
ಸಂಜೆವಾಣಿ ವಾರ್ತೆ
ಜಗಳೂರು.ಆ.೬; ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಎರಡನೆ ಅವಧಿಯ ಗ್ರಾ.ಪಂ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾದಮುತ್ತನಹಳ್ಳಿ ಮಾಜಿ ಸೈನಿಕ ಸಿದ್ದಪ್ಪ ಹಾಗೂ ಉಪಧ್ಯಾಕ್ಷರಾಗಿ ದೇವಿರಮ್ಮ ಶಿವಣ್ಣ ಆಯ್ಕೆಯಾಗಿದ್ದಾರೆ.ಅಣಬೂರು ಗ್ರಾ.ಪಂ ಎರಡನೇ ಅವಧಿಯ ಚುನಾವಣೆಗೆ ಸಾಮಾನ್ಯ ಸ್ಥಾನಕ್ಕೆ ಅಧ್ಯಕ್ಷ ಸ್ಥಾನ ಹಾಗೂ ಉಪಧ್ಯಾಕ್ಷ ಸ್ಥಾನಕ್ಕೆ ಅನುಸೂಚಿತ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎರಡು ಉಮೇಧಾರಿಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಉಮೇಧಾರಿಕೆ ಸಲ್ಲಿಸ ಲಾಗಿತ್ತು. ಚುನಾವಣೆಯ ಫಲಿತಾಂಶದಲ್ಲಿ ಮಾದ ಮುತ್ತನಹಳ್ಳಿ ಸಿದ್ದಪ್ಪ ೧೨ ಮತಗಳು ಪಡೆದು ಗೆಲುವಿನ ನಗೆ ಬೀರಿದ್ದಾರೆ ಅಲ್ಲದೆ ದೇವಿರಮ್ಮ ೧೨ ಮತಗಳಿಸಿ ಉಪಧ್ಯಾಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಹಾಗೂ ಸಿಡಿಪಿಓ ಇಲಾಖೆ ಅಧಿಕಾರಿ ಬೀರೇಂದ್ರಕುಮಾರ್ ಅಧಿಕೃತವಾಗಿ ಘೋಷಿಸಿದ್ದರು.೨೨ ಜನ ಬಲ ಹೊಂದಿರುವ ಅಣಬೂರು ಗ್ರಾಮ ಪಂಚಾಯಿತಿಯಲ್ಲಿ ಸಿದ್ದಪ್ಪ ಅವರಿಗೆ ೧೨ ಸದಸ್ಯರು ಮತ ನೀಡಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅಲ್ಲದೆ ಜೋತಿಪುರ ನಾಗರಾಜ್ ಅವರನ್ನು ಎರಡು ಮತಗಳ ಅಂತರದಲ್ಲಿ ಸೋಲುಣಿಸಿದ್ದಾರೆ.ಈ ಸಂದರ್ಭದಲ್ಲಿ ಗ್ರಾ.ಪಂ ಸರ್ವ ಸದಸ್ಯರು ಹಾಗೂ ಪಿಡಿಓ ಓಬಣ್ಣ,ಗ್ರಾ.ಪಂ ಸಿಬ್ಬಂದ್ದಿಗಳು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಬೇಂದ್ರಪ್ಪ ಸೇರಿದ್ದಂತೆ ಹಲವರಿದ್ದರು.