ಮಾತೃ ಭಾಷೆಗಳೊಂದಿಗೆ ಆಂಗ್ಲ ಭಾಷೆಗು ಆದ್ಯತೆ ನೀಡಿ:ಸಾಗರ ಖಂಡ್ರೆ

ಬೀದರ:ಫೆ.25:ವಿದ್ಯಾರ್ಥಿ ಗಳು ತಮ್ಮ ಮಾತೃ ಭಾಷೆಯೊಂದಿಗೆ ಆಂಗ್ಲ ಭಾಷೆ ಸೇರಿದಂತೆ ಅನ್ಯ ಭಾಷೆಗಳ ಜ್ಞಾನ ಪಡೆಯವದು ಅಗತ್ಯವಿದೆ ಎಂದು ಕಾಂಗ್ರಸ್ ನ ಎನ್.ಎಸ್.ಯು.ಐ.ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರ ಖಂಡ್ರೆ ತಿಳಿಸಿದರು.
ಬೀದರ್ ತಾಲ್ಲೂಕಿನ ಕೋಳಾರ ಕೆ ಗ್ರಾಮದ ಹೊರವಲಯದಲಿನ ಸಂಸ್ಕಾರ ಇಂಟರ್ ನ್ಯಾಷಲ್ ಸ್ಕೂಲ್ ನಲಿ ಶನಿವಾರ ನಡೆದ ಹತ್ತನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ,ಅಂತರಾಷ್ಟ್ರೀಯ ಮಟ್ಟದಲ್ಕಿ ನಡೆಯವ ಸ್ಫರಧಾತ್ಮಕ ಪರೀಕ್ಷೆ ಎದುರಿಸಲು ಆಂಗ್ಲ ಭಾಷೆ ಕಲಿಯುವದು ಅನಿವಾರ್ಯ ವಾಗಿದೆ ಎಂದರು.
ಮಕ್ಕಳ ವಿಷಯಗಳ ಆಯ್ಕೆಯಲ್ಲಿ ಸ್ವಾತಂತ್ರ ನೀಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದ ಅವರು ಅನೇಕ ವಿದ್ಯಾರ್ಥಿ ಗಳು ತಮ್ಮ ಆಸಕ್ತಿ ಇರುವ ವಿಷಯಕ್ಕೆ ಸ್ವಾತಂತ್ರ ನೀಡದೆ ಪಾಲಕರ ಒತ್ತಡದಿಂದ ಬೇರೆ ವಿಷಯಗಳು ತೆಗೆದುಕೊಂಡು ತಮ್ಮ ಅಭ್ಯಾಸವನ್ನು ಮಧ್ಯದಲ್ಲಿ ಕೈಬಿಟ್ಟು ಕಷ್ಟದಲ್ಲಿ ಜಿವನ ಕಳೆಯುತಿದ್ದಾರೆ ಎಂದು ಹೇಳಿದರು.
ಮಾಹಿತಿ ತಂತ್ರ ಜ್ಞಾನ ಯುಗದಲ್ಲಿ ಪಠ್ಯಪುಸ್ತಕದ ಜ್ಞಾನದ ಜೋತೆಯಲ್ಲಿ ಎಲ್ಲ ವಿಷಯಗಳ ಜ್ಞಾನಪಡೆಯುವದು ಅನಿವಾರ್ಯ ಇದೆ ಎಂದರು.
ಶಿಕ್ಷಣದ ಜೋತೆಯಲ್ಲಿ ಕ್ರೀಡೆಗಳಿಗೂ ಆದ್ಯತೆ ನೀಡಬೇಕು.ಕ್ರಿಡೆಗಳಿಂದ ದೈಹಿಕ,ಮಾನಸಿಕ ಆರೊಗ್ಯವಂತನಾಗಿರುತ್ತಾನೆ.ಉತ್ತಮ ಆರೋಗ್ಯವಿದ್ದಾಗ ಮಾತ್ರ ಜೀವನದಲಿ ಏನು ಬೇಕಾದರು ಸಾಧನೆ ಮಾಡಲು ಸಾಧ್ಯವಿದೆ ಹೇಳಿದರು.
ಶಿಕ್ಷಣ ಇಲಾಖೆ ನಿವ್ರತ ಅಧಿಕಾರಿ ಡಾ: ರಘುನಾತ ಅವರು ಮಾತನಾಡಿ ಒಬ್ಬ ವ್ಯಕ್ತಿಯಲ್ಲಿ ಆಚಾರ,ವಿಚಾರ.ಸಂಸ್ಕಾರ ಸಮನ್ವಯವಾಗಿದ್ದಲಿ ಮಾತ್ರ ಸವಾರ್ಂಗೀಣಾಭವ್ರದ್ದಿಯಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಇವತ್ತು ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಹಣ ಸಂಪಾದನೆ ಮಾಡುತಿದ್ದಾರೆ ಆದರೆ ಆಚಾರ , ವಿಚಾರ,ಸಂಸ್ಕಾರದ ಕೊರತೆಯಿಂದಾಗಿ ಬದುಕಿನಲ್ಲಿ ಅನೇಕ ರೀತಿ ಕಷ್ಟವನ್ನು ಎದುರಿಸುತಿದ್ದಾರೆ ಎಂದರು.
ಬೀದರ್ ನಗರದ ಶಾಲೆಗಳಲ್ಲಿಯೇ ಮಕ್ಕಳ ಸವಾರ್ಂಗೀಣಾಭಿವ್ರದ್ದಿಗೆ ಅತ್ತ್ಯುತ್ತಮ ಶಿಕ್ಷಣ ಕೊಡುತ್ತಿರುವದು ಸಂಸ್ಕಾರ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ತಿಳಿಸಿದರು.
ಕೇವಲ ಮಕ್ಕಳ ಪಠ್ಯಪುಸ್ತಕದ ಜ್ಞಾನಕ್ಕೆ ಸಿಮಿತವಾಗದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯದಲ್ಲಿ ಮಕ್ಕಳು ಯಾವದೆ ರೀತಿ ಸಮಸ್ಯೆಯಾಗದ ರೀತಿಯಲ್ಲಿ ಜ್ಞಾನವನ್ನು ಧಾರೆ ಎರೆಯುತಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ: ಅಮರ ಎರೋಳಕರ ಮಾತನಾಡಿ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ಪಡೆದು ಉತ್ತಮ ಶಿಕ್ಷಣ ಪಡೆಯಲಿಕೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಶಿಕ್ಷಕರು ,ಸಿಬ್ಬಂದಿಗಳ ಹಗಲಿರಳು ಶ್ರಮ ಹಾಗೂ ಅವರ ಸಹಕಾರದಿಂದಾಗಿ ಮೂನ್ನರಕ್ಕು ಹೆಚ್ಚಿನ ಮಕ್ಕಳು ಸಂಸ್ಥೆಯಲ್ಲಿ ಅಭ್ಯಾಷ ಮಾಡುತಿದ್ದಾರೆ ಎಂದರು.
ಶಿಕ್ಷಕಿ ಲಕ್ಷ್ಮಿ ಗಾದಗಿ ಸಂಚಾಲನೆ ಮಾಡಿದರು.ಅನುಪಮ ಎರೋಳಕರ್ ಸ್ವಾಗತಿಸಿದರು.
ವೇದಿಕೆ ಮೇಲೆ ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ,ಅವಿನಾಶ ಎರಳೊಕರ,ಶ್ರಿಮತಿ ಅನೂಪಮ ಏರಳೊಕರ,ಆಡಳಿತಾಧಿಕಾರಿ ಶ್ರೀ ಮತಿ ಸರೋಜಾ ಅರಳಿ,ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಇದೆ ವೇಳೆ ಪ್ರಭಂಧ ಸ್ಪರ್ಧೆ ಹಾಗೂ ಕ್ರೀಡೆಗಳಲ್ಲಿ ವಿಜೆತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿದರು.
ತಡ ರಾತ್ರಿಯವರಗೆ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.