ಮಾಜಿ ಸೈನಿಕನ ಮೇಲೆ ಹಲ್ಲೆ ಕಠಿಣ ಕ್ರಮಕ್ಕೆ ಆಗ್ರಹ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಆಳಂದ:ಮಾ.26: ಪಟ್ಟಣದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪಟ್ಟಣದ ಬಸ್ ನಿಲ್ದಾಣದಿಂದ ತಹಸೀಲ ಕಾರ್ಯಾಲಯದವರೆಗೆ ರ್ಯಾಲಿ ನಡೆಸಿ ತಹಸೀಲದಾರರಿಗೆ ಮನವಿ ಸಲ್ಲಿಸಿದರು.

ಇತ್ತೀಚಿಗೆ ಆಳಂದ ಪಟ್ಟಣದಲ್ಲಿ ಹೋಟೆಲ್ ನಡೆಸುತ್ತಿರುವ ಮಾಜಿ ಸೈನಿಕ 72 ವರ್ಷದ ಹರಿನಂದ ಅವರ ಮೇಲೆ ಇಬ್ಬರು ಕುಡಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ನಡೆಸಿದ್ದಾರೆ ಇದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ನೀಚ ಕೃತ್ಯವನ್ನು ಎಸಗಿರುವ ಆರೋಪಿಗಳ ಮೇಲೆ ರೌಡಿ ಶೀಟರ್ ಓಪನ್ ಮಾಡಿ ಭಾರತೀಯ ದಂಡ ಸಂಹಿತೆ ಪ್ರಕಾರ ಗಡಿಪಾರು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಸೈನಿಕರ ಮೇಲೆ ಇಂತಹ ಕೃತ್ಯಗಳು ಮೇಲಿಂದ ಮೇಲೆ ಜರುಗುತ್ತಿವೆ ಇವಕ್ಕೆ ಕಡಿವಾಣ ಹಾಕಬೇಕು ಅಲ್ಲದೇ ಮಾಜಿ ಸೈನಿಕರಿಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು. ಮುಂದೆ ಈ ರೀತಿಯ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಬಿರಾದಾರ, ಮಾಜಿ ಸೈನಿಕರಾದ ಸಿದ್ರಾಮಪ್ಪಾ ಕುಂಬಾರ. ಪರಮೇಶ್ವರ ಶಿವಗೊಂಡ, ರಾಜೇಂದ್ರ ಬಿರಾದಾರ, ಚಂದ್ರಶೇಖರ ಬಿರಾದಾರ, ಸುರೇಂದ್ರ ಹೊಟ್ಟೆ, ಯಶ್ವಂತರಾವ ಸನಗುಂದ, ದಯಾನಂದ ಸ್ವಾಮಿ, ವಿಲಾಸಬಾಬು, ದತ್ತು, ಆನಂದ ಸೇರಿದಂತೆ ನೂರಾರು ಮಾಜಿ ಸೈನಿಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು.