ಮಾತೃ ಪ್ರಧಾನ ಸಮಾಜ ಸಂಕಲ್ಪ ಇಂದಿನ ಅಗತ್ಯ  :ಕೊಟ್ರಪ್ಪ ತೋಟದ

ಸಂಜೆವಾಣಿ ವಾರ್ತೆ
ಕುಕನೂರು, ಜ.19:  ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ನಿರಂತರ ದುಡಿಮೆ,ಮಕ್ಕಳ ಲಾಲನೆ ಪೋಷಣೆ ,ಕುಟುಂಬ ನಿವ ೯ಹಣೆ ಮುಂತಾದ ಕೆಲಸ ಕಾಯ೯ಗಳ ಒತ್ತಡದ ನಡುವೆ ಜೀವನ ನಡೆಸುತ್ತಿದ್ದಾಳೆ ಆ ತಾಯಿಯ ಪರಿಶ್ರಮಕೆ ಎಲ್ಲ ಕ್ಷೇತ್ರಗಳಲ್ಲಿ ಮಾತೃ ಪ್ರಧಾನ ಸಮಾಜ ಸಂಕಲ್ಪ ತೊಡುವ ಹೊಣೆ ಎಲ್ಲರ ಮೇಲಿದೇ ಎಂದು ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ಬಣ್ಣಿಸಿದರು. ಅವರು ಬುಧವಾರ ಇಲ್ಲಿಯ ಶ್ರೀ ಅನ್ನದಾನೇಶ್ವರ ಮಠ ದ ಆವರಣದಲ್ಲಿ ಪೂಜ್ಯ ಮಹದೇವ್ ದೇವರ ಪಟ್ಟಾಭಿಷೇಕ ನಿಮಿತ್ತ ನಡೆದ ಮಹಿಳಾ ಸಮಾವೇಶ ದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮಹಿಳೆ ಸತತ ಶ್ರಮ ಜೀವಿಯಾಗಿ ತನ್ನ ಹಕ್ಕು ಜವಾಬ್ದಾರಿಗಳ ಬಗ್ಗೆ ಕೇವಲ ವೆದಿಕೆಯಲ್ಲಿ ವಿಷಯ ಹಂಚಿಕೊಂಡರೆ ಸಾಲುವುದಿಲ್ಲ.ಆಕೆಗೆ ಮುಖ್ಯವಾಹಿನಿ ಗೆ ಬರಲು ಎಲ್ಲ ರೀತಿಯ ಅವಕಾಶ ಗಳನ್ನು ಕಲ್ಪಿಸಲು ಎಲ್ಲರೂ ಸಹಕರಿಸಬೇಕೆಂದು ಅಭಿಪ್ರಾಯ ಪಟ್ಟ ವರು ಪ್ರಸ್ತುತ ದಿನಗಳಲ್ಲಿ ಶ್ರೀ ಅನ್ನದಾನೇಶ್ವರ ಮಠವು ಸದಾ ವಿದಾಯ ಕ ಚಟುವಟಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಸಂತಸದ ವಿಷಯ ಎಂದು ಹೇಳಿದರು  ಏಚ್.ಎಸ್.ವೆಂಕಟಾಪುರ ದ ಪೂಜ್ಯ ಶ್ರೀ ಗುರು ಸಿದ್ದೇಶ್ವೇ ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸೋಮ ಶೇಖರ ಹಿರೇಮಠ್ ಸೇರಿದಂತೆ ಅನೇಕರು ಹಾಜರಿದ್ದರು. ನಂತರ ವಿವಿಧ ಮಹಿಳಾ ಸಂಘ ಗಳ ಪದಾಧಿಕಾರಿ ಗಳಿಂದ ಸಾಂಸ್ಕೃತಿಕ ಕಾಯ೯ಕ್ರಮ ಜರುಗಿದವು