್ದ ಮಾತೆ ಮಾಣಿಕೇಶ್ವರಿ ತಾಯಿಯ 89ನೇ ಜನ್ಮ ದಿನಾಚರಣೆÉಯ ಅಂಗವಾಗಿ ತಾಲ್ಲೂಕಿನ ಶ್ರೀ ಮಾಣಿಕ ಪ್ರಭು ಅಂಧ ಮಕ್ಕಳ ಪಾಠ ಶಾಲೆಗೆ ಭೇಟ್ಟಿ ನೀಡಿ, ಮಾತೆ ಮಾಣಿಕೇಶ್ವರಿ ತಾಯಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ವಿಶೇಷ ಪ್ರಸಾದ ವಿತರಿಸಿ ಮಾತನಾಡುತ್ತಾ ತಿಳಿಸಿದರು. ಮಾತೆ ಮಾಣಿಕೇಶ್ವರಿ ತಾಯಿಯ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಕಡ್ಡಾಯವಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಮಾತೆ ಮಾಣಿಕೇಶ್ವರಿರವರಗೆ ರಾಜ್ಯ ಸರ್ಕಾರ ವತಿಯಿಂದ ಜಯಂತಿಯನ್ನು ಆಚರಿಸಲು ದಯಾನಂದ ಮೇತ್ರಿ ಆಗ್ರಹಿಸಿದ್ದಾರೆ. ತಮ್ಮ ಹುಟ್ಟು ದಿನ, ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರಿಗೆ ದರ್ಶನ ನೀಡುತ್ತಿದ್ದ ಮಾತಾ ಮಾಣಿಕೇಶ್ವರಿ ಕುರಿ, ಕೋಳಿ, ಹಸುಗಳನ್ನು ಕೊಲ್ಲದೆ ಅಹಿಂಸೆಯನ್ನು ಪ್ರತಿಪಾದಿಸುವಂತೆ ಸಂದೇಶ ಸಾರುತ್ತಿದ್ದರು. ಆಶ್ರಮಕ್ಕೆ ಬರುವ ಭಕ್ತರು ಅನ್ನಪ್ರಸಾದ ಸ್ವೀಕರಿಸುವುದಕ್ಕೂ ಮುಂಚೆ ಅಹಿಂಸೆಯ ತತ್ವ ಬೋಧನೆ ನಡೆಯುತ್ತಿತ್ತು ಎಂದರು. ರಾಜ್ಯ ಸರ್ಕಾರ ಮಾಣಿಕೇಶ್ವರಿ ತಾಯಿಯ ಜನ್ಮದಿನಾಚರಣೆಯನ್ನ ಸರ್ಕಾರದಿಂದಲೇ ಆಚರಿಸಬೇಕೆಂದು ದಯಾನಂದ ಮೇತ್ರಿರವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸುವ ಮುಖಾಂತರ ಆಗ್ರಹಿಸಿದ್ದಾರೆ. ಅವರು ಜೀವಂತವಿದ್ದಾಗ ಅನ್ನ ನೀರಿಲ್ಲದೇ ಬದುಕಿದ ಜಗತ್ತಿನ ಏಕೈಕ ಜೀವಿ ಅವರು, ಬರೀ ದೈವಿ ಸ್ವರೂಪಿ ಮಾತ್ರವಲ್ಲ.. ಸಾಕ್ಷಾತ್ ದೇವರೇ ಅವರು. ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ತನ್ನನ್ನು ತಾವು ತೊಡಗಿಸಿಕೊಂಡು ಭಕ್ತರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ತಾಯಿಯ ಮಹಿಮೆ ಅಪಾರವಾಗಿದೆ ಎಂದರು. ಮಾಣಿಕ ಪ್ರಭು ಶಿಕ್ಷಣ ಸಂಸ್ಥೆ ಅಂಗವಿಕಲ ಹಾಗೂ ಅಂಧರ ಮಕ್ಕಳ ಸಂರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ನುಡಿದರು. ಸಂಸ್ಥೆಯ ವ್ಯವಸ್ಥಾಪಕ ಪ್ರಭು ಪಂಚಾಳ, ವೀರಾಣ್ಣಾ ಪತ್ತಾರ್, ಮುಖ್ಯ ಶಿಕ್ಷಕಿ ಸುಭದ್ರ ಆರ್.ಗಿರಿ, ಶಹ ಶಕ್ಷಕ ತುಕಾರಾಮ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಭಂಡಾರಿ, ಪ್ರೀಯಾ ರಾಜು, ಸುನೀಲ ದೇಶಪಾಂಡೆ ಹಾಗೂ 50ಕ್ಕೂ ಅಧಿಕ ಅಂಧ ಮಕ್ಕಳಿದ್ದರು.