ಮಾಡಿದ ಸಂಕಲ್ಪ ಈಡೇರಿಸುವ ಶಕ್ತಿ ತಾಯಿಯಲ್ಲಿದೆ:ಗುಂಡಕನಾಳಶ್ರೀ

ತಾಳಿಕೋಟೆ:ಅ.25: ನವರಾತ್ರೋತ್ಸವದಲ್ಲಿ ಶ್ರೀ ದೇವಿಯನ್ನು ಪೂಜಿಸುವಲ್ಲಿ ಒಂದು ದೊಡ್ಡ ಶಕ್ತಿ ಇದೆ ಆ ಶಕ್ತಿಯಿಂದ ವಲುಮೆ ಪಡೆದುಕೊಂಡರೆ ಜೀವನ ಸಾರ್ಥಕವಾಗಲಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಸೋಮವಾರರಂದು ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಹಾಗೂ ಶ್ರೀ ದೇವಿ ಮಾತೃ ಮಹಾ ಮಂಡಳಿ ಇವರ ವತಿಯಿಂದ ಪ್ರತಿಷ್ಠಾಪಿಸಲಾದ ಶ್ರೀ ದೇವಿಯ ಮಹಾ ಮೂರ್ತಿ ಸ್ಥಳದಲ್ಲಿ ಏರ್ಪಡಿಸಲಾದ ನವರಾತ್ರೋತ್ಸವದ 9ದಿನದಂದು ಶ್ರೀ ದೇವಿಯ ಮಹಾತ್ಮೆ ಕುರಿತ ಭಕ್ತ ಸಮೂಹಕ್ಕೆ ಉಪದೇಶ ನೀಡುತ್ತಿದ್ದ ಶ್ರೀಗಳು ಯಾವುದೇ ಸಂಕಲ್ಪ ಮಾಡಿಕೊಂಡಿದ್ದನ್ನು ಇಡೇರಿಸುವ ಶಕ್ತಿ ಶ್ರೀ ದೇವಿ ಎಂಬ ತಾಯಿಯ ಹತ್ತಿರವಿದೆ ಎಂದ ಶ್ರೀಗಳು ತಂದೆಯಕ್ಕಿಂತ ಮೊದಲು ತಾಯಿಯೇ ವರ ಕೊಡುತ್ತಾಳೆ ತಾಯಿಯನ್ನುವಂತಹ ಶಕ್ತಿಯಲ್ಲಿ ಬಹಳೇ ಕರುಣೆ ಇದೆ ಎಂದರು. ಶಿವ ಮತ್ತು ಶಕ್ತಿಯಿಂದ ಈ ಜಗತ್ತು ನಿರ್ಮಿತಗೊಂಡಿದೆ ಪಾರ್ವತಿ ಪರಮೇಶ್ವರ ಅವರಿಂದ ಜಗತ್ತು ನಿರ್ಮಾಣಗೊಂಡಿದ್ದರೂ ಹೆಚ್ಚಿನ ಸ್ಥಾನ ಮಾನ ತಾಯಿಗಿದೆ ಎಂದರು. ಪರಮೇಶ್ವರನು ತನ್ನ ದೇಹದಲ್ಲಿಯ ಅರ್ದ ಶಕ್ತಿಯನ್ನು ಪಾರ್ವತಿಗೆ ಕೊಟ್ಟಿದ್ದಾನೆ ಅದಕ್ಕಾಗಿಯೇ ಪರಮೇಶ್ವರನಿಗೆ ಅರ್ದ ನಾರಿಶ್ವರ ಎನ್ನುತ್ತಾರೆಂದರು. ಪರಮೇಶ್ವರನು ಕೇವಲ ಕೊಡುತ್ತಾನೆ ಆತನು ಕೊಟ್ಟಿದ್ದನ್ನು ಮರಳಿ ಪಡೆದುಕೊಳ್ಳುವದಿಲ್ಲಾ ಅದಕ್ಕಾಗಿಯೇ ಬೋಳಾಶಂಕರ ಅನ್ನುತ್ತಾರೆಂದರು. ಕೇವಲ ಯಾರೇ ವರ ಕೇಳಿದರೆ ಕೊಡುವದಷ್ಟೇ ಗೊತ್ತು ಮರಳಿ ತೆಗೆದುಕೊಳ್ಳುವದು ಗೊತ್ತಿಲ್ಲಾ ಕಾರಣ ಎಲ್ಲವನ್ನು ನಿಯಂತ್ರಿಸುವ ಶಕ್ತಿ ತಾಯಿಯಾದ ಪಾರ್ವತಿಯಲ್ಲಿದೆ ಎಂದರು. ಚಂಡ ಮುಂಡ ರಕ್ತ ಬೀಜ ಎನ್ನುವಂತಹ ದುಷ್ಠ ಶಕ್ತಿಗಳು ನಮ್ಮಲ್ಲಿಯೇ ಅಡಗಿವೆ ಯೌವನದ ಮದ ಅಂತಹ ಅನೇಕ ಮದಗಳು ಮನದಲ್ಲಿ ಇರುವದರಿಂದ ಅಂತಹ ಮದಗಳನ್ನು ಹೊರ ಹಾಕಲು ಶ್ರೀ ದೇವಿಯ ಶಕ್ತಿಯಿಂದಲೇ ಸಾದ್ಯವೆಂದು ಹೇಳಿದ ಶ್ರೀಗಳು ಚಿದಾನಂದ ಶ್ರೀಗಳು 18ನೇ ಅಧ್ಯಾಯದ ಪುರಾಣ ಬರೆದು ಶ್ರೀ ದೇವಿಯನ್ನು ಪ್ರತ್ಯಕ್ಷ ಪಡಿಸಿಕೊಂಡಿದ್ದರು ವಿಶೇಷವಾಗಿ ಋಷಿಮುನಿಗಳು ಮಹಾ ಯೋಗಿಗಳು, ಶ್ರೀ ದೇವಿಯ ಪುರಾಣ ಓದಿ ಲೋಕಕ್ಕೆ ಅರ್ಪಿಸುತ್ತಾ ಸಾಗಿದ್ದಾರೆ ವೈಯಕ್ತಿಕ ಹಿತಾಶಕ್ತಿ ಬಯಸಿ ಅನ್ಯರಿಗೆ ತೊಂದರೆ ನೀಡುವಂತಹ ಕಾರ್ಯ ಮಾಡಿದರೆ ಶ್ರೀ ದೇವಿಯು ಹೆಚ್ಚಿಗೆ ಕಷ್ಟಕೊಡುತ್ತಾಳೆ ಒಳ್ಳೆಯ ಕಾರ್ಯ ಮಾಡಿದರೆ ಸಂತೃಪ್ತಿಯಿಂದ ಇರಲು ಅವಕಾಶ ಮಾಡಿಕೊಡುತ್ತಾಳೆಂದು ಶ್ರೀ ದೇವಿಯ ಮಹಾತ್ಮೆ ಕುರಿತು ವಿವರಿಸಿದ ಶ್ರೀಗಳು ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿ 9ದಿನಗಳ ಕಾಲ ಸೇವಾ ಕಾರ್ಯ ಮಾಡಿ ಭಕ್ತರಿಗೂ ಭಕ್ತಿಗೆ ಅವಕಾಶ ಮಾಡಿಕೊಟ್ಟಿರುವ ಹಿಂದೂ ಮಹಾ ಗಣಪತಿ ಮಹಾ ಮಂಡಳಿ ಹಾಗೂ ಶ್ರೀ ದೇವಿ ಮಾತೃ ಮಹಾ ಮಂಡಳಿಯವರ ಸೇವಾ ಕಾರ್ಯ ಮಹಾ ಭಕ್ತಿಯದ್ದಾಗಿದೆ ಎಂದರು.
ಇನ್ನೋರ್ವ ಶ್ರೀ ದೇವಿಯ ಮಹಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ಮಾತನಾಡಿ ನವರಾತ್ರಿ ಉತ್ಸವ ಘಟ ಸ್ಥಾಪನೆ ಎಂದರೇನು ದೀಪ ಹಾಕುವ ಉದ್ದೇಶವೇನೆಂದರೆ ನಮ್ಮಲ್ಲಿದ್ದ ಅಂದಕಾರ ಹೋಗಲಾಡಿಸಿ ಅಜ್ಞಾನವನ್ನು ಹೊರಗೆ ಹಾಕಿ ಜ್ಞಾನವನ್ನು ಪಡೆದುಕೊಳ್ಳಲು ಈ ಉತ್ಸವವನ್ನು ಆಚರಿಸಲಾಗುತ್ತದೆ ಎಂದರು. ಮನುಷ್ಯನ ದೇಹ ಘಟವೆಂದು ತಿಳಿದುಕೊಳ್ಳಬೇಕು ಮನುಷ್ಯನ ದೇಹದಲ್ಲಿ ಘಟ್ಟ ಹಾಕಿದಾಗ ಮನುಷ್ಯನ ದುರ್ಗುಣಗಳನ್ನು ನಾಶ ಮಾಡಿ ಸದ್ಗುಣಗಳನ್ನು ಬಿತ್ತುವ ಕಾರ್ಯಕ್ಕೆ ಮುಂದಾದ ಶ್ರೀ ದೇವಿಗೆ ನಮಗೆ ಒಳ್ಳೆಯದಾಗಿ ಜೀವನ ನಡೆಸಬೇಕೆಂದು ಬೇಡಿಕೊಳ್ಳುತ್ತೇವೆ ದೇವಸ್ಥಾನಕ್ಕೆ ಹೋಗಲಾರದೇ ಒಳ್ಳೆಯ ಆಧ್ಯಾತ್ಮೀಕ ಚಿಂತನೆಗೊಳ್ಳಪಡದೇ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳದಿದ್ದರೆ ಶ್ರೀ ದೇವಿಯ ವಲುಮೆಯಾಗುವದಿಲ್ಲಾ ಶ್ರೀದೇವಿಯನ್ನು ಆರಾಧಿಸುವಲ್ಲಿ ಸದ್ಗುಣಗಳು ಬರುತ್ತವೆ ಕಾರಣ ಪುರಾಣ ಪ್ರವಚನ ಆಧ್ಯಾತ್ಮೀಕ ವಿಚಾರ ಅಳವಡಿಸಿಕೊಂಡು ನಡೆದರೆ ಸನ್ಮಾರ್ಗವೆಂಬುದು ದೊರೆಯಲಿದೆ ಎಂದರು.
ಇದೇ ಸಮಯದಲ್ಲಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರಿಗೆ ಪುರಸಭೆ ಸದಸ್ಯರಾದ ಜೈಸಿಂಗ್ ಮೂಲಿಮನಿ, ಅವರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಹಿಂದೂ ಮಹಾ ಗಣಪತಿಯ ಮಹಾ ಮಂಡಳಿಯ ಎಲ್ಲ ಪದಾಧಿಕಾರಿಗಳು, ಹಾಗೂ ಶ್ರೀ ದೇವಿ ಮಾತೃ ಮಹಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಇದ್ದರು.
ನಂತರ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಣೆ ಜರುಗಿತು.