ಮಾಡಿಯಾಳ ಅಮೋಘಸಿದ್ದೇಶ್ವರ ಜಾತ್ರೆ

ಆಳಂದ:ಜೂ.3: ಮಾಡಿಯಾಳ ಗ್ರಾಮದ ಶ್ರೀ ಅಮೋಘಸಿದ್ಧೇಶ್ವರ ಜಾತ್ರೆಯು ಜೂನ್ 3ರಿಂದ 8ರವರೆಗೆ ನಡೆಯಲಿದೆ.
3ರಂದು ಸೋಮವಾರ ಗ್ರಾಮದಿಂದ ಸಂಜೆ 5:00ಗಂಟೆಗೆ ಪಲ್ಲಕಿ ಮತ್ತು ನಂದಿಕೋಲ ಮೆರವಣಿಗೆಯೊಂದಿಗೆ ಹಲವಾರು ಭಕ್ತರು ದತ್ತಗಾಣಗಾಪೂರದ ಕೂಡಲಸಂಗಮಕ್ಕೆ ಪಾದಯಾತ್ರೆ ಮೂಲಕ ಹೊರಟು 4ರಂದು ಮಂಗಳವಾರ ಬೆಳಿಗ್ಗೆ ಸಂಗಮ ತಲುಪುವರು.
ಅಂದು ಮಧ್ಯಾಹ್ನ ನದಿಯಲ್ಲಿ ಗಂಗಾ ಸ್ನಾನ ಮತ್ತು ಅನ್ನದಾಸೋಹ ನೆರವೇರಿಸಿ ರಾತ್ರಿ ಭಕ್ತರೊಂದಿಗೆ ಅಲ್ಲೆ ವಾಸ್ತವ್ಯ ನಡೆಯಲಿದೆ. ಜೂ. 5ರಂದು ಬುಧುವಾರ ಔರಾದ, ಅಂಕಲಗಿ, ಸಿನೂರು, ಬೆಣ್ಣಿಶಿರೂರ ಮಾರ್ಗವಾಗಿ ರಾತ್ರಿ 9ಗಂಟೆಗೆ ಮಾಡಿಯಾಳ ಗ್ರಾಮಕ್ಕೆ ಪಲ್ಲಕಿ ಮತ್ತು ನಂದಿಕೋಲ್ ಹಿಂದಿರುಗುವುದು. ಗ್ರಾಮಸ್ಥರು ಮತ್ತು ಭಕ್ತರು ಅದ್ದೂರಿಯಾಗಿ ಸ್ವಾಗತ ನಡೆಯಲಿದೆ.
6ರಂದು ಬಾದಮಿ ಅಮವಾಸ್ಯೆಯ ದಿನ ರಾತ್ರಿ 8:00 ಗಂಟೆಗೆ ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರಸಿದ್ದ ಕಲಾವಿದÀರಿಂದ ಭಜನೆ ಮತ್ತು ಡೋಳಿನ ಪದಗಳು ಜರುಗುವವು.
7ರಂದು ಬೆಳಗಿನ ಜಾವ 2ಗಂಟೆಗೆ ಪಲ್ಲಕಿ ಮತ್ತು ಮಖಾಗಳ ಮೆರವಣಿಗೆಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಡಗರ ಸಂಭ್ರಮದೊಂದಿಗೆ ನಡೆಯಲಿದೆ.
ನಂತರ ಬೆಳಗಿನ 5:00 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಶ್ರೀ ಪ್ರಭುರಾವ ಆರ್. ಮುತ್ತ್ಯಾ ಅವರು, ದೇಶದಲ್ಲಿ ನಡೆಯುವ ನಾನಾ ಘಟನೆಗಳು ಮತ್ತು ಮಳೆ, ಬೆಳೆ ಕುರಿತು ಹೇಳಕಿಯ ಮೂಲಕ ಭವಿಷ್ಯ ನುಡಿಯುವರು. ಇದನ್ನು ಆದರಿಸಿ ಗ್ರಾಮೀಣ ಭಾಗದ ರೈತಾಪಿ ವರ್ಗದವರು ಬಿತ್ತನೆ ಮಾಡುವ ವಾಡಿಕೆಯಿದೆ.
ಅಂದು ಸಂಜೆ 4:00ಗಂಟೆಗೆ ಜಂಗಿ ಪೈಲವಾನರ ಕುಸ್ತಿ ಪಂದ್ಯಾ ನಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರದದಿಂದ ಹಲವಾರು ಭಕ್ತರು ಜಾತ್ರೆಯಲಿ ಪಾಲ್ಗೊಳ್ಳುವರು. ಎಂದು ಜಾತ್ರಾ ಸಮಿತಿಯ ದತ್ತಾತ್ರೇಯ ಎಂ. ಶಿರೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆ ನಿಮಿತ್ತ ಶ್ರೀ ಅಮೋಘಸಿದ್ದೇಶ್ವರ ಜೀವನ ಚರಿತ್ರೆ ಹಾಗೂ ಪವಾಡಗಳ ಕುರಿತು ಪುರಾಣಪ್ರವಚನ ಕಾರ್ಯಕ್ರಮವು ಜೂನ್ 1ರಿಂದ 7ರವರೆಗೆ ಆಮೋಗಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಪ್ರತಿದಿನ ಸಂಜೆ 8:00ಗಂಟೆ ವರೆಗೆ ಜರುಗಲಿದೆ.
ಪ್ರವಚನ ಕಾರ್ಯಕ್ರಮವನ್ನು ಶ್ರೀ ಕನ್ಹಯ್ಯ ಮಹಾರಾಜರು ಸೋಮೇಶ್ವರ ಆಶ್ರಮ ಇವರು ನಡೆಸಿಕೊಡುವರು. ಕಲ್ಯಾಣಕುಮಾರ ಬಂಟನಳ್ಳಿ ಸಂಗೀತ ಸೇವೆ. ಮಡಿವಾಳ ಕಳಸ್ಕರ ತಬಲಾ ಸಾಥ ನೀಡುವರು ಎಂದು ಸಮೀತಿ ತಿಳಿಸಿದೆ.