ಮಾಜಿ ಸಿಎಂ ಪ್ರವಾಸ

ಬಾದಾಮಿ, ನ10:ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷ ನಾಯಕ ಹಾಗೂ ಶಾಸಕ ಸಿದ್ದರಾಮಯ್ಯ ಅವರು ನ.12, 13 ರಂದು ಎರಡು ದಿನಗಳ ಬಾದಾಮಿಗೆ ಆಗಮಿಸಿ ವಿವಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ನ.12 ರಂದು ಶುಕ್ರವಾರ ಮದ್ಯಾಹ್ನ 3 ಗಂಟೆಗೆ ಹಗರಿಬೊಮ್ಮನಹಳ್ಳಿ ಹೆಲಿಪ್ಯಾಡ್ (ವಿಜಯನಗರ ಜಿಲ್ಲೆ) ಹೆಲಿಕಾಪ್ಟರ್ ಮೂಲಕ ಬಾದಾಮಿಗೆ ಸಾಯಂಕಾಲ 5 ಗಂಟೆಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವರು. ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ನ.13 ಶನಿವಾರ ಬೆಳ್ಳಿಗ್ಗೆ 10-30 ಬಾದಾಮಿ ನಗರದ ಮಾರುತೇಶ್ವರ ಸಮುದಾಯ ಭವನದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು. ನಂತರ ಬಾದಾಮಿ ನಗರದಲ್ಲಿರುವ ಹೊಸಗೌಡರ ಸಮುದಾಯ ಭವನ ಉದ್ಘಾಟನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ನಂತರ ಹಾನಾಪೂರ ಎಸ್.ಪಿ.ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಮದ್ಯಾಹ್ನ 3 ಗಂಟೆಗೆ ಹಾನಾಪೂರ ದಿಂದ ಹುಬ್ಬಳ್ಳಿಗೆ ತೆರಳಿ ನಂತರ ರಾತ್ರಿ 8-15 ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.