ಮಾತಾಪಿತರನ್ನು ಗೌರವದಿಂದ ಕಾಣುವ ಕಾರ್ಯವಾಗಬೇಕು:ಪಾಟೀಲ

????????????????????????????????????

ತಾಳಿಕೋಟೆ:ಜು.26: ಜನ್ಮ ನೀಡಿದ ತಂದೆ ತಾಯಿಯನ್ನು ಗೌರವಿಸುವ ಕಾರ್ಯವಾಗಬೇಕು ಅವರ ಸವಿನೆನಪನ್ನು ಮರಳಿಸಿ ಮೆಲಕು ಹಾಕುವಂತಹ ಕಾರ್ಯವಾಗಬೇಕು ಅವರ ಆಶಿರ್ವಾದ ಪಡೆದರೆ ಯಾವ ಆಪತ್ತು ಬರಲಾರದ್ದೆಂದು ಸ್ಥಳೀ ಶ್ರೀ ಸಂಗಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಚ್.ಎಸ್.ಪಾಟೀಲ ಅವರು ನುಡಿದರು.

ಸೋಮವಾರರಂದು ತಾಳಿಕೋಟೆ ತಾಲೂಕಾ ಕನ್ನಡ ಸಾಹಿತ್ಯ ಪರಿಷರ್ ಅವರ ವತಿಯಿಂದ ಸಂಗಮೇಶ್ವರ ಸಭಾಭವನದಲ್ಲಿ ಏರ್ಪಡಿಸಲಾದ ಲಿಂ.ಸಾಹೇಬಗೌಡ ಪಾಟೀಲ, ಲಿಂ.ಸುಬ್ಬಣ್ಣ ದ್ಯಾಪೂರ ಇವರ ಸ್ಮರಣಾರ್ಥ ಏರ್ಪಡಿಸಲಾದ ದತ್ತಿನಿದಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳನ್ನು ಮಹಾನ್ ನಾಯಕರನ್ನು ಅಲ್ಲದೇ ಸಮಾಜದ ಬಗ್ಗೆ ಕಾಳಜಿ ಉಳ್ಳವರನ್ನು ಗುರುತಿಸುವ ಕಾರ್ಯ ಮಾಡುತ್ತದೆ ಅಂತಹ ಕಾರ್ಯದಲ್ಲಿ ತೊಡಗಿದ ನಮ್ಮ ತಂದೆ ಲಿ.ಸುಬ್ಬರಾಯಗೌಡರ ಹಾಗೂ ಆತ್ಮೀಯರಾದಂತಹ ಭೀಮನಗೌಡ ದ್ಯಾಪೂರ ಅವರ ತಂದೆ ಸುಬ್ಬಣ್ಣ ದ್ಯಾಪೂರ ಅವರ ಕುರಿತು ದತ್ತಿನಿದಿ ಉಪನ್ಯಾಸ ಏರ್ಪಡಿಸಿ ಅವರ ಇತಿಹಾಸವನ್ನು ಮೆಲಕು ಹಾಕುವ ಕಾರ್ಯ ಮಾಡಿರುವದು ಸಂತಸ ತಂದಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಳಿಕೋಟೆ ತಾಲೂಕಾ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರು ಈ ಕಾರ್ಯಕ್ರಮಕ್ಕೆ ನಮ್ಮನ್ನು ಪ್ರೋತ್ಸಾಹಿಸಿ ಬರಮಾಡಿಕೊಂಡರುವದು ಅತೀವ ಹರ್ಷ ತಂದಿದೆ ನಮ್ಮ ತಂದೆಯ ಮಾರ್ಗದರ್ಶನದಲ್ಲಿ ಮುಂದುವರೆದು ನಾವು ಮುನ್ನಡೆದಿದ್ದೇ ಇಂದಿನ ದಿನಮಾನದಲ್ಲಿ ಉನ್ನತ ಮಟ್ಟಕ್ಕೆ ಏರಿರುವದು ಕಾರಣವಾಗಿದೆ ಎಂದರು, ತಾಯಿಯನ್ನು ನೋಡದೇ ಆಕೆಯ ಸಹಾಯವನ್ನು ಕೈಕೊಂಡು ವಿದ್ಯಾ ಬುದ್ದಿ ಪಡೆದ ಯುವಕನೋರ್ವನ ಕಥೆಯೊಂದನ್ನು ವಿವರಿಸಿದ ಅವರು ತಂದೆ ತಾಯಿಯ ಋಣ ಎಂದಿಗೂ ತಿರಿಸಲಾಗದು ಆ ಜನತೆ ಮತ್ತೆ ಹುಟ್ಟಿ ಬರಲಾರರು ಇದನ್ನು ಅರ್ಥೈಸಿಕೊಂಡು ನಡೆಯಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಕುರಿತ ಗೌರವಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್.ಜಮ್ಮಲದಿನ್ನಿ ಅವರು ಶರಣರ ಚಿಂತನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಕಾಯಕ ದಾಸೋಹ ಕುರಿತು ಶರಣರು ತಿಳಿ ಹೇಳಿದ್ದಾರೆ ಶರಣರ ಚಿಂತನೆಯ ಮೊದಲನೇಯ ವ್ಯಕ್ತಿ ಹಳಕಟ್ಟಿ ಅವರು ಆಗಿದ್ದು ಶರಣ ಸಾಹಿತ್ಯವನ್ನು ಉಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಸುಖಃ ಜೀವನ ಸಾಗಿಸುವದಕ್ಕಾಗಿ ವಚನಗಳನ್ನು ಉಳಿಸಿ ಬೆಳೆಸಲು ಎಂಬ ಉದ್ದೇಶದಿಂದ ಕ್ರಾಂತಿಯ ಸಂಗಮದಲ್ಲಿ ವಚನವನ್ನು ಕಟ್ಟಿ ಹೋದರು. ಶರಣರು ತಾಳೇ ಗೆರೆಯಲ್ಲಿ ಬರೆದು ಮುಂದಿನ ಫೀಳಿಗೆಗಾಗಿ ವಚನಗಳನ್ನು ಬರೆದು ತ್ಯಾಗ ಮಾಡಿದ್ದಾರೆಂದರು. ಬಸವಣ್ಣನವರು ಅಕ್ಕಮಹಾದೇವಿ ಅಲ್ಲಮ ಪ್ರಭು ಅವರು ವಚನಗಳನ್ನು ಸೃಷ್ಠಿಸಿ ವಿವರಿಸಿದ್ದರ ಕುರಿತು ಹೇಳಿದ ಜಮ್ಮಲದಿನ್ನಿ ಅವರು 12 ನೇ ಶತಮಾನದಲ್ಲಿ ಬಸವಣ್ಣನವರು ಶರಣರೊಂದಿಗೆ ಕೂಡಿ ಕ್ರಾಂತಿ ಮಾಡಿ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಬಡವ ಶ್ರೀಮಂತ ಮೇಲು ಕೀಳು ವರ್ಣ ಬೇದ, ಜ್ಯಾತಿ ಬೇದದಿಂದ ಸಮಾಜ ಹದಗೆಟ್ಟಿದ್ದನ್ನು ತಿದ್ದಿ ತೀಡಿದರೆಂದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಜಾನಪದ ಕಲಾವಿದ ಗೈಬುಸಾ ಮಕಾಂದಾರ ಅವರು ಗೀಗೀ ಪದದ ಹಾಡುಗಳನ್ನು ಹಾಡಿ ಜಾನಪದದ ವಿಷಯ ಕುರಿತುಉಪಸ್ಥಿತ ವಿದ್ಯಾರ್ಥಿಗಳಿಗೆ ಜನತೆ ಮನವರಿಕೆ ಮಾಡಿದರು.

ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಲಿಂ.ಸಾಹೇಬಗೌಡ ಪಾಟೀಲ ಅವರು ಕೃಷಿಕರಾಗಿದ್ದರೂ ಕೂಡಾ ಈ ಹಿಂದೆ ಅವರು ಬ್ರೀಟಿಷರ್ ಕಾಲದಲ್ಲಿ ಸ್ವಾತಂತ್ರ್ಯ ಯೋಧರಿಗೆ ಸಹಾಯ ಹಸ್ತವನ್ನು ಕಲ್ಪಿಸುತ್ತಾ ಸಾಗಿದ್ದರೆಂಬುದರ ಕುರಿತು ನನ್ನ ಗಮನಕ್ಕೆ ಬಂದಿದೆ ಅವರು ಕೃಷಿಕರಾಗಿದ್ದರೂ ಸಹ ಪುತ್ರ ಎಚ್.ಎಸ್.ಪಾಟೀಲರಿಗೆ ಶಿಕ್ಷಣವನ್ನು ನೀಡಿ ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲು ಹಾಕುವಂತೆ ಮಾಡಿ ಅವರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವದು ಇದು ಸಾಹೇಬಗೌಡರ ಮಾರ್ಗದರ್ಶನವೇ ಕಾರಣವಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿಯ ಅಧ್ಯಕ್ಷರಾದ ಜೋಶಿ ಅವರು ಈಗಾಗಲೇ ಕೆಲವು ಬದಲಾವಣೆ ಮಾಡಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತ್‍ನ ಸದಸ್ಯರಾಗಬೇಕಾದರೆ ಕನ್ನಡ ಮಾತನಾಡಲು, ಓದಲು, ಬರೆಯಲು ಬರಬೇಕು ಅಂತವರನ್ನು ಗುರುತಿಸುವ ಕಾರ್ಯ ನಡೆಯುತ್ತಲಿದೆ ತಾಳಿಕೋಟೆಯಲ್ಲಿಯೂ ಸಹ ತಾಲೂಕಾ ಅಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರೂ ಸಹ ಕನ್ನಡ ಸಾಹಿತ್ಯ ಪರಿಷತ್‍ನ್ನು ಇನ್ನಷ್ಟು ಉತ್ತುಂಗಕ್ಕೇರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಈ ಸಾಹಿತ್ಯ ಪರಿಷತ್ತಿನಲ್ಲಿ ಒಳ್ಳೆಯವರು ಹಾಗೂ ಸಮಾಜ ಸೇವಾ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿ ಲಿಂಗೈಕ್ಯೆ ಆದಂತವರನ್ನು ಈ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದತ್ತಿ ನಿಧಿಯೊಂದಿಗೆ ಅವರ ಸೇವಾ ಕಾರ್ಯ ಕುರಿತು ಗುಣಗಾನ ಮಾಡಲಾಗುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಪ್ರಾಸ್ಥಾವಿಕ ಮಾತನಾಡಿದರು.

ಕಾರ್ಯಕ್ರಮದ ಮೊದಲಿಗೆ ಕನ್ನಡಾಂಭೆಯ ಭಾವಚಿತ್ರಕ್ಕೆ ಹಾಗೂ ಲಿಂ.ಸಾಹೇಬಗೌಡ ಪಾಟೀಲ, ಲಿಂ.ಸುಬ್ಬಣ್ಣ ದ್ಯಾಪೂರ, ಅವರ ಭಾವಚಿತ್ರಕ್ಕೆ ಪುಷ್ಪಹಾರ ಗೈಯಲಾಯಿತು.

ಈ ಕಾರ್ಯಕ್ರಮದಲ್ಲಿ ಡಾ.ನಜೀರ ಕೊಳ್ಯಾಳ, ಡಾ.ಬಿ.ಆರ್.ಪೊಲೀಸ್‍ಪಾಟೀಲ, ಎಂ.ಎಂ.ವಾಲಿ, ಎಂ.ಎಚ್.ಹಂದ್ರಾಳ, ಭೀಮನಗೌಡ ಚೌದ್ರಿ, ಎಸ್.ಡಿ.ಕರ್ಜಗಿ, ಆರ್.ಜಿ.ರಾಠೋಡ, ಎಂ.ಎಸ್.ರಾಯಗೊಂಡ, ಎ.ಬಿ.ಇರಾಜ, ಎಚ್.ವ್ಹಿ.ಬೆನಕಟ್ಟಿ, ಅಶೋಕ ಕಟ್ಟಿ, ಫಾರೂಕ ಗಟನೂರ, ಎಸ್.ಬಿ.ಬಿರಾದಾರ, ಬಿ.ಆಯ್.ಹಿರೇಹೊಳಿ, ಮುತ್ತು ಬಿರಾದಾರ, ಎಂ.ಬಿ.ಪಾಟೀಲ, ಆರೀಪ ಹೊನ್ನುಟಗಿ, ಬಿಜ್ಜು ನೀರಲಗಿ, ಸುರೇಶ ಪಾಟೀಲ, ಜಿ.ಎ.ಕಸ್ತೂರಿ, ಮೊದಲಾದವರು ಇದ್ದರು.

ಶಿಕ್ಷಕ ಗುಂಡುರಾವ್ ಧನಪಾಲ ಸ್ವಾಗತಿಸಿದರು. ಶಿಕ್ಷಕ ಆರ್.ಬಿ.ದಾನಿ ನಿರೂಪಿಸಿದರು. ಶಿಕ್ಷಕ ಸಂತೋಷ ಜಾಮಗೊಂಡಿ ವಂದಿಸಿದರು.