ಮಾಜಿ ಸೈನಿಕರಿಗೆ ಪುನರ್ವಸತಿ ನೀಡಲು ಸರ್ಕಾರಕ್ಕೆ ಡಾ.ಶಿವಣ್ಣ ಒತ್ತಾಯ

ರಾಯಚೂರು.ಏ.೧೯- ಮಾಜಿ ಸೈನಿಕರಿಗಗೆ ಪುನರ್ವಸತಿ ಮತ್ತು ನಿವೇಶನ ನೀಡಬೇಕು ಎಂದು ಸುಮಾರು ವರ್ಷಗಳಿಂಗ ಮನವಿ ಮಾಡಿದರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ.ಶಿವಣ್ಣ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಮಾಜಿ ಸೈನಿಕರ ಸ್ಥಿತಿ ಗಂಭೀರವಾಗಿದ್ದು ಸುಮಾರು ಶೇ.೮೦ರಷ್ಟು ಸೈನಿಕರು ಅವರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವಲ್ಲಿ ವಿಫಲಾರಾಗಿದ್ದರೆ.ಸರ್ಕಾರದಿಂದ ದೊರೆಯುವ ಮಾಸಾಶನ ಕುಟುಂಬ ನಿವಾರಣೆಗೆ ಸಾಲುತಿಲ್ಲ ನಮ್ಮ ಕುಟುಂಬಕ್ಕೆ ರಕ್ಷಣೆ ಇಲ್ಲದಂತಗಿದೆ ೧೯೬೬ ರಲ್ಲಿ ಸೈನಿಕರು ನಿವೃತ್ತಿ ಹೊಂದಿದ ನಂತರ ಅವರಿಗೆ ೨ ಎಕರೆ ಜಮೀನು ನೀಡುತ್ತಿತ್ತು ಆದರೆ ಇಂದಿನ ಸರ್ಕಾರ ನಮಗೆ ಯಾವುದೇ ಸವಲತ್ತು ನೀಡುತ್ತಿಲ್ಲ ಜಿಲ್ಲೆಯಲ್ಲಿ ೨೦೧೩ರಲ್ಲಿ ಮಾಜಿ ಸೈನಿಕರಿಗೆ ಮಂಜೂರಾದ ನಿವೇಶನಗಳು ಇದುವರೆಗೆ ನೀಡುತ್ತಿಲ್ಲ ನಮ್ಮ ನ್ನು ಕೇವಲ ಸಭೆ,ಸಮಾರಂಭದಲ್ಲಿ ಮಾತ್ರ ಸನ್ಮಾನಿ ಕಳುಹಿಸುತ್ತಾರೆ.
ನಮ್ಮ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ ಲಿಂಗಸೂಗೂರು ತಾಲೂಕಿನ ಸೈನಿಕ ಮಲ್ಲಿಕಾರ್ಜುನ ಅವರ ಮೇಲೆ ಸುಳ್ಳು ಮೊಕದ್ದಮೆ ಹುಡಿ ಅರೆಸ್ಟ್ ವಾರೆಂಟ್ ನೀಡಿದ್ದಾರೆ ಇದೆ ತರ ಸಾಕಷ್ಟು ದೌರ್ಜನ್ಯ ನಡೆದಿವೆ.
ಮಾಜಿ ಸೈನಿಕರಿಗೆ ಉದ್ಯೋಗದಲ್ಲಿ ಶೇ.೧೦ರಷ್ಟು ಮೀಸಲಾತಿ ಇದ್ದರು ಯಾವುದೇ ಪ್ರಯೋಜನವಾಗಿಲ್ಲ ಹಟ್ಟಿ ಚಿನ್ನದ ಗಣಿಯಲ್ಲಿ ೨೫೨ ಹುದ್ದೆಯಲ್ಲಿ ೧೬೮ ಖಾಲಿ ಹುದ್ದೆಇವೆ ಆದರೆ ನಮ್ಮ ಸೈನಿಕರಿಗೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ.ಜಿಲ್ಲೆಯಲ್ಲಿ ಸುಮಾರು ೨೦೦ಜನ ಸೈನಿಕರಿದ್ದು ಇವರಿಗೆ ಸರ್ಕಾರದಿಂದ ಯಾವುದೇ ಪುನರ್ವಸತಿ ಮತ್ತು ನಿವೇಶನ ನೀಡಿರುವುದಿಲ್ಲ ಅದರಿಂದ ಕೂಡಲೇ ಪುನರ್ವಸತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುಂದರ ಸಿಂಗ್, ಮನೋಹರ್ ಸಿಂಗ್, ಕಿಶನ್ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.