ಮಾತೃಭಾಷೆಯು ಸಂಸ್ಕøತಿ-ಆತ್ಮವಿಶ್ವಾಸದ ಪ್ರತೀಕ

ಇಂಡಿ:ಫೆ.23: ಮಾನವನ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಭಾಷೆ ಸಂವಹನ ಮಾಧ್ಯಮವಾಗಿ ಬೆಳೆದಿದೆ. ಭಾಷೆ ಇಂದು ವ್ಯಕ್ತಿ, ಸಮಾಜ, ಸಂಸ್ಕೃತಿಯನ್ನು ಗುರುತಿಸುವ ಮುಖ್ಯ ಅಂಶವಾಗಿ ಬೆಳವಣಿಗೆ ಕಂಡಿದೆ. ಮಾತೃಭಾಷೆಯ ಕಾಳಜಿ ಸದಾ ಇರಬೇಕು ಎಂದು ತಾಲೂಕ ಅಕ್ಷರ ದಾಸೋಹ ಅಧಿಕಾರಿಗಳಾದ ಮಲ್ಲಿಕಾರ್ಜುನ ಯರಗುದ್ರಿ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಮಾತೃಭಾಷಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ಮೂಲ ಯೋಚನೆಗಳೆಲ್ಲ ರೂಪುಗೊಳ್ಳುವುದು ಮಾತೃಭಾಷೆಯಲ್ಲಿ. ಚಂದದ ಭಾವನೆಗಳು ಹುಟ್ಟಿ, ಅವು ಮಾತಿನ ಅನುಭೂತಿಗೆ ನಿಲುಕುವುದು ಮಾತೃ ಭಾಷೆಯಲ್ಲಿ. ಹಾಗಾಗಿ ತಾಯ್ನುಡಿ ಎನ್ನುವುದು ಹೃದಯದ ಭಾಷೆಯಾಗಿದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಮಾತೃಭಾಷೆ ಮಗು ಕಲಿಯುವ ಮೊದಲ ಭಾಷೆ. ಭಾಷೆಯು ಪ್ರತಿಯೊಂದು ಸಂಸ್ಕೃತಿಯ ಆಸ್ತಿ. ಮಾತೃಭಾಷೆ ಆತ್ಮವಿಶ್ವಾಸದ ಪ್ರತೀಕ. ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸುವಲ್ಲಿ ಮಾತೃಭಾಷೆಯೇ ಬಹುಮುಖ್ಯ. ಮಾತೃಭಾಷೆ ಹುಟ್ಟಿನಿಂದ ಮಗು ತನ್ನದಾಗಿಸಿಕೊಳ್ಳುವ ಭಾಷೆ. ಮಕ್ಕಳು ಆಡುತ್ತಾ, ನೋಡುತ್ತಾ, ಮೈಗೂಡಿಸಿಕೊಳ್ಳುವ ಸಂವಹನದ ಬುನಾದಿಯೇ ಮಾತೃಭಾಷೆಯಾಗಿದೆ ಎಂದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಭಾಷೆಗಳು ನಾಶವಾದರೆ ನಾವು ಆ ಭಾಷೆಯ ಸಂಸ್ಕೃತಿ ಮತ್ತು ಎಲ್ಲ ಜ್ಞಾನ, ಸಂಪ್ರದಾಯಗಳನ್ನು ಕಳೆದುಕೆuಟಿಜeಜಿiಟಿeಜಳ್ಳುತ್ತೇವೆ. ಹಾಗಾಗಿ ಮಾತೃಭಾಷಾ ಸಂಸ್ಕೃತಿಯನ್ನು ಪೆÇ್ರೀತ್ಸಾಹಿಸಿ, ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕಿ ಎಸ್ ಪಿ ಪೂಜಾರಿ, ಡಿಎಡ್ ಪ್ರಶಿಕ್ಷಾಣಾರ್ಥಿಗಳಾದ ತೈಸಿನ್ ನದಾಫ್,ಸಾಲಿಯಾ ಶೇಖ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.