ಮಾಜಿ ಸ್ಪೀಕರ್ ರಮೇಶಕುಮಾರ ಹಲ್ಲೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ

ರಾಯಚೂರು.ಆ.೦೧- ಕೋಲಾರ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಮಾಜಿ ಸಭಾಪತಿ ರಮೇಶಕುಮಾರ ಅವರ ವರ್ತನೆಯನ್ನು ಜಿಲ್ಲಾ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿ, ಇಂದು ಪತ್ರಕರ್ತರಿಗೆ ಭದ್ರತೆ ಒದಗಿಸುವಂತೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಕಛೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ರಮೇಶ ಕುಮಾರ ಅವರ ಹಲ್ಲೆ ವರ್ತನೆಯನ್ನು ಖಂಡಿಸಲಾಯಿತು. ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮತ್ತು ರಮೇಶಕುಮಾರ ಅವರ ಮಧ್ಯೆ ನಡೆದ ತಿಕ್ಕಾಟದ ಸಂದರ್ಭದಲ್ಲಿ ಇದನ್ನು ಚಿತ್ರೀಕರಣ ಮಾಡಲು ಬಂದ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಒಬ್ಬ ಜವಾಬ್ದಾರಿ ಜನಪ್ರತಿನಿಧಿಗಳಾಗಿ ಗೂಂಡಾ ರೀತಿಯಲ್ಲಿ ವರ್ತಿಸುವ ಮೂಲಕ ಪ್ರಜಾಪ್ರಭುತ್ವದ ವಿರೋಧಿಯ ಧೋರಣೆ ಪ್ರದರ್ಶಿಸಿದ ರಮೇಶಕುಮಾರ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವೈದ್ಯರ ರಕ್ಷಣೆ ಮಾದರಿ ಮಾಧ್ಯಮದವರಿಗೂ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು. ಜಿಲ್ಲಾ ಮಟ್ಟದ ಮಾಧ್ಯಮ ಸಮಿತಿ ಕೂಡಲೆ ಕರಿಯಬೇಕು. ಪತ್ರಕರ್ತರಿಗೆ ಇ-ಶ್ರಮ ಯೋಜನೆ ನೋಂದಣಿಗೆ ಅವಕಾಶ ನೀಡಬೇಕು. ಬಾಕಿಯಿರುವ ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ಕರ್ನಾಟಕ ಕಾರ್ಡ್ ನೀಡಲು ಸೂಚಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ, ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಹಿರೇಮಠ, ವೆಂಕಟಸಿಂಗ್, ಅರವಿಂದ್ ಕುಲಕರ್ಣಿ, ದತ್ತು ಸರ್ಕೀಲ್, ಕೆ.ಸತ್ಯನಾರಾಯಣ, ಶಿವಪ್ಪ ಮಡಿವಾಳ, ಬಸವರಾಜ ನಾಗಡದಿನ್ನಿ, ವೀರಾರೆಡ್ಡಿ, ರಂಗನಾಥ, ಸಿದ್ದಯ್ಯ ಸ್ವಾಮಿ, ವಿಜಯ ಜಾಗಟಗಲ್, ವೆಂಕಟೇಶ, ಧಿರೇಂದರ್ ಕುಲಕರ್ಣಿ, ಪ್ರಸನ್ನ, ಮಲ್ಲಿಕಾರ್ಜುನ, ವೀರೇಶ, ದುರ್ಗೇಶ, ರಾಚಯ್ಯ, ಸಂತೋಷ ಸಾಗರ, ಗೊರೆಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.