ಮಾತೃಭಾಷೆ ಸಾಂಸ್ಕøತಿಕ ಅನನ್ಯತೆಯ ಕುರುಹು

ಕಲಬುರಗಿ:ಫೆ.21: ಮಾತು ಎಂಬುದು ದೇವರು ಯಾವ ಜೀವಿಗೂ ನೀಡದೆ, ಮನುಷ್ಯನಿಗೆ ಮಾತ್ರ ನೀಡಿದ ವಿಶೇಷ ವರವಾಗಿದೆ. ಮಾನವ ಇದರಿಂದ ತನ್ನ ಆಲೋಚನೆ, ಭಾವನೆಗಳನ್ನು ಹೇಳಿ ಶ್ರೇಷ್ಠ ಜೀವಿ ಎನಿಸಿದ್ದಾನೆ. ಮನುಷ್ಯ ತನ್ನಲ್ಲಿರುವ ಯಾವುದೇ ಅಂಶಗಳನ್ನು ಅಭಿವ್ಯಕ್ತಿಪಡಿಸಲು ‘ಭಾಷೆ’ಯು ತುಂಬಾ ಅಗತ್ಯವಾಗಿದೆ. ರಕ್ತ ಸಂಬಂಧದಿಂದ ಹುಟ್ಟಿ ಬೆಳೆಯುವ, ಸಂಸ್ಕøತಿಯನ್ನು ಪ್ರತಿನಿಧಿಸುವ ಮಾತೃಭಾಷೆಯು ಪ್ರಮುಖವಾಗಿದ್ದು, ಮಾತೃ ಭಾಷೆಯನ್ನು ಹೃದಯದಿಂದ ಪ್ರೀತಿಸಿ, ಗೌರವಿಸಬೇಕು. ಮಾತೃಭಾಷೆಯು ಸಂಸ್ಕøತಿ, ಪರಂಪರೆಯ ಅನನ್ಯತೆಯ ಕುರುಹಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ರಾಮ ಮಂದಿರ ಸಮೀಪದಲ್ಲಿರುವ ‘ಕೊಹಿನೂರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜ್’ನಲ್ಲಿ ಜರುಗಿದ ‘ಅಂತಾರಾಷ್ಟ್ರೀಯ ಮಾತೃ ಭಾಷೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರತಿವರ್ಷ ‘ಫೆಬ್ರುವರಿ 21’ನ್ನು ‘ಅಂತಾರಾಷ್ಟ್ರೀಯ ಮಾತೃ ಭಾಷಾ ದಿನ’ವನ್ನಾಗಿ ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಬಹುಭಾಷೆ ಮತ್ತು ಬಹು ಸಂಸ್ಕøತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆಯನ್ನು ಮಾಡಲಾಗುತ್ತದೆ. 1999 ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು. ಇದರ ಮುಂದುವರೆದ ಭಾಗವಾಗಿ 2008ನ್ನು ‘ವಿಶ್ವ ಭಾಷೆಗಳ ವರ್ಷ’ಎಂದು ಆಚರಿಸಿತು. 2000 ರಿಂದ ಇದನ್ನು ಆಚರಿಸಲಾಗುತ್ತಿದೆ. 1952ರಲ್ಲಿ ಅಂದಿನ ಪಾಕಿಸ್ತಾನವಾಗಿದ್ದ, ಇಂದಿನ ಬಾಂಗ್ಲಾ ದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕೆಂದು ಹೋರಾಡಿ ವಿದ್ಯಾರ್ಥಿಗಳು ಹುತಾತ್ಮರಾದ ನೆನಪಿಗೆ ಈ ಆಚರಣೆಯನ್ನು ಮಾಡಲಾಗುತ್ತದೆ ಎಂದು ದಿನದ ಹಿನ್ನಲೆಯನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ ಮಾತಾನಾಡಿ, ಮೊಟ್ಟ ಮೊದಲ ತನ್ನ ತಾಯಿಯ ಮಡಿಲಲ್ಲಿ, ಕುಳಿತು ಕಲಿಯುವ ನುಡಿಯೇ ಮಾತೃಭಾಷೆಯಾಗಿದೆ. ಇದು ವ್ಯಕ್ತಿಯ ಹೃದಯದ ಭಾಷೆಯಾಗಿದೆ. ಒಬ್ಬರೊಬ್ಬರನ್ನು ಹತ್ತಿರ ತರುವ ಶಕ್ತಿ ಇದಕ್ಕಿದೆ. ವ್ಯಕ್ತಿ ಎಷ್ಟೇ ಪಾಂಡಿತ್ಯವನ್ನು ಪಡೆದರು ತನ್ನ ಮಾತೃಭಾಷೆಯಂತೆ ಸವಿಯಾಗಿ ಮಾತನಾಡಲು ಅಸಾಧ್ಯ. ಏಕೆಂದರೆ, ಅದು ರಕ್ತಗತವಾಗಿ ಬಂದಿರುವ ಭಾಷೆಯಾಗಿದೆ. ಮಗುವಿಗೆ ತಾಯಿಯ ಹಾಲು ಹೇಗೆ ಸತ್ವ ಹಾಗೂ ಪವಿತ್ರವೋ, ಹಾಗೆಯೇ ಪ್ರತಿಯೊಬ್ಬರಿಗೂ ‘ಮಾತೃಭಾಷೆ ಎಂಬುದು ಅಮೃತಕ್ಕೆ ಸಮಾನ’ವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಬಾಳ್ಳಿ, ಪ್ರಮುಖರಾದ ಬಸವರಾಜ ಪೊಲೀಸ್ ಪಾಟೀಲ, ಇಂದುಮತಿ, ಜ್ಯೋತಿ ಮಡಿವಾಳ, ದೇವಿಕಾ ರಾಣಿ, ಸತೀಶ್ ಪಾಟೀಲ ಸೇರಿದಂತೆ ಮತ್ತಿತರರಿದ್ದರು.