ಮಾಜಿ ಸಿಎಂ ದಿ.ಎಸ್ ಬಂಗಾರಪ್ಪನವರ ಪುಣ್ಯಸ್ಮರಣೆ

ದಾವಣಗೆರೆ.ಡಿ.೨೭ : ಹಿಂದುಳಿದ ವರ್ಗಗಳ ನೇತಾರರು, ದೇಶ ಕಂಡ ಅಪ್ರತಿಮ ವಾಗ್ಮಿ, ವರ್ಣ ರಂಜಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳಾದ ದಿ. ಎಸ್ ಬಂಗಾರಪ್ಪರವರ ಪುಣ್ಯಸ್ಮರಣೆ ಮಾಡಲಾಯಿತು. ಅಹಿಂದ ಪ್ರಜಾಶಕ್ತಿ ಕಚೇರಿಯಲ್ಲಿ ಕಾರ್ಯಕ್ರಮ ಮಾಡಿ ಬಂಗಾರಪ್ಪ ಅವರನ್ನ ಸ್ಮರಿಸಲಾಯಿತು. ಈ ವೇಳೆ ಅಹಿಂದ ಪ್ರಜಾಶಕ್ತಿ ರಾಜ್ಯಾಧ್ಯಕ್ಷರಾದ ಗೋವಿಂದರಾಜ್ ಮಾತನಾಡಿದ ಕಾವೇರಿ ನದಿ ನೀರು ಬಿಡುವ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದ ರೈತರ ಹಿತಕಾಪಾಡಿದ ಧೀಮಂತ ನಾಯಕರು ಮಾಜಿ ಮುಖ್ಯಮಂತ್ರಿಗಳೆಂದರೆ ಬಂಗಾರಪ್ಪ ಅವರು. ಹಿಂದುಳಿದವರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಅವರ ಆಡಳಿತಾವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದರು. ಮಕ್ಕಳಿಗೆ ದಿನಕ್ಕೆ ಒಂದು ರೂಪಾಯಿ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ್ದರು ಎಂದರು. ಬಳಿಕ ಜಿಲ್ಲಾಧ್ಯಕ್ಷ ಮಾಲತೇಶ್ ಮಾತನಾಡಿ ಬಂಗಾರಪ್ಪ ಅವರು ಹೆಸರಿಗೆ ಮಾತ್ರವಲ್ಲ ಅವರ ಬದುಕೇ ಬಂಗಾರವಾಗಿತ್ತು ಎಂದರು. ವಿಭಿನ್ನ ರಾಜಕಾರಣಿಯಾಗಿದ್ದು ದೀನ ದಲಿತರು ಬಡವರು ಹಿಂದುಳಿದವರ ಪರವಾಗಿ ಹೋರಾಟ ಮಾಡಿ ನ್ಯಾಯ ಒದಗಿಸಿಕೊಟ್ಟಂತವರು. ಅವರ ಆಡಳಿತಾವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳು ಆಗಿದ್ದು ಇಂದಿಗೂ ಅವರ ಹೆಸರನ್ನ ಹೇಳುತ್ತವೆ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಎಸ್ ಕೆ ಸಾಮಾಜಿಕ ಜಾಲತಾಣ ಉಸ್ತುವಾರಿ ಜಿಕ್ರಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಜಾಧವ್,  ಮುಜಾಹಿದ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.