ಮಾತೃ ಭಾಷಾ ಆಪ್ ಬಳಸಿ, ಪ್ರಶಸ್ತಿ ಗೆಲ್ಲಿ

ವಿಜಯಪುರ.ಮಾ೩೧:ನೇಟಿವ್ ಡ್ರೀಮ್ಸ್ ಟೆಕ್ನಾಲಜೀಸ್ ಸಂಸ್ಥೆಯಿಂದ ಮಾತೃಭಾಷಾ ಆಪ್ ನಲ್ಲಿ ೫ ನೇ ತರಗತಿಯಿಂದ – ೧೦ ನೇ ತರಗತಿ ಮಕ್ಕಳಿಗೆ “ಕನೆಕ್ಟ್ ಕನ್ನಡ – ಅನ್ಲಾಕ್ ಕರ್ನಾಟಕ” ಎಂಬ ಕಾರ್ಯಕ್ರಮವನ್ನು ೨೦೨೪, ಏಪ್ರಿಲ್ ಒಂದರಿಂದ ಸಾದರ ಪಡಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಮಕ್ಕಳಿಗೆ ನಮ್ಮ ನಾಡು, ನುಡಿ, ಇತಿಹಾಸದ ಬಗ್ಗೆ ಅರಿವು ಮತ್ತು ಒಲವು ಮೂಡಿಸುವುದಾಗಿದ್ದು ಅದಕ್ಕಾಗಿ ಅವಶ್ಯವಿರುವ “ಪರಿಕರ, ಪರಿಸರ ಮತ್ತು ಪ್ರೋತ್ಸಾಹ” ನೀಡುವುದಾಗಿದೆ ಎಂದು ನೇಟಿವ್ ಡ್ರೀಮ್ಸ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ(ವಿಜಯಪುರ ಮೂಲದ) ಆರ್.ಚಂದನ್ ಪ್ರಕಟಣೆಯಲ್ಲಿ ತಿಳಿಸಿರುವರು.
ಇದು ಏಪ್ರಿಲ್ ೨೦೨೪ ನಿಂದ-ನವೆಂಬರ್ ೨೦೨೪ ವರೆಗೂ ನಡೆಯುವ ಉಚಿತ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳು ಗೆಲ್ಲುವ ಮೊದಲ ಮೂರು ಮಕ್ಕಳು ರೂ ೫೦೦೦, ರೂ ೩೦೦೦, ರೂ ೨೦೦೦ ಬಹುಮಾನವನ್ನು ಪಡೆಯುತ್ತಾರೆ ಮತ್ತು ನವೆಂಬರ್ ನ ರಾಜ್ಯ ಮಟ್ಟದ ಪ್ರಿ – ಫೈನಲ್ ಗೆ ಅರ್ಹರಾಗುತ್ತಾರೆ. ಕನೆಕ್ಟ್ ಕನ್ನಡ – ಅನ್ಲಾಕ್ ಕರ್ನಾಟಕ ಫೈನಲ್ ನವೆಂಬರ್ ನಲ್ಲಿ ನಡೆಯಲಿದ್ದು, ಅದರಲ್ಲಿ ಗೆಲ್ಲುವ ಮಗುವಿಗೆ ರೂ ೫೧,೦೦೦ ಮತ್ತು ವಿದ್ಯಾ ಶ್ರೇಷ್ಠ ಪ್ರಶಸ್ತಿ, ಶಾಲೆಗೆ ರೂ ೩,೧೦,೦೦೦ ಬಹುಮಾನವನ್ನು ಮತ್ತು ವಿದ್ಯಾ ವಿಭೂಷಣ ಪ್ರಶಸ್ತಿ ನಿಗದಿ ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಇಚ್ಛಿಸುವ ಶಾಲೆಗಳು ನಮ್ಮ ವಾಟ್ಸಾಪ್ ನಂಬರ್ +೯೧ ೬೩೬೬ ೯೭೫ ೧೫೧ ಗೆ ಸಂದೇಶ ಕಳುಹಿಸಿ ಅರ್ಜಿ ಪಡೆಯಬಹುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ನಮ್ಮ ಮಾತೃಭಾಷಾ ಆಪ್ ಡೌನೋಡ್ ಮಾಡಿ ನೋಂದಾಯಿಸಿಕೊಳ್ಳಬಹುದು.