ಮಾತೃ ಮಂಡಳಿಯಿಂದ ವಿವೇಕಾನಂದ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.12: ನಗರದ ಮಾತೃ ಮಹಿಳಾ ಮಂಡಳಿಯವರು  ಸ್ವಾಮಿ ವಿವೇಕಾನಂದ ಜಯಂತಿ  ಅಂಗವಾಗಿ ಇಂದು ಪಟೇಲ್ ನಗರದ ಸರ್ಕಾರ ಶಾಲೆಯಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷೆ ಕೆ. ಪುಷ್ಪ ಚಂದ್ರಶೇಖರ್ ಅವರು ಸ್ವಾಮಿ ವಿವೇಕಾನಂದ ಅವರ ಜೀವನದ ಬಗ್ಗೆ ತಿಳಿಸುತ್ತ.  ಚಿಕಾಗೋದಲ್ಲಿ ಅವರು ಮಾಡಿದ ಭಾಷಣ  ಹಾಗೂ ನಮ್ಮ ಭಾರತ ದೇಶದ ಮಹತ್ವವನ್ನು‌. ಅವರು ಹೇಗೆ ಉನ್ನತ ಸ್ಥಾನದಲ್ಲಿ ಇರಲಿಕ್ಕೆ ಎಷ್ಟೆಲ್ಲ ಪ್ರಯತ್ನ ಮಾಡಿದರು.
ನಮ್ಮ ಸಂಸ್ಕೃತಿ, ರಾಮಾಯಣ, ಮಹಾಭಾರತ ಬಗ್ಗೆ ಎಲ್ಲಾ ದೇಶದಲ್ಲಿ ಪ್ರಚುರಪಡಿಸಿದರು. ಇದರಿಂದ ನಮ್ಮ ಭಾರತ ದೇಶದ ಸ್ಥಾನ ಮಾನ ಹೆಚ್ಚಾಗಿದೆಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು