ಮಾಡೆಲಿಂಗ್‍ನಲ್ಲಿ ತೇಜಸ್.ಜಿ.ರನ್ನರ್ ಅಪ್

ಚಾಮರಾಜನಗರ, ಏ.24:-ಗೋಲ್ಡನ್ ಈಗಲ್ ಸಂಸ್ಥೆ ಬೆಂಗಳೂರುವತಿಯಿಂದ ಏಪ್ರಿಲ್ 16, 2023ರಂದು ಬೆಂಗಳೂರಿನ ಕೆ.ಆರ್.ಪುರಂನ ಪುತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಕೆ.ಆರ್. ಇನ್ ಇಲ್ಲಿ ಏರ್ಪಡಿಸಲಾಗಿದ್ದ ಗ್ರಾಮ್ ಐಕಾನ್ ಆಫ್ ಸಿಲಿಕಾನ್ ಸಿಟಿ-2023 ಮಾಡಲಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಭಾಗವಹಿಸಿದ್ದ ತೇಜಸ್.ಜಿ ಮಕ್ಕಳ ವಿಭಾಗದಲ್ಲಿ ರನ್ನರ್ ಅಪ್ ಆಗಿ ಪ್ರಶಸ್ತಿಗಳಿಸಿದ್ದಾನೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಚಿಣ್ಣರ ಪೈಕಿ ತೇಜಸ್.ಜಿ. ಪ್ರಿನ್ಸ್ ರನ್ನರ್ ಅಪ್ ಪ್ರಶಸ್ತಿಯೊಡನೆ ಕಿಡ್ ವಿತ್ ಬೆಸ್ಟ್ ವಾಕ್ ಹಾಗೂ ಕಿಡ್ ವಿತ್ ಕಾನ್ಸಿಡೆಂಟ್ ಪ್ರಶಸ್ತಿಗಳನ್ನೂ ಸಹ ಬಾಚಿಕೊಂಡಿದ್ದಾನೆ.
ಗೋಲ್ಮನ್ ಈಗಲ್ ಸಂಸ್ಥೆಯ ಮುಖ್ಯಸ್ಥರಾದ ಪ್ರಭು ಹಾಗೂ ಪ್ರಶಾಂತ ಹಾಜರಿದ್ದರು. ದೀಪಾ ಪೌಲ್ ರವರು ತೇಜಸ್.ಜಿ.ಗೆ ಬಹುಮಾನ ಹಾಗೂ ಪಾರಿತೋಷಕಗಳನ್ನು ವಿತರಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಅರ್ಪಿತಾ, ದೀಪಾಶ್ರೀ ಹಾಗೂ ಆಕಾಶ್ ಅಗರ್ವಾಲ್ ರವರು ತಮ್ಮ ತೀರ್ಪನ್ನು ನೀಡಿದರು.
ತೇಜಸ್.ಜಿ ಈಗಾಗಲೆ ಹಾಸನ ನಗರದಲ್ಲಿ ನಡೆದ ಮಾಡಲಿಂಗ್ ಸ್ಪರ್ಧೆಯಲ್ಲಿ ಪ್ರಿನ್ಸ್ ಆಫ್ ದಿವಾ ಮಾಡೆಲ್ 2022 ನಲ್ಲಿ ವಿನ್ನರ್ ಪುಶಸ್ತಿಯನ್ನೂ ಸಹ ಗಳಿಸಿದ್ದಾನ.
ಗ್ರಾಮ್ ಐಕಾನ್ ಆಫ್ ಸಿಲಿಕಾನ್ ಸಿಟಿ ಮಾಡೆಲಿಂಗ್ ಸ್ಪರ್ಧೆಯಲ್ಲಿ ಮಿಸ್ಮಸ್ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಯಿಂದ ಭಾಗವಹಿಸಿದ್ದ ಗೀತಾ.ಆರ್.ಎನ್.ರವರು ಪ್ರಥಮ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡರು.
ಕಿಡ್ಸ್ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ತೇಜಸ್.ಜಿ ಹಾಗೂ ಮಿಸೆಸ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಗೀತಾ.ಆರ್.ಎನ್.ರವರು, ತಾಯಿ-ಮಗನ ಜೋಡಿಯಾಗಿರುತ್ತಾರೆ ಹಾಗೂ ಈ ಇಬ್ಬರೂ ಪ್ರಶಸ್ತಿ ಗಳಿಸಿಕೊಳ್ಳುವುದರ ಮೂಲಕ ಚಾಮರಾಜನಗರ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ವೇದಿಕೆಯಲ್ಲಿ ಗೋಲ್ಮನ್ ಈಗಲ್ ಸಂಸ್ಥೆಯ ಸಂಸ್ಥಾಪಕರಾದ ಪ್ರಭುದೇವ್ ಸಂಸ್ಥೆಯ ಸಿಇಓರವರಾದ ಪ್ರಶಾಂತ್ ರವರು ಹಾಜರಿದ್ದರು ಹಾಗೂ ಅಂಜಲಿರವರು. ನಿರೂಪಿಸಿದರು.