ಮಾಡಲ್ ಯುನೈಟೆಡ್ ನೇಶನ್-ಡಿ ಮನ್ ಸಮಾವೇಶ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.22;ನಗರದ ಹೊರಲಯದಲ್ಲಿರುವ ಪಿ ಎಸ್ ಎಸ್ ಇ ಎಮ್ ಆರ್ ಶಾಲೆ ತೋಳಹುಣಸೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶ್ವಸಂಸ್ಥೆಯ ಕಾರ್ಯವೈಖರಿ, ಜಾಗತಿಕ ಸವಾಲುಗಳು ಮತ್ತು ಅದರ ಸದುದ್ದೇಶದ ಅರಿವು ಮೂಡಿಸುವ ಸಲುವಾಗಿ ಮಾಡಲ್ ಯುನೈಟೆಡ್ ನೇಶನ್-ಡಿ ಮನ್ ಚರ್ಚಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಇದು ಈ ವಲಯದಲ್ಲಿ ನಡೆದಿರುವ ಮೊತ್ತಮೊದಲು ಸಮಾವೇಶವಾಗಿತ್ತು. ಈ ಸಮಾವೇಶದಲ್ಲಿ ದಾವಣಗೆರೆಯ ಸುತ್ತಮುತ್ತಲಿನ ಹದಿನೈದು ಶಾಲೆಯ ಸುಮಾರು ಮೂನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮನ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಡಾ. ಕೆ ತ್ಯಾಗರಾಜನ್ , ಐಪಿಎಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಮನ್ ಸಮಾವೇಶವು ಅಂತರಾಷ್ಟಿçÃಯ ರಾಜಕಾರಣ ಮತ್ತು ವಿಶ್ವಸಂಸ್ಥೆಯ ಕಾರ್ಯವೈಖರಿ, ಜಾಗತಿಕ ಒಪ್ಪಂದದ ಕೌಶಲ್ಯ, ಜಾಗತಿಕ ಸಮಸ್ಯೆ, ವಿವಿಧ ಸಂಸ್ಕೃತಿಗಳ ಜನರೊಂದಿಗೆ ಸಂವಹನ ಸಾಮರಸ್ಯಗಳ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಜಾಗತಿಕ ಆಗುಹೋಗಗಳ ಬಗ್ಗೆ ಅರಿವು ಮೂಡಿಸಿಕೊಂಡು ಮುಕ್ತವಾಗಿ ಚರ್ಚೆಮಾಡಲು ಕರೆಕೊಟ್ಟರು. ಈ ಉದ್ಘಾಟನೆಯ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಸ್ಥರಾದ ಮುಂಜುನಾಥ ರಂಗರಾಜು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಮಾಜಿಕ ಜವಾಬ್ದಾರಿಗಳ ಕುರಿತು ಮಾತನಾಡಿದರು. ಸಮರೋಪ ಕಾರ್ಯಕ್ರಮದಲ್ಲಿ ಪಿ ಎಸ್ ಎಸ್ ಇ ಎಮ್ ಆರ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ  ಅವಿನಾಶ್ ವಿ ರಾವ್, ಐ ಪಿ ಎಸ್, ಭಾರತೀಯ ರಾಯಭಾರ ಕಚೇರಿ ಪ್ಯಾರಿಸ್ ಅವರು ಜಾಗತಿಕ ಸಹಕಾರದ ಮಹತ್ವ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಯುವ ಮನಸ್ಸುಗಳ ಪಾತ್ರದ ಕುರಿತು ಮಾತಾನಾಡಿ ಈ ಬಾಪೂಜಿ ವಿದ್ಯಾಸಂಸ್ಥೆಯ ಇಂಥಹ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಪ್ರಶಂಸಿದರು.ಮೂರು ದಿನಗಳವರೆಗೆ ನಡೆದ ಈ ಸಮಾವೇಶದಲ್ಲಿ ವಿವಿಧ ಶಾಲೆಗಳ ಪ್ರತಿನಿಧಿಗಳು ವಿಶ್ವ ಸಂಸ್ಥೆಯ ಸಭಾ ಕಾರ್ಯಕ್ರಮಗಳನ್ನು ಅನುಕರಿಸಿ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ದೇಶಗಳ ಪ್ರತಿನಿಧಿಗಳಾಗಿ ಅಂತರಾಷ್ಟಿçÃಯ ಸಮಸ್ಯೆಗಳ ಬಗ್ಗೆ ಚರ್ಚೆನಡೆಸಿ ನಿರ್ಣಯಗಳನ್ನು ರೂಪಿಸಿದರು.ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಮಂಜುನಾಥ ರಂಗರಾಜು. ಪಿ ಎಸ್ ಎಸ್ ಇ ಎಮ್ ಆರ್ ಶಾಲೆ ಪ್ರಾಚಾರ್ಯರಾದ ಅರುಣ್ ಪ್ರಸಾದ್ ಬಾಪೂಜಿ ಎಸ್ ಪಿ ಎಸ್ ಎಸ್ ಕಾಲೇಜಿನ ರಾಜೇಶ್ ಪ್ರಸಾದ್, ಉಮಾಪತಿ ಸರ್ , ವಿಲ್ಸನ್  ಮುಂತಾದವರು ಉಪಸ್ಥಿತರಿದ್ದರು.