ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ನೀಟ್ ಸಾಧಕಿಗೆ ಸನ್ಮಾನ

ಬೀದರ: ನ.7:ಗುಣಮಟ್ಟದ ಶಿಕ್ಷಣದಿಂದಾಗಿ ಪ್ರಸಕ್ತ ವರ್ಷದ ನೀಟ್ನಲ್ಲಿ ಬೆಂಗಳೂರಿನ ಅಟೊಮಿಕ್ ಅಕಾಡೆಮಿ ಸಂಯೋಜಿತ ಶ್ರೀ ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ ಎಂದು ಕಾಲೇಜಿನ ಅಧ್ಯಕ್ಷ ರಮೇಶ ಕುಲಕರ್ಣಿ ಹೇಳಿದರು.
ಕಾಲೇಜಿನಲ್ಲಿ ಪಠ್ಯಕ್ರಮದ ಜೊತೆಗೆ ನೀಟ್, ಜೆಇಇ, ಕೆ.ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೂ ಒತ್ತು ನೀಡಲಾಗುತ್ತಿದೆ. ನೀಟ್ನಲ್ಲಿ ಕಾಲೇಜಿನ ವಿದ್ಯಾರ್ಥಿ ಸಾಯಿಕಿರಣ ಆರ್. ಕುಲಕರ್ಣಿ ಕಲ್ಯಾಣ ಕರ್ನಾಟಕದಲ್ಲೇ ಅತಿಹೆಚ್ಚು ಅಂದರೆ 720 ರ ಪೈಕಿ 685 ಅಂಕ ಪಡೆದಿರುವುದು ಅದರ ಫಲಶ್ರುತಿಯೇ ಆಗಿದೆ ಎಂದು ಕಾಲೇಜಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪೆÇ್ರೀತ್ಸಾಹ ಅಗತ್ಯವಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿ, ಸಾಧನೆಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಅಟೊಮಿಕ್ ಅಕಾಡೆಮಿಯ ನಿರ್ದೇಶಕ ಪೆÇ್ರ. ಶ್ರೀಧರ ಹೇಳಿದರು.
ಕಾಲೇಜಿನಲ್ಲಿ ನುರಿತ, ಅನುಭವಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ತರಬೇತಿ ನೀಡುವ ಉಪನ್ಯಾಸಕರಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜು ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ತರಬೇತಿಯಿಂದ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ, ಎಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಕನಸು ಸಾಕಾರವಾಗಲಿದೆ. ಇದರೊಂದಿಗೆ, ಕೇಂದ್ರ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಲೋಕ ಸೇವಾ ಆಯೋಗದಿಂದ ನಡೆಸಲಾಗುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹ ಅನುಕೂಲವಾಗಲಿದೆ ಎಂದು ಹೇಳಿದರು.
ಪರಿಶ್ರಮಕ್ಕೆ ಫಲ ಸಿಕ್ಕಿದೆ:
ಕಾಲೇಜಿನ ಉಪನ್ಯಾಸಕರು ನೀಟ್ಗೆ ಸಂಬಂಧಿಸಿದಂತೆ ಸಂಪೂರ್ಣ ಮಾರ್ಗದರ್ಶನ ಮಾಡಿದ್ದರು. ಅದರಂತೆ ಯೋಜನೆ ರೂಪಿಸಿಕೊಂಡು, ನಿರಂತರ ಪರಿಶ್ರಮ ವಹಿಸಿದ್ದೆ. ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 714ನೇ ಯಾರ್ಂಕ್ ಬಂದಿದ್ದರಿಂದ ಬಹಳ ಸಂತಸವಾಗಿದೆ. ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಾಯಿಕಿರಣ ರಮೇಶ ಕುಲಕರ್ಣಿ ಹೇಳಿದರು.
ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ವಹಿಸಬೇಕು. ನಿರಂತರ ಪರಿಶ್ರಮ ಪಡಬೇಕು. ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಉತ್ಕøಷ್ಟ ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ಅವಶ್ಯಕವಾಗಿದೆ. ಅದಕ್ಕಾಗಿಯೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಠ್ಯಕ್ರಮದಂತೆ ಕಾರ್ಯ ಯೋಜನೆ ರೂಪಿಸಿ, ಅದಕ್ಕೆ ಅನುಗುಣವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ನಿರಂತರ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಗುರಿ ಹಾಗೂ ಪಾಲಕರ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಾಲೇಜು ಕಳೆದ 12 ವರ್ಷಗಳಿಂದ ಕಾರ್ಯನಿರತವಾಗಿದೆ. ಈ ವರ್ಷದ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಾಚಾರ್ಯ ಲೋಕೇಶ ಉಡಬಾಳೆ ಹೇಳಿದರು.
ಕಾಲೇಜಿನ ಯೋಜನಾ ಮುಖ್ಯಸ್ಥ ಕೊಂಡಲರಾವ್, ಉಪ ಪ್ರಾಚಾರ್ಯ ಟಿ. ಶೇಖರ ರೆಡ್ಡಿ ಉಪಸ್ಥಿತರಿದ್ದರು.