ಮಾಡಗಿರಿ:ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಜಾಥಾ

ಸಿರವಾರ:ಸೆ.೨೫-ತಾಲೂಕಿನ ಮಾಡಗಿರಿ ಗ್ರಾಮದ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಡೆಂಗ್ಯೂ ಜ್ವರದ ಬಗ್ಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿ ತಮ್ಮ ತಮ್ಮ ಮನೆಯಲ್ಲಿರುವ ಬ್ಯಾರಲ್ ಡ್ರಾಮಾ ಮತ್ತು ಇನ್ನಿತ್ತರ ಪರಿಕರಗಳನ್ನು ವಾರಕ್ಕೆ ಮೂರು ಬಾರಿ ಕಡ್ಡಾಯವಾಗಿ ತೊಳೆಯಬೇಕು.
ಯಾವುದೇ ಜ್ವರ ಇದ್ದರೂ ರಕ್ತಪರೀಕ್ಷೆ ಮಾಡಿಸಿ ಕಡ್ಡಾಯವಾಗಿ ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಿ ಎಂದು ತಿಳಿಸಲಾಯಿತು ಮತ್ತು ಇನ್ನಿತರ ಮಾಹಿತಿ ನೀಡಲಾಯಿತು. ಹಾಗೂ ಮಾಡಗಿರಿಯ ಗ್ರಾಮದ ಎಲ್ಲ ವಾರ್ಡ್‌ಗಳಲ್ಲಿ ಶಾಲೆ ಮಕ್ಕಳಿಂದ ಜಾಥಾ ಮಾಡಿಸಿ ಜನರಿಗೆ ಸೊಳ್ಳೆಯ ಬಗ್ಗೆ ಮತ್ತು ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಶ್ರೀಕಾಂತ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಆಶಾ ಕಾರ್ಯಕರ್ತೆ ಹಾಗೂ ಸರಕಾರಿ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.