ಮಾತುಕತೆಗೆ ಬನ್ನಿ; ಕೇಂದ್ರದಿಂದ ಎರಡನೇ ಬಾರಿಗೆ ರೈತರಿಗೆ ಪತ್ರ

ನವದೆಹಲಿ, ಡಿ. 24- ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾತುಕತೆಗೆ ಬನ್ಜಿ ಎನ್ನುವ ಕೇಂದ್ರಸರ್ಕಾರದ ಆಹ್ವಾನಕ್ಕೆ ರೈತರು ಮತ್ತು ರೈತ ಸಂಘಟನೆಗಳು ಯಾವುದೇ ಬೆಲೆ ಕೊಡದ ಹಿನ್ನೆಲೆಯಲ್ಲಿ ಮತ್ತೆ ಕೇಂದ್ರ ಸರ್ಕಾರ ಮಾತುಕತೆಗೆ ಬರುವಂತೆ ಮನವಿ ಮಾಡಿದೆ.

ಮಾತುಕತೆಗೆ ಸಂಬಂಧಿಸಿದಂತೆ ಸಮಯ ದಿನಾಂಕ ನೀವೇ ನಿಗದಿ ಮಾಡಿ ,ನಿಮಗೆ ಸೂಕ್ತವಾದ ದಿನಾಂಕದಂದು ಚರ್ಚೆಗೆ ಬನ್ನಿ ಎಂದು ಕೇಂದ್ರ ಕೃಷಿ ಸಚಿವಾಲಯ ರೈತರಿಗೆ ಮಾಡಿರುವ ಮನವಿಯಲ್ಲಿ ತಿಳಿಸಿದೆ.

ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ 29 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ನಾಳೆ ಪ್ರಧಾನಿ ನರೇಂದ್ರ ಮೋದಿಯವರು ಆರು ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಲಿರುವ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವಾಲಯ ಮತ್ತೊಮ್ಮೆ ಮಾತುಕತೆಯ ಆಹ್ವಾನ ನೀಡಿದೆ.

ಈ ಸಂಬಂಧ ಐದು ಸುತ್ತಿನ ಮಾತುಕತೆಗಳು ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ನಡೆದಿದೆ ಆದರೂ ಯಾವುದೇ ಒಪ್ಪಂದಕ್ಕೆ ಬರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಆಹ್ವಾನವನ್ನು ರೈತರು ತಿರಸ್ಕರಿಸಿದ್ದರು.

ದಿನದಿಂದ ದಿನಕ್ಕೆ ರೈತರ ಹೋರಾಟ ದೇವರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವಾಲಯ ಮತ್ತೊಮ್ಮೆ ನಾಯಕರಿಗೆ ಮಾತುಕತೆಗೆ ಬನ್ನಿ ಎಂದು ಆಹ್ವಾನ ನೀಡಿದೆ.

ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ರೈತ ನಾಯಕರಿಗೆ ಕೇಂದ್ರ ಕೃಷಿ ಸಚಿವಾಲಯ ಮತ್ತೊಮ್ಮೆ ಪತ್ರ ಬರೆದು ಮಾತುಕತೆಗೆ ಸಮಯ ನಿಗದಿ ಪಡಿಸಿ ಎಂದು ಮನವಿ ಮಾಡಿದೆ.

ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು ರೈತರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರೈತರು ಮತ್ತು ರೈತ ನಾಯಕರು ತಮಗೆ ಸೂಕ್ತವಾದ ಸಮಯ ಮತ್ತು ದಿನಾಂಕ ನಿಗದಿ ಪಡಿಸಿದರೆ ಎಂದು ಸಚಿವರು ಮತ್ತು ಹಿರಿಯ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ