ಮಾಜಿ ಸೈನಿಕನಿಗೆ ಸನ್ಮಾನ

ವಿಜಯಪುರ,ಜೂ.10 :ಭಾರತೀಯ ಸೇನೆಯಲ್ಲಿ ಸತತ 20 ವರ್ಷಗಳ ಕಾಲ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿ ಸ್ವಗ್ರಾಮ ಲೋಹಗಾಂವಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ತಿಕೋಟಾ ತಾಲೂಕು ಮಾಜಿ ಸೈನಿಕರ ಕಲ್ಯಾಣ ಸಂಘದ ವತಿಯಿಂದ ತಿಕೋಟಾದ ಗೊಲ್ಲಾಳೇಶ್ವರ ಕಾಂಪ್ಲೆಕ್ಸ್ ದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಸಕ್ರಿಯ ಸದಸ್ಯರಾದ ಸಿದ್ಧಾರ್ಥ ಛಲವಾದಿ, ಶ್ರೀಶೈಲ ಭೂಸಗೊಂಡ, ಹನಮಂತ ಜಂಬಗಿ, ಕಲ್ಲಪ್ಪ ಮಾಳಿ, ಶ್ರೀಶೈಲ ಮಂಟೂರ, ಸುಭಾಸ ಖೋತ, ರವಿ ಒಳಸಂಗ, ಶ್ರೀಶೈಲ ಒಳಸಂಗ, ಅಮೋಘಸಿದ್ಧ ಕಳ್ಳಿ, ಗೋಪಾಲ ನಿಡೋಣಿ, ಸದಾಶಿವ ಮೇಲಿನಕೇರಿ, ಸಂಜಯ ವಳಸಂಗ, ಅಣ್ಣಾಸಾಬ ಖೋತ, ಬಾಬು ಖೋತ, ಚಿದಾನಂದ ವಳಸಂಗ, ಪಿ.ಎಸ್.ಪೀಡಕರ ಹಾಗೂ ನಾಗಪ್ಪ ಕೋಳಿ ಉಪಸ್ಥಿತರಿದ್ದರು.