ಮಾಣಿಕನಗರ: ದತ್ತ ಜಯಂತಿ ಮಹೋತ್ಸವ ತೀರ್ಥ ಸ್ನಾನ

ಹುಮನಾಬಾದ್:ಡಿ.25: ಇಲ್ಲಿನ ಐತಿಹಾಸಿಕ ಮಾಣಿಕನಗರದ ಮಾಣಿಕಪ್ರಭುಗಳ ಜಾತ್ರಾ ಮಹೋತ್ಸವವು ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ ಹಿನ್ನಲೆಯಲ್ಲಿ ರದ್ದುಗೊಳಿಸಿದ ಮಾಣಿಕಪ್ರಭು ದೇವಸ್ಥಾನದ ಸಮಿತಿಯು ಬುಧವಾರ ದತ್ತ ಜಯಂತಿ ಮಹೋತ್ಸವ ಸರಳವಾಗಿ ಆಚಾರಣೆ ಮಾಡಲು ಚಾಲನೆ ನೀಡಿದರು.

ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳು ದತ್ತ ಜಯಂತಿ ಮಹೋತ್ಸವ ಅಂಗವಾಗಿ ಮದ್ಯಾಹ್ನ 2 ಗಂಟೆಗೆ ವಿಶೇಷ ತೀರ್ಥಸ್ನಾನ ಮತ್ತು 3 ಕ್ಕೆ ಯೋಗ ದಂಡ ಪೂಜೆ, ನೆರವೇರಿಸಿದರು.

ಇಂದುಮುಂಜಾನೆ 10 ಕ್ಕೆ ಗಣಪತಿ ಪುಜಿ, ಚಂಡಿಪಾಠ, ಸಕಲ ದೇವತಾ ನಿಮಂತ್ರಣ, ರಾತ್ರಿ 8 ಕ್ಕೆ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಗುವುದು.

25 ರಂದು 155ನೇ ಶ್ರೀ ಪ್ರಭುಗಳ ಪುಣ್ಯ ತೀಥಿ, 26 ರಂದು ಶ್ರೀ ಪ್ರಭು ದ್ವಾದಶಿ ಕಾರ್ಯಕ್ರಮ, 27 ರಂದು ದಕ್ಷಿಣ ದರಬಾರ, 28 ರಂದು ಗುರು ಪೂಜೆ, 29 ರಂದು 203ನೇ ಶ್ರೀ ಪ್ರಭು ಜಯಂತಿ, ಹಾಗೂ 30 ರಂದು ಶ್ರೀ ಪ್ರಭು ದರ್ಬಾರ ನಡೆಯಲಿವೆ.