ಮಾತೆಂಬುದು ಜ್ಯೋತಿಲಿರ್ಂಗ ಮಾತೇ ಮಾಣಿಕ್ಯ: ಸಿದ್ದೇಶ್ವರ ಸ್ವಾಮೀಜಿ

ಮಲ್ಲಿಕಾರ್ಜುನ್ ಎಸ್. ಪಾಟೀಲ್.
ಭಾಲ್ಕಿ:ನ.6:ಭಾರತ ಜ್ಞಾನದ ಬೆಳಕನ್ನು ಜಗತ್ತಿನೆಲ್ಲೇಡೆ ಹರಡಿಸಿತ್ತು. ಅದು ಅಂತಜ್ರ್ಞಾನ . ಅದು ಭಾಹ್ಯ ಜಗತ್ತಿನ ಜ್ಞಾನ. ಜ್ಞಾನ ಇದು ಅಪ್ರತಿಮ ವಾದ ವಸ್ತು. ಅದು ದೀಪ ಇದ್ದ ಹಾಗೆ. ಪ್ರಣತೆ ಎಷ್ಟು ಬೆಲೆ ಬಾಳುವುದು ಎಂಬುದು ಮುಖ್ಯವಲ್ಲ ದೀಪ ಜ್ಯೋತಿ ಎಷ್ಟು ಪ್ರಕಾಶವಾಗಿ ಬೆಳಗುತ್ತದೆ ಎಂಬುದು ಮುಖ್ಯ. ಪ್ರಣತೆ ಎಷ್ಟು ಲಕ್ಷ ರೂಪಾಯಿಗಳದ್ದಾದರೂ ಇರಬಹುದು ಆದರೆ ಜ್ಯೋತಿ ಬೆಳಕನ್ನು ನೀಡದ ಹಣತೆ ವ್ಯರ್ಥ. ಹಾಗೆ ನಮ್ಮ ದೇಹ ಇದೊಂದು ಹಣತೆ ಇದ್ದಂಗೆ. ಅದರಲ್ಲಿ ಬತ್ತಿ ಎಣ್ಣೆ ಅದಕ್ಕೊಂದಿಷ್ಟು ಜೀವದ ಜ್ಯೋತಿ ಹತ್ತಿಸುವುದು. ಪ್ರಣತೆಗಳು ಭಿನ್ನ ಭಿನ್ನ ವಾಗಿವೆ ಅವುಗಳ ಬೆಲೆ ಭಿನ್ನ ಭಿನ್ನ ವಾಗಿವೆ, ಆದರೆ ಎಲ್ಲ ದೇಹ ಪ್ರಣತೆಗಳಲ್ಲಿ ಜೀವ ಜ್ಯೋತಿ ಮುಖ್ಯ.
ಅದು ಇದೆ ಎಂತಲೇ ಈ ದೇಹಕ್ಕೆ ಬೆಲೆ. ಯೋಚಿಸಿ ಜ್ಯೋತಿ ಒಳಗೆ ಜ್ಞಾನದ ಜ್ಯೋತಿಯಿಲ್ಲ ಯಾವುದಕ್ಕೆ ಬೆಲೆ ಹೇಳಿ.
ಎಸ್ಟದ್ಬುತವಾದ ಜೀವ ಜ್ಯೋತಿ ಜ್ಞಾನ ಜ್ಯೋತಿ. ನೂರು ವರ್ಷ ಹೇಗೆ ಬೇಳಗತದೆ ಅನ್ನೋದು ಮುಖ್ಯ ಅಲ್ಲ. ಆದರೆ ಆ ಜ್ಞಾನ ಕಣ್ಣಿನ ಮೂಲಕ ಮಾತಿನ ಮೂಲಕ ಹರಿದು ಜಗತ್ತನ್ನೆಲ್ಲ ಹರಡುತ್ತದೆ. ಇಂತಹ ಜ್ಞಾನದ ಮಹತ್ವವನ್ನು ಅರಿತುಕೊಂಡ ಮಹಾನುಭಾವರ ನಾಡು ಭಾರತ. ಇಲ್ಲಿನ ಜನ ಜ್ಞಾನನಿಷ್ಟರು. ಜ್ಞಾನ ಪ್ರಕಾಶದಲ್ಲಿ ಬರುವವರು.
ಭಾಹ್ಯ ರತಾಹ ಜಲಾಹ ಎತ್ರ ಎಸ್ತಿಂದೆಸೆ ತಂತೆ ಸಹಾ ದೇಶಾ ಭಾರತ.
ಸತ್ಯಾಮೃತಾಹ ಜಲಾಹ. ಬೆಳಕಿನಲ್ಲಿ ಬೆಳಕಿನಲ್ಲಿ ತನ್ಮಯರಾಗುವ ಜನ ಇರುವ ದೇಶ ಭಾರತ. ಭಾಹ್ಯ ಪ್ರಕಾಶ.
ಭಾರತೀಯರು ಎಂದರೆ ಜ್ಞಾನ ಪ್ರಕಾಶದಲ್ಲಿ ಆನಂದಿಸುವವರು.
ಅವರಿಗೆ ದ್ರವ್ಯ ಮಹತ್ವದಲ್ಲ ಜ್ಞಾನ ಬಹಳ ಮಹತ್ವದ್ದು. ಅವರ ಮನೆ ಸಣ್ಣದ್ದು ಇರಬಹುದು ಅವರ ಮನಸ್ಸಿನಲ್ಲಿ ಇರುವಂತಹ ಜ್ಞಾನದ ಬೆಳಕು ಇಂತಹ ಅದ್ಭುತ. ಅಂತಹ ಭಾರತ ನಮ್ಮದು. ಶರಣರನ್ನು ತೆಗೆದುಕೊಳ್ಳಿ ಸಂತರನ್ನೆ ತೆಗೆದುಕೊಳ್ಳಿ ವಿಜ್ಞಾನಿಗಳನ್ನು ತೆಗೆದುಕೊಳ್ಳಿ ಎಷ್ಟು ಅದ್ಬುತವಾದ ಜೀವನವನ್ನು ಸಾಗಿಸಿ ಹೋದರು ಎಂದರೆ ಅವರೇನು ಮಹಾಲೆ ಮಹಡಿಗಳನ್ನು ಕಟ್ಟಲಿಲ್ಲ ಮನಸ್ಸನ್ನು ಕಟ್ಟಿದರು. ಸಂಪತ್ತು ಸಂಪತ್ತನ್ನು ಕೂಡಿಸಲಿಲ್ಲ ಜ್ಞಾನದ ಸಂಪತ್ತನ್ನು ಕೂಡಿಸಿದರು. ಜಗತ್ತಿನ ಸೌಂದರ್ಯವನ್ನು ಅನುಭವಿಸಿದರು. ಅನುಭಾವವನ್ನು ಪಡೆದವರು. ಜ್ಞಾನವನ್ನು ಬೆಳೆಸಿದರು. ಶಬ್ದ ಶಬ್ದಗಳ ಮಧ್ಯದ ವಿಶ್ವ ಜ್ಞಾನವನ್ನು ಪಡೆದ ಅವರು ತುಂಬಿದ ಕೊಡವಾದರು. ಅಂತಹ ಭಾರತ ಅಂತಹ ಜನರು ಬದುಕಿದ ನಾಡಲ್ಲಿ ನಾವೆಲ್ಲ ಬದುಕುತ್ತಿದ್ದೇವೆ ಎಂಬುದೆ ನಮ್ಮ ಪುಣ್ಯ.
ಬೆಳಕಿನ ನಾಡು, ವ್ಯಕ್ತಿಗಳು ನೋಡಿದರೂ ನೋಡುವ ನೋಟದ ಜ್ಞಾನವನ್ನು ಹೆಚ್ಚಿಸಿದ್ದರು. ಮಾತನಾಡಿದರು ಮಾತಿನ ಶಬ್ದದ ಮಹತ್ವವನ್ನು ಜ್ಞಾನದ ಮಹತ್ವವನ್ನು ಇತ್ತು ಅರಿಸಿದರು. ಅಂತಹ ಮಾತುಗಳಿಗೆ ನಾವು ಜ್ಯೋತಿಲಿರ್ಂಗ ಅಂತೀವಿ. ಮಾತು ಅನ್ನೊದೆ ಜ್ಯೋತಿಲಿರ್ಂಗ. ಅದರಲ್ಲಿ ಜ್ಞಾನ ತುಂಬಿದೆ ಅದರಲ್ಲಿ ಜ್ಞಾನದ ಬೆಳಕಿದೆ. ಅದರಲ್ಲಿ ಆನಂದದ ಸೌರಭ ಇದೆ. ಅದರಲ್ಲಿ ಅನುಭಾವ ಇದೆ. ಅಂತಹ ಸುಂದರ ಸುಂದರ ಮಾತುಗಳನ್ನ ಆಡಿದವರು ಭಾರತೀಯರು.
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ ಒ0ದರಗಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥಾ”

‘ಕರಿಯನಿತ್ತಡೆ ಒಲ್ಲೆ’ – ಇಲ್ಲಿ ಕರಿ ಎ0ದರೆ ಆನೆ. ಆನೆ ಅಧಿಕಾರದ ಸ0ಕೇತ. ಶರಣರು ಅದನ್ನು ಒಲ್ಲೆ ಎನ್ನುತ್ತಾರೆ. ಮನಸ್ಸನ್ನು ಸಾರ್ವಕಾಲಿಕವಾಗಿ ನಿರ0ತರ ಮುತ್ತುವ ಆಮಿಷಗಳನ್ನು ತಿರಸ್ಕರಿಸಬೇಕಾದರೆ ನಮ್ಮಲ್ಲಿ ಆ0ತರಿಕ ಸ್ವಾತ0ತ್ರ್ಯವಿರಬೇಕು. ಇಲ್ಲದಿದ್ದರೆ ಎದುರಾಗುವ ಎಲ್ಲಾ ಆಕರ್ಷಣೆಗೆ ನಾವು ಬಲಿಯಾಗುತ್ತೇವೆ. ಇಲ್ಲಿ ಜೇಡರ ದಾಸಿಮಯ್ಯನವರಿಗೆ ಬೇಕಾಗಿರುವುದು ಅಧಿಕಾರವಲ್ಲ. ಆದ್ದರಿ0ದಲೇ ಸಾರಾ ಸಗಟಾಗಿ ಅಧಿಕಾರ ಒಲ್ಲೆ ಎ0ದು ಅದರಿಂದ ವಿಮುಖರಾಗಿಬಿಡುತ್ತಾರೆ.
ಜೇಡರ ದಾಸಿಮಯ್ಯನವರಿಗೆ ಯಾವುದೇ ಸಿರಿ ಬೇಡ, ಯಾವುದೇ ಅರಸುತನ ಇಲ್ಲವೇ ಆಳುವ ಒಡೆತನ ಬೇಡ! ಜೇಡರ ದಾಸಿಮಯ್ಯ ಇಟ್ಟುಕೊಂಡ ಗುರಿಗೆ ಇದರ ಅವಶ್ಯಕತೆಯಿಲ್ಲ, ಅದಕ್ಕೇ ಇದು ಬೇಡ! ನೋಡಿ ಹೇಗಿದೆ ನೋಡಿ ಹೇಗಿದೆ ಅವರ ಮನಸ್ಸಿನ ಜ್ಯೋತಿಯ ಶಕ್ತಿ. ಅವರು ಕೇಳುತ್ತಾರೆ. ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆಯಿತ್ತಡೆ’ – ಇದೇ ಜೇಡರ ದಾಸಿಮಯ್ಯ ಬಯಸುತ್ತಿರುವ ಅಧಿಕಾರ, ಸಿರಿ ಹಾಗೂ ಅರಸುತನಕ್ಕಿಂತ ಮಿಗಿಲಾದ ಆಸ್ತಿ! ಇದೇ ಅವರಿಗೆ ಮುಕ್ತಿಯ ಮಾರ್ಗ! ಶರಣರ ವಚನಗಳೇ ಜೇಡರ ದಾಸಿಮಯ್ಯನವರಿಗೆ ಆಂತರಿಕ ಸ್ವಾತಂತ್ರ್ಯವನ್ನು ತಂದುಕೊಡುವುದಲ್ಲದೇ ಜೀವನದ ಉದಾತ್ತೀಕರಣದ ಮಾರ್ಗ ಏಕೆಂದರೆ ಅವರು ಮುಂದುವರೆದು ಹೇಳುತ್ತಾರೆ ‘ನಿಮ್ಮನಿತ್ತೆ ಕಾಣಾ ರಾಮನಾಥಾ’
ಸಾಕು ಆ ಕ್ಷಣ ಅಷ್ಟು ಸಾಕು.
ಒಂದು ತಕ್ಕಡಿಯಲ್ಲಿ ಜಗತ್ತಿನ ಅಷ್ಟೈಶ್ವರ್ಯ ಒಂದುಕಡೆ ಮತ್ತೊಂದು ಕಡೆ ಬಲ್ಲವರ ಶರಣರ ಸೂಳ್ನುಡಿಯ ಒಳ್ಳೆಯ ಮಾತುಗಳನ್ನು ವಚನ ಇನ್ನೊಂದು ಕಡೆ ಹಾಕಿದಾಗ ಅದರ ಮಹತ್ವ ಅರಿವಾಗುತ್ತದೆ. ಈ ಪರಡೆ ಮೇಲೇಳುವುದಿಲ್ಲ. ವಚನಗಳ ಮಹತ್ವ ಅಷ್ಟು . ನನಗೇನು ಬೇಡ
ಆನೆ ಬೇಡ ರಾಜ್ಯ ಬೇಡ ಏನು ಬೇಡ ನನಗೆ ಬೆಳಕಿನ ಮಾತುಗಳನ್ನು ಕೊಡು ಸಾಕು ಎಂದು ಜೇಡರ ದಾಸಿಮಯ್ಯ ಕೇಳಿಕೊಳ್ಳುತ್ತಾನೆ. ಅವರು ಸುಮ್ನೆ ತಪಸ್ಸು ಮಾಡಲಿಲ್ಲ ಅವರು ಕಾಯಕ ಮಾಡುತ್ತಾ ತಪಸ್ಸು ಮಾಡಿದರು. ಬಟ್ಟೆ ನೆಯಿಗೆ ಮಾಡುತ್ತಾ ತಪಸ್ಸು ಮಾಡಿದರು. ಜ್ಞಾನವನ್ನು ಪಡಿಯಲಿಕ್ಕೆ ಬರಿ ತಪಸ್ಸು ಮುಖ್ಯ ಅಲ್ಲ ಅವರೇನು ಸಿರಿವಂತ ರಲ್ಲ ಅವ್ರು ತಮ್ಮ ಬಟ್ಟೆ ನೇಯುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ತಪಸ್ಸು ಮಾಡಿದರು. ಅಂತಹ ಸುಂದರ ಭಾರತ ನಮ್ಮದು. ಶರಣರ ಮಾತಿನೊಳಗಿನ ಮಹತ್ವವನ್ನು ಅರಿಯಬೇಕು. ಹೇಗೆ ವಿಜ್ಞಾನಿಗಳು ಸಣ್ಣ ಸಣ್ಣ ಅಂಶಗಳನ್ನು ಗುರುತಿಸಿ ತಮ್ಮ ಮಾತಿನ ಮೂಲಕ ಅವುಗಳನ್ನು ಜಗತ್ತಿಗೆ ತೋರಿಸಿದರು ಹಾಗೆಯ ಶರಣರು ತತ್ವಜ್ಞಾನಿಗಳು ಸಣ್ಣ ಸಣ್ಣ ಮಾತನಾಡಿ ಜಗತ್ತನ್ನು ದೇವರ ಎತ್ತರಕ್ಕೆ ಏರಿಸಿದರು. ಅಷ್ಟು ಅದ್ಬುತವಾದ ಮಾತು. ಆ ಮಾತಿನಲ್ಲಿ ಅಷ್ಟು ಶಕ್ತಿಯಿದೆ. ಅದಕ್ಕೆ ಮಂತ್ರ ಅನ್ನೋದು. ಮಂತ್ರ ಅಂದರೆ ಯಾವ ಭಾಷೆ ಯಾವ ಮಾತು ಅದು ನಮ್ಮ ಮನಸ್ಸಿನ ಜಗತ್ತಿನ ರಹಸ್ಯವನ್ನು ಭೇದಿಸಿ ಮಹತವ್ವನ್ನು ಅರಿವು ಮಾಡಿ ಕೊಡುತ್ತದೆಯೋ ಅದೇ ಮಂತ್ರ. ಸಂಪತ್ತು ನಾಶ ವಾಗಬಹುದು ಆದರೆ ಮಾತು ಒಂದು ಒಳ್ಳೆ ಮಾತು ನಾಶವಾಗುವುದಿಲ್ಲ . ಇಲ್ಲಿ ಯಾರೂ ಬಡವರಲ್ಲ ಮಾತು ಒಂದು ಚನ್ನಾಗಿ ಇತ್ತು ಅಂದರೆ ನಮ್ಮಷ್ಟು ಸಿರಿವಂತರು ಬೇರೆ ಯಾರೂ ಇಲ್ಲ. ಐನ್ ಸ್ಟೈನ್ ಆತ ಬಾಹ್ಯ ಸಿರಿವಂತ ಇರಲಿಲ್ಲ ಆತನ ಜ್ಞಾನ ಜ್ಯೋತಿ ಮಾತು ಸಿರಿತನ ಇತ್ತು. ಜಗತ್ತನ್ನೇ ಬದಲಿಸಿತು ಆ ಒಂದು ಸೂತ್ರ. ಬೆಳಕಿನ ಸೂತ್ರ. ಹಾಗೆಯೇ ಜಗತ್ತನ್ನೇ ದೇವನ ಎತ್ತರಕ್ಕೆ ಏರಿಸುವ ಮಾತು. ಅದಕ್ಕೆ ಅವರು ಜೇಡರ ದಾಸಿಮಯ್ಯ ಹೇಳತರ ಅರೆಗಳಿಗೆ ಇತ್ತರೆ ಸಾಕು ನಿಮ್ಮನ್ನೇ ಇತ್ತಹಾಗೆ ಕಾಣಾ ರಾಮನಾಥ. ಹಾಗೆ ನಿಮ್ಮ ಎದೆಯೊಳಗೆ ಎಲ್ಲ ಬಲ್ಲವರ ಶರಣರ ವಚನಗಳು ಮಾತುಗಳು ಹೀಗೆ ಒಲಿತಾ ಇರುವುದರಿಂದ ನೀವೇ ಶರಣರು. ನೀವೇ ಸಂತರು.
ಸಂಗ್ರಹ: ಸಿದ್ದಲಿಂಗ ಎಸ್. ಮಠಪತಿ ಉಚ್ಛಾ ತಾ. ಭಾಲ್ಕಿ ಜಿ. ಬೀದರ