ಮಾಣಿಕನಗರ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ಹುಮನಾಬಾದ್ : ಜ.14: ತಾಲ್ಲೂಕಿನ ಮಾಣಿಕನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 23 ಸರ್ವೇ ಸಂಖ್ಯೆ ಭೂಮಿಯನ್ನು ಪುರಸಭೆಗೆ ಹತ್ತಾಂತರಿಸಿರುವುದನ್ನು ವಿರೋಧಿಸಿ ಶುಕ್ರವಾರ ಪಂಚಾಯಿತಿಯ ಸರ್ವಸದಸ್ಯರು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ನಂತರ ಪ್ರಮುಖರು ಮಾತನಾಡಿ, ಈ ಸರ್ವೇ ನಂಬರಿನ ಸ್ಥಳವು ನಮ್ಮ ಪಂಚಾಯಿತಿ ಮೂಲ ಆದಾಯವಾಗಿವೆ.
ಈ ಸ್ಥಳವನ್ನು ಉದ್ದೇಶ ಪೂರ್ವಕವಾಗಿ ಹುಮನಾಬಾದ್ ಪುರಸಭೆಗೆ ನೀಡಲಾಗುತ್ತಿದೆ. ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಇಲ್ಲದೆ ಅಕ್ರಮವಾಗಿ ವರ್ಗವಣೆ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳು ಕಳ್ಳಾಟ ಆಡುತ್ತಿದ್ದಾರೆ ಎಂದು ದೂರಿದರು. ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ, ಎರಡು ದಿನಗಳ ಕಾಲ ಸಮಯವನ್ನು ನೀಡಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದರಿಂದ ಪ್ರತಿಭಟನೆ ಕೈ ಬಿಟ್ಟರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಚೈತ್ರಾಂಜಲಿ, ಉಪಾಧ್ಯಕ್ಷ ಸಾಯಿಕಿರಣ, ಸದಸ್ಯರಾದ ಓಂಕಾರ ತುಂಬಾ, ಲಕ್ಷ್ಮಣ ಸಿಂಧೆ, ಮಾಣಿಕ್, ನಿಜಾಮೋದ್ದಿನ್, ಶೇಕ್ , ನಾಗೇಶ , ರವೀಂದ್ರ ಆರ್ಯ, ದಿಲೀಪ್ ಕುಮಾರ್ ಮರಪಳ್ಳಿ, ವಿನೋದ, ಬಾಬುರಾವ್ ಪಟಪಳ್ಳಿ, ಮಂಗಲ ವಾಡಿಕರ್, ಪ್ರಿಯಾಂಕಾ ರೆಡ್ಡಿ, ಕಲ್ಪನಾ ಜಮಾದಾರ್, ಪ್ರೇಮಾ, ಪಂಚಶೀಲಾ, ಸುಲೋಚನಾ, ನಂದಾದೇವಿ, ಜಗದೇವಿ ಸೇರಿದಂತೆ ಇತರರು ಇದ್ದರು.