ಮಾಡ್ಲಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮ್ಲಿ ಬಾಯಿ ಉಪಾಧ್ಯಕ್ಷರಾಗಿ ಪಕ್ಕೀರಮ್ಮ ಆಯ್ಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.05:- ತಾಲೂಕಿನ ಮಾಡ್ಲಿಗೇರಿ ಗ್ರಾಮ ಪಂಚಾಯಿತಿಯ  ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಉಮ್ಲಿ ಬಾಯಿ ಹಾಗೂ  ಉಪಾಧ್ಯಕ್ಷರಾಗಿ  ಸ್ಥಾನಕ್ಕೆ ಶ್ರೀಮತಿ ಪಕ್ಕೀರಮ್ಮ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಸತೀಶ್ ಪಾಟೀಲ್ ಅವರು ಘೋಷಿಸಿದರು .
ಹರಪನಹಳ್ಳಿ ತಾಲೂಕಿನ ಮಾಡ್ಲಿಗೇರಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು 13 ಸದಸ್ಯರ ಹೊಂದಿದು   ಅಧ್ಯಕ್ಷ  ಸ್ಥಾನಕ್ಕೆ ಡಿ ಕೆ ಪ್ರಕಾಶ್ ಮತ್ತು
ಉಮ್ಲಿಬಾಯಿ ಅವರು ನಾಮಪತ್ರ ಸಲ್ಲಿಸಿದ್ದಾರೂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಹಾಗೂ ಪಕ್ಕೀರಮ್ಮ ಸಲ್ಲಿಸಿದ್ದಾರೂ ಇವರ ಎಲ್ಲಾ ನಾಮಪತ್ರ ಅಂಗಿಕಾರ ಹಾಗಿದ್ದವು
ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಪ್ರಕಾಶ್ ಅವರಿಗೆ 6 ಮತಗಳು ಬಿದಿದ್ದವು ಉಮ್ಲಿ ಬಾಯಿ  ಅವರಿಗೆ 7 ಮತಗಳು ಬಿದ್ದು ಜಯಭೇರಿ ಬಾರಿಸಿದರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಅವರಿಗೆ 6 ಮತಗಳು ಬಿದ್ದು ಪಕ್ಕೀರಮ್ಮ ಅವರಿಗೆ 7 ಮತಗಳು ಬಿದ್ದು ಜಯಭೇರಿ ಬಾರಿಸಿದರು
ಈ ಸಂದರ್ಭದಲ್ಲಿ ಅಶೋಕ ಮಾಜಿ ಗ್ರಾಮ ಪಂಚಾಯತಿ ಅದ್ಯಕ್ಷ. ಮಲ್ಲೇಶ್ ನೀಲ್ ಊರೊಪ್ಪ ಟಿ ಹಾಲೇಶ್ ಟಿ ಪ್ರಕಾಶ್ ಟಿ ನಾಗೇಂದ್ರಪ್ಪ ದಾದಪುರ ಹರ್ಷ ಕಾನಹಳ್ಳಿ ರಾಮು ಕ್ರೀಷ್ಣ ಪೊಲೀಸ್ ಸಿಬ್ಬಂದಿಗಳು  ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು

One attachment • Scanned by Gmail