ಮಾತಿನ ಚಕಮಕಿ ಕೊಟ್ಟಿಗೆಗೆ ಬೆಂಕಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಘಟನೆ.

ಸಂಜೆವಾಣಿ ವಾರ್ತೆ
ಹೊಸಪೇಟೆ ಡಿ _05: ಜಮೀನು ವಿವಾದ ಹಿನ್ನಲೆ ದನದ ಕೊಟ್ಟಿಗೆ ಬೆಂಕಿ ಹಚ್ಚಿದ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ ಘಟನೆ ಜರುಗಿದೆ.


ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಪಟ್ಟಣದಲ್ಲಿ ಜರುಗಿದೆ.
ಅಂಜಿನಪ್ಪ ಎನ್ನುವರಿಗೆ ಸೇರಿದ ದನದ ಕೊಟ್ಟಿಗೆಗೆ ಬೆಂಕಿ.
ಗುಡಸಲಿಗೆ ಬೆಂಕಿ ಹಚ್ಚಿದ ಆರು ಜನರ ವಿರುದ್ದ ದೂರು ನೀಡಿದ ಅಂಜಿನಪ್ಪ.
ಏಕಾಏಕಿ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ‌.
ಮರ್ದಾನಸಾಬ್,ಇಮಾಂಬಿ,ಮಾಬುಸಾಬ್,ಶಬೀನಾ,ಹೈಯತ್,ಹುಸೇನ್ ಸಾಬ್ ವಿರುದ್ದ ಅಂಜಿನಪ್ಪ ಆರೋಪಿಸಿದ್ದು,
ಜಮೀನು ಖರೀದಿ ಮಾಡಿದ್ರೂ ಜಮೀನು ಬಿಟ್ಟು ಕೊಡದೆ ಮರ್ದಾನ್ ಸಾಬ್‌‌ ಕಿರುಕುಳ ನೀಡುತ್ತಿದ್ದಾರೆ.
ಜಮೀನು ವಿವಾದ ಹಿನ್ನಲೆ ನಮ್ಮನ್ನು ಕೊಲೆ ಮಾಡಲು ಯತ್ನಿಸಿದ್ದಾರೆಂದು ಅಂಜಿನಪ್ಪ ಆರೋಪ
ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಸಿದ್ದಾರೆನ್ನಲಾಗಿದೆ. ಅಂಜಿನಪ್ಪ ಮರ್ದಾನ್ ಸಾಬ್ ನಡುವೆ ಮಾತಿಗೆ ಮಾತು ಬೆಳೆದು ದನದ ಕೊಟ್ಟಿಗೆಗೆ ಬೆಂಕಿ ಹಚ್ಚಲಾಗಿದೆ. ಈ ಕುರಿತು
ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.