ಮಾತೃ ದೇವೋಭವ ಕಾರ್ಯಕ್ರಮಕ್ಕೆ   ನಾರಾ ಭರತ್ ರೆಡ್ಡಿ ಚಾಲನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ. ಮಾ.08: ನಗರದ ಗರ್ಭಿಣಿಯರಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಯುವ ನಾಯಕ  ನಾರಾ ಭಾರತ್ ರೆಡ್ಡಿ ಅವರು ಮಾತೃ ದೇವೋಭವ ಕಾರ್ಯಕ್ರಮ ಆರಂಭಿಸಿದ್ದು, ಇಂದು ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ತಮ್ಮ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  100 ಜನ ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕಿಟ್ ಹಾಗು 5000 ರೂಪಾಯಿಗಳ ಸಹಾಯಧನವನ್ನು  ಭಾರತ್ ರೆಡ್ಡಿ ವಿತರಿಸಿದರು.
ಈ ಪೌಷ್ಟಿಕ ಆಹಾರದ ಕಿಟ್, ಎರಡು ಹಾರ್ಲಿಕ್ಸ್ ಬಾಟಲ್, ಎರಡು ಖರ್ಜೂರದ ಪ್ಯಾಕೆಟ್, ಅರ್ಧ ಕೆಜಿ ತುಪ್ಪ ಮತ್ತು ನ್ಯೂಟ್ರಿಷನ್ ಬಿಸ್ಕೆಟ್ ಪ್ಯಾಕೆಟ್ ಗಳನ್ನೂ ಒಳಗೊಂಡಿದೆ. 
ಕಳೆದ ಎರಡು ಮೂರೂ ತಿಂಗಳಿಂದ ನಡೆಸಿದ ಮನೆಮನೆಗೂ ಭರತ್ ಅಭಿಯಾನದ ವೇಳೆ ಬಳ್ಳಾರಿ ನಗರದ ಗರ್ಭಿಣಿಯರು ಪೌಷ್ಟಿಕ ಆಹಾರದ ಕೊರೆತೆ ಹಾಗು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಮನಿಸಿದ್ದ ಅವರು  ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಿದ್ದಾರೆ