ಮಾತೃಭಾಷೆಯನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ:ಕಂದಕೂರ

ಸೈದಾಪುರ:ನ.2: ಮಾತೃಭಾಷೆಯನ್ನು ಮರೆತರೆ, ಹೆತ್ತ ತಾಯಿಯನ್ನು ಮರೆತಂತೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆಯ ಏಳ್ಗೆಗಾಗಿ ಶ್ರಮಿಸಬೇಕು ಎಂದು ಶಾಸಕರಾದ ನಾಗನಗೌಡ ಕಂದಕೂರ ಅಭಿಪ್ರಾಯಪಟ್ಟರು.

ಪಟ್ಟಣದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಲಯ ಕಸಾಪ ವತಿಯಿಂದ ಹಮ್ಮಿಕೊಂಡ 67ನೇ ಕರ್ನಾಟಕ ರಾಜ್ಯೋತ್ಯವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಸರ್ಕಾರಿ ಶಾಲೆಯ ಶಿಕ್ಷಕ ನಿಷ್ಠೆಯಿಂದ ಕಾರ್ಯನಿರ್ವಹಿಸಿದಾಗ ಕನ್ನಡ ಭಾಷೆ ಉಳಿಯುತ್ತದೆ ಎಂದರು. ಪಟ್ಟಣದಲ್ಲಿ ನಿರ್ಮಿಸುತ್ತಿರುವ ಕನ್ನಡ ಭವನಕ್ಕೆ ವೈಯಕ್ತಿಕ ಧನಸಾಹಯ ಮಾಡುವುದಾಗಿ ಭರವಸೆ ನೀಡಿದರು.

ಖ್ಯಾತ ಚಿಂತಕ ದಿನೇಶ ಅಮೀನಮಟ್ಟು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಭಾರತದಲ್ಲಿ ತನ್ನದೆಯಾದ ಇತಿಹಾಸದಿಂದ ಅತ್ಯಂತ ಶ್ರೀಮಂತ ಭಾಷಾ ಸಂಸ್ಕøತಿಯ ತೊಟ್ಟಿಲು ಹೊಂದಿರುವ ಕರ್ನಾಟಕ ರಾಜ್ಯದ ನಾಡು, ನುಡಿ, ಜಲ ಸಂರಕ್ಷಣೆಯು ಪ್ರತಿಯೊಬ್ಬ ಸಾಹಿತಿಗಳ ಮತ್ತು ಕನ್ನಡಿಗರ ಹೊಣೆಯಾಗಿದೆ. ಮಾತೃ ಭಾಷೆಯನ್ನು ಪ್ರಿತಿಸಿ ಗರ್ವದಿಂದ ಬಳಸಿ. ಇಂದು ಪಾಲಕರು ಆಂಗ್ಲ ಭಾಷೆಗೆ ಮಾರುಹೊಗಿ ಮಕ್ಕಳಲ್ಲಿನ ಸಾಮಾಜಿಕ ಸಂಸ್ಕøತಿಯ ಜವಬ್ದಾರಿಯನ್ನು ಮರೆಯುವಂತೆ ಮಾಡುತ್ತಿರುವುದು ಕನ್ನಡ ಭಾಷೆಗೆ ಕಂಟಕವಾಗಿದೆ. ನೆಲ, ಜಲ ವಿಷಯ ಬಂದಾಗ ದೊಡ್ಡ ಧ್ವನಿಯಲ್ಲಿ ರಾಜ್ಯದಲ್ಲಿರುವ ಸಾಹಿತಿಗಳು, ಕ್ರೀಡಾಪಟುಗಳು, ಮತ್ತು ಪ್ರಭಾವಿ ವ್ಯಕ್ತಿಗಳು ಪ್ರತಿಯೊಬ್ಬರು ಕೇಳುವಂತರಾಗಬೇಕು. ಮಾತೃ ಭಾಷೆಯಲ್ಲಿ ಕಲಿತ ಮಕ್ಕಳು ಜೀವನದಲ್ಲಿ ಪರಿಹಾರ ಕಂಡುಕೊಳ್ಳುವಂತಹ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದರು.

ನೂತನ ಕ.ಸಾ.ಪ ವಲಯಧ್ಯಕ್ಷ ಪದಗ್ರಹಣ:

ನೂತನವಾಗಿ ಆಯ್ಕೆಯಾದ ಸೈದಾಪುರ ವಲಯ ಕ.ಸಾ.ಪ ಅಧ್ಯಕ್ಷರಾಗಿ ಮಹಿಪಾಲರೆಡ್ಡಿ.ಸಿ ಪಾಟೀಲ್ ನ್ಯಾಯವಾದಿಗಳಿಗೆ, ನಿಕಟ ಪೂರ್ವ ಅಧ್ಯಕ್ಷ ಸಿದ್ದಲಿಂಗಪ್ಪ ಪಾಟೀಲ್ ಮುನಗಾಲ ಅಧಿಕಾರ ಹಸ್ತಾಂತರ ಮಾಡುವ ಮೂಲಕ ಶುಭಕೋರಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಯ ಸಿದ್ರಾಮರೆಡ್ಡಿ ಇಟಿಗಿ, ಗ್ರಾಪಂ ಅಧ್ಯಕ್ಷ ಮಾಳಪ್ಪ ಅರಿಕೇರಿ, ಕ.ಸಾ.ಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಜಿ.ಪಂ ಮಾಜಿ ಉಪಾಧ್ಯಕ್ಷ ಶರಣಿಕ ಕುಮಾರ ದೋಕಾ, ಮಾಜಿ ಎಪಿಎಮ್‍ಸಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ, ತಾಲೂಕ ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ, ಯೋಗೇಶ ಕುಮಾರ ದೋಕಾ, ಸುರೇಶ ಆನಂಪಲ್ಲಿ, ಲಿಂಗರೆಡ್ಡಿ ನಾಯಕ್, ಜಿ.ಎಂ.ಗುರುಪ್ರಸಾದ, ಮಲ್ಲಿಕಾರ್ಜುನ ಬಳೆ, ಬಸವಲಿಂಗಪ್ಪ ಮಲ್ಹಾರ, ಸಿದ್ರಾಮ ತೋಗಟವೀರ, ಕಮಲಾ ಎಮ್ ಕುಲಕರ್ಣಿ ಸೇರಿದಂತೆ ಇತರರಿದ್ದರು.