ಮಾಜಿ ಸಿಎಂ ಸಿದ್ದರಾಮಯ್ಯಆಪ್ತ ಮಲ್ಲೇಶ ವಿರುದ್ಧ ವಿಪ್ರ ಸಮಾಜ ಪ್ರತಿಭಟನೆ

ಆಳಂದ:ನ.20: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತರಾದ ಪ. ಮಲ್ಲೇಶ ಅವರು ಬ್ರಾಹ್ಮಣ ಸಮಾಜ ಹಾಗೂ ಹಿಂದೂ ಸಮಾಜದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದರ ವಿರುದ್ಧ ಇಲ್ಲಿನ ಬ್ರಾಹ್ಮಣ ಸಮಾಜ (ವಿಪ್ರ) ಬಾಂಧವರು ಪ್ರತಿಭಟನೆ ನಡೆಸಿದರು.

ಅಲ್ಲದೆ, ಪ. ಮಲ್ಲೇಶ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜಯಕುಮಾರ ಕೋಥಳಿಕರ್ ನೇತೃತ್ವದಲ್ಲಿ ಸಮಾಜ ಬಾಂಧವರು ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಶನಿವಾರ ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.

ಅವಹೇಳನಕಾರಿ ಹೇಳಿಕೆ ನೀಡಿದ ಪ. ಮಲ್ಲೇಶ ಅವರು ಮೈಸೂರಿನ ಸಮಾರಂಭದಲ್ಲಿ ಮಾತನಾಡಿ ಬ್ರಾಹ್ಮಣ ಸಮುದಾಯ ಮತ್ತು ವೇದ ಉಪನಿಷತ್ತು ಹಾಗೂ ಲಿಂಗಾಯತ ಮತ್ತು ಒಕ್ಕಲಿಗ ಮಠಗಳ ವಿರುದ್ದ ಅಲ್ಲದೇ ಸವೋಚ್ಚ ನ್ಯಾಯಾಧೀಶರನ್ನು ನಿಂದಿಸಿದ್ದಾರೆ ಎಂದು ಪ್ರಮುಖಡರು ಖಂಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಮ್ಮುಖದಲ್ಲಿ ಈ ಘಟನೆ ನಡೆದರು. ಅವರು ಯಾವುದೇ ಪತ್ರಿಕ್ರೀಯೆ ನೀಡಿರುವುದಿಲ್ಲ ಅತ್ಯಂತ ಖಂಡನೀಯ ವಿಷಯ ಕಾಂಗ್ರೇಸ ಪಕ್ಷದ ಹಿರಿಯ ರಾಜಕಾರಣಿಗಳಾದ ಆರ್.ವಿ. ದೇಶಪಾಂಡೆ, ರಮೇಶಕುಮಾರ, ದಿನೇಶ ಗುಂಡುರಾವ ಇವರು ಬ್ರಾಹ್ಮರೇ ಅಂತಹ ಗೊತ್ತಿದರೂ ಕೂಡಾ ತಮ್ಮ ರಾಜಕೀಯಕ್ಕಾಗಿ ಬ್ರಾಹ್ಮಣರನ್ನು ಇತರೆ ಜಾತಿ ಪದ್ದತಿ ಮತ್ತು ಕಟ್ಟು ಪಾಡು ನಿಂದಿಸಿರುವುದು ವೈಯಕ್ತಿಕವಾಗಿ ಜಾತಿ ನಿಂದನೆ ಮಾಡಿ ಭಾವನೆಗಳ ನೋವುಂಟು ಮಾಡಿದ ಪಾ ಮಲ್ಲೇಶ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬರೆದ ಮನವಿ ಪತ್ರವನ್ನು ನಾಡ ತಹಸೀಲ್ದಾರ ಶ್ರೀನಿವಾಸ್ ಕುಲಕರ್ಣಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ವಿಜಯಕುಮಾರ ಕೋಥಳಿಕರ್,

ಕಿಶೋರ್ ಕುಲಕರ್ಣಿ, ಹಿರಿಯರಾದ ಮಾರುತಿರಾವ್ ಕುಲ್ಕರ್ಣಿ ಮುನ್ನೊಳ್ಳಿ, ಸತೀಶ್ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಭೀಮಾಶಂಕರ ರಾಜೋಳಕರ, ಗುಂಡೇರಾವ ಜೋಶಿ, ವಸುಧಾ ಕುಲಕರ್ಣಿ, ಜಯಶ್ರೀ ದೀಕ್ಷಿತ್, ಗೀತಾ ಮುಜುಮದಾರ್, ಪದ್ಮಾ ಜೋಶಿ, ವಿದ್ಯಾದರ ಕುಲಕರ್ಣಿ, ಪ್ರಕಾಶ್ ಕುಲಕರ್ಣಿ, ವಿಲಾಸ ಪೆÇೀತನಿಸ, ಕಿಶೋರ್ ದೇಶಪಾಂಡೆ, ಅರುಣ್ ಜೋಶಿ ಸೇರಿದಂತೆ ಇತರರು ಇದ್ದರು.