ಮಾಣಿಕ ಸ್ಪೋಟ್ರ್ಸ ಅಕಾಡೆಮಿಗೆ ಕ್ರೀಡಾ ಪೋಷಕ ಪ್ರಶಸ್ತಿ

ಬೀದರ,ನ.4-ಇಲ್ಲಿನ “ಮಾಣಿಕ ಸ್ಪೋಟ್ರ್ಸ ಅಕಾಡೆಮಿ”ಯ ಕ್ರೀಡಾ ಕ್ಷೇತ್ರದಲ್ಲಿನ ಮಹತ್ತರ ಕಾರ್ಯ ಗುರುತಿಸಿ, ಬೆಂಗಳೂರು ವಿಧಾನಸೌಧ ಬಾಂಕ್ವೆಟ್ ಹಾಲಿನಲ್ಲಿ ನ.2ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2020-21 ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಶ್ರೀ ಮಾಣಿಕಪ್ರಭು ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಆನಂದರಾಜ ಮಾಣಿಕಪ್ರಭುಗಳಿಗೆ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರು ವಿತರಿಸಿ ಗೌರವಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡೆಯ ಅಭಿವೃದ್ಧಿಗೆ ನೆರವು, ಪೋಷಣೆ ಕೊಟ್ಟು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡಿ, ರಾಜ್ಯವನ್ನು ಪ್ರತಿನಿಧಿಸುವಂಥ ಮಹತ್ತರ ಕಾರ್ಯ ಕೊಡುಗೆಯನ್ನು ಕ್ರೀಡಾ ಪೋಷಕರಿಗೆ, ಕ್ರೀಡಾ ಸಂಸ್ಥೆಗಳಿಗೆ ಕರ್ನಾಟಕ ಸರಕಾರವು “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುತ್ತದೆ.
ಕಳೆದ ಅರ್ಧಶತಮಾನಗಳಿಂದಲೂ ಶ್ರೀ ಮಾಣಿಕಪ್ರಭು ಶಿಕ್ಷಣ ಸಮಿತಿ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ಅಲ್ಲದೇ ಜಿಲ್ಲಾ ಕ್ರೀಡಾಂಗಣಕ್ಕೂ ಶ್ರೀ ಮಾಣಿಕಪ್ರಭು ಸಂಸ್ಥಾನ ಸ್ಥಳಾವಕಾಶವನ್ನು ನೀಡಿ ಕ್ರೀಡಾಪಟುಗಳಿಗೆ ಸಹಕರಿಸುತ್ತ, ಪೋಷಿಸುತ್ತ ಬಂದಿದ್ದಾರೆ. ಸಂಸ್ಥಾನದ ಪಂಚಮ ಪೀಠಾಧಿಪತಿಗಳಾದ ಶ್ರೀ ಸಿದ್ಧರಾಜ ಮಾಣಿಕಪ್ರಭುಗಳು ಸ್ವತ: ಕ್ರೀಡಾ ಪ್ರೇಮಿಗಳಾಗಿದ್ದರು.
ಹಿಂದುಳಿದ ಕಲ್ಯಾಣ ಕರ್ನಾಟಕದ ಯುವ ಜನತೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಮಹದಾಶೆಯನ್ನು ಹೊಂದಿ ಸುಸಜ್ಜಿತ ಸಕಲ ಸೌಕರ್ಯಗಳನ್ನು ಹೊಂದಿದ ಕ್ರೀಡಾಂಗಣವನ್ನು ಈ ಭಾಗದ ಜನತೆಗೆ ಕೊಡಮಾಡಿದ್ದರು. ಅಂದಿನಿಂದ ಇಂದಿನವರೆಗೂ ಶ್ರೀ ಮಾಣಿಪಪ್ರಭು ಶಿಕ್ಷಣ ಸಮಿತಿಯು ವಿವಿಧ ಕ್ರೀಡೆ; ಈಜು, ವಾಲಿಬಾಲ್, ಕ್ರಿಕೆಟ್, ಟೇಬಲ್ ಟೆನ್ನಿಸ್ ಇತರ ಮುಂತಾದ ಶಿಬಿರ ಸ್ಪರ್ಧಾತ್ಮಕ ಪಂದ್ಯಗಳನ್ನು ಏರ್ಪಡಿಸುತ್ತ ಕಲ್ಯಾಣ ಕರ್ನಾಟಕದ ಯುವ ಜನಾಂಗವನ್ನು ಕ್ರೀಡಾಸಕ್ತರನ್ನಾಗಿ ಮಾಡುತ್ತ ತರಬೇತಿ, ಶಿಬಿರ, ಸೆಮಿನಾರ ಮೂಲಕ ರಾಜ್ಯ ಮಟ್ಟದ ಕ್ರೀಡಾಪಟುಗಳನ್ನು ತಯಾರಿಸುತ್ತ ಬಂದಿದೆ.
ಕರ್ನಾಟಕದÀ ಸರಕಾರವು ಮಾಣಿಕಪ್ರಭು ಶಿಕ್ಷಣ ಸಮಿತಯ ಕಾರ್ಯವನ್ನು ಮೆಚ್ಚಿ 2020-21ನೇ ಸಾಲಿಗಾಗಿ ಕ್ರೀಡಾ ಪೋಷಕ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯವಾಗಿದೆ.