ಮಾಡುವ ಕೆಲಸ ಮತ್ತೋಬ್ಬರಿಗೆ ಸ್ಪೂರ್ತಿಯಾದರೆ ಸಾರ್ಥಕ

ಶಿಗ್ಗಾವಿ,ಮಾ24 : ಧಾನ ಧರ್ಮ ಮಾಡುವದರಲ್ಲಿನ ಸುಖ, ಸಂಪತ್ತು ಕೂಡಿಡುವದರಿಂದ ಸಿಗುವದಿಲ್ಲ, ನಾವು ಮಾಡುವ ಕೆಲಸ ಮತ್ತೊಬ್ಬರಿಗೆ ಸ್ಪೂರ್ತಿಯಾದರೆ ನಮ್ಮ ಕೆಲಸ ಸಾರ್ಥಕತೆಯನ್ನು ಪಡೆದಂತೆ ಎಂದು ಸಿ ಬಿ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ಹೇಳಿದರು.
ತಾಲೂಕಿನ ಗಂಗೇಬಾವಿಯಲ್ಲಿನ ಅವರ ಹೋಮ್ ಸ್ಟೇ ನಲ್ಲಿ ದಿ ಚನ್ನಬಸಪ್ಪ ಬಸವಣ್ಯೆಪ್ಪ ಯಲಿಗಾರ ಇವರ ಪ್ರಥಮ ವರ್ಷದ ಸ್ಮರಣೋತ್ಸವದ ಅಂಗವಾಗಿ ಸಿ ಬಿ ಯಲಿಯಾರ ಸೇವಾ ಸಂಸ್ಥೆ ಗಂಗೇಭಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ ಹಾವೆರಿ, ತಾಲೂಕಾ ಆಸ್ಪತ್ರೆ ಶಿಗ್ಗಾವಿ, ತಾಲೂಕಾ ವೈಧ್ಯಾಧಿಕಾರಿಗಳ ಕಾರ್ಯಾಲಯ ಶಿಗ್ಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ 1000 ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಡಬ್ಬ ವಿತರಣೆ ಹಾಗೂ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಬಂದು ಪುನರಜನ್ಮ ಪಡೆದಿದ್ದೆನೆ ಅಂದಿನಿಂದ ಸನ್ಮಾನ, ಸಹಾಯ ಮಾಡುವ ಕಾರ್ಯವನ್ನು ಮಾಡುತ್ತಿದ್ದೆವೆ ಬಿಟ್ಟು ಹೋಗುವ ಬದಲು ಕೊಟ್ಟು ಹೋಗುವದು ಒಳ್ಳೆಯ ಕಾರ್ಯವೆಂದು ತಿಳಿದು ಕೊರೊನ ವಾರಿಯರ್ಸಗೆ ಹಾಗೂ ವೈಧ್ಯರಿಗೆ ಸನ್ಮಾನ ಜೊತೆಗೆ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯ ಮಾಡಲಾಗುತ್ತಿದ್ದು ಇಂತಹ ಕಾರ್ಯಗಳನ್ನು ಮುಂದುವರೆಸಿಕೊಂಡು ಹೊಗುತ್ತೆವೆ ಮತ್ತು ತಾಲೂಕಿನಲ್ಲಿ ಶಿಥಿಲಿಗೊಂಡ ಶಾಲೆಯನ್ನು ದತ್ತು ಪಡೆದು ಅದನ್ನು ಮಾದರಿ ಶಾಲೆಯನ್ನಾಗಿಸುವ ಗುರಿ ಹೊಂದಿದ್ದೆವೆ. ಈ ಉದ್ದೇಶದಿಂದ ನಾನು ಶಾಲೆಯನ್ನು ಕೇಳಿದ್ದು ಇಲ್ಲಿವರೆಗೂ ಕೊಟ್ಟಲ್ಲ ಕೊಟ್ಟರೆ ಮಾಧರಿ ಶಾಲೆಯನ್ನು ಮಾಡುವೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಹೆಚ್.ಎಸ್.ರಾಘವೇಂದ್ರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ 800 ಕ್ಷಯ ರೋಗಿಗಳಿದ್ದಾರೆ, ಕ್ಷಯ ರೋಗ 9 ರಿಂದ 18 ತಿಂಗಳಲ್ಲಿ ಸೂಕ್ತ ವೈಧ್ಯಕಿಯ ಚಿಕಿತ್ಸೆ ಪಡೆದೆ ಗುಣವಾಗುವ ರೋಗ, ಭಯ ಪಡುವ ಅಗತ್ಯವಿಲ್ಲ, ಜಾಗೃತಿ ಮುಖ್ಯವಾಗಿದೆ, ಸರ್ಕಾರದ ಔಷಧಿಗಳ ಜೊತೆಗೆ ಶಶಿಧರ ಯಲಿಗಾರ ಅವರು ನೀಡುತ್ತಿರುವ ಪೌಷ್ಠಿಕ ಆಹಾರ ತುಂಬಾ ಮುಖ್ಯವಾಗಿದೆ, ಪೂರಕ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ ಅವರ ಈ ಕಾರ್ಯ ಇತರರಿಗೂ ಪ್ರೇರಣೆಯಗಲಿ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಪಿ.ಆರ್.ಹಾವನೂರ, ಸ್ಥಾನಿಕ ವೈದ್ಯಾಧಿಕಾರಿ ಡಾ|| ಸುರೇಶ ಪೂಜಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ನಿಲೇಶ ಎಂ.ಎನ್, ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ|| ಹನುಮಂತಪ್ಪ ಪಿ.ಹೆಚ್, ರೈತದ್ವನಿ ಟಿ ವಿ ಸಂಪಾದಕ ಬಸವರಾಜ ಕುರಗೋಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಡಬ್ಬ ವಿತರಣೆ ಹಾಗೂ ವೈಧ್ಯರಿಗೆ ಪೌಷ್ಠಿಕ ಆಹಾರದ ಬಾಕ್ಸಗಳನ್ನು ಶಶಿಧರ ಯಲಿಗಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ|| ಹನುಮಂತಪ್ಪ ಕುಡಚಿ, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಕ್ಷಯರೋಗಿಗಳು ಉಪಸ್ಥಿತರಿದ್ದರು.
ವರದಿಗಾರ ಎಮ್ ವಿ ಗಡಾದ ಸ್ವಾಗತಿಸಿದರು, ಆರೋಗ್ಯ ಇಲಾಖೆಯ ಸುಧಾಕರ ದೈವಜ್ಞ ನಿರೂಪಿಸಿ ವಂದಿಸಿದರು.