ಮಾಜಿ ಸಿಎಂ ಅಕ್ಕ ಮಾಯಾವತಿ ಜನ್ಮದಿನ ಆಚರಣೆ

ಕಲಬುರಗಿ:ಜ.16: ಬಹುಜನ ಸಮಾಜ ಪಕ್ಷದ ದಕ್ಷಣ ಮತ ಕ್ಷೇತ್ರ ವತಿಯಿಂದ ಬಿ.ಎಸ್.ಪಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿಗಳು ಭಾರತ ಭಾಗ್ಯವಿಧಾತೇ ಆಧುನಿಕ ಭಾರತದ ಅಧಿ ನಾಯಕಿ ಉಕ್ಕಿನ ಮಹಿಳೆ ಅಕ್ಕ ಮಾಯಾವತಿ ಜೀ ಅವರ 67 ನೇ ಜನ್ಮದಿನವನ್ನು ನಗರದ ಜಗತ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಎದುರುಗಡೆ ಹೆಣು ಮಕ್ಕಳ ಕೈಯಿಂದ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಎಸ್‍ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್ ಆರ್ ಬೋಸ್ಲೆ, ಶಿವುಕುಮಾರ್ ನಂದಿ, ಶಿವುಪುತ್ರ, ಯಲ್ಲಾಪ್ಪ ಚಲ್ಲಾವಾದಿ, ಮಾಹದೇವಿ ಭೀಮಪುರೆ, ಶ್ರೀದೇವಿ ನಿಂಬಾಳಕರ್, ಮಶೇಖ ಪಟೇಲ್, ಜೈಭೀಮ ಶಿಂಧೆ, ಅನಿಲ ಟೆಂಗಳ್ಳಿ, ಶರಣು, ಹುಚ್ಚಪ್ಪ ವಠರ್, ಉಮೇಶ ಸಿತನೂರ ಹಂಗಾರಗಿ, ಮೈಮುಶಾ ನರಸಿಂಗ, ಮುನಿರಶೇಖ್, ಮಹೇಶ್ ಬ್ಯಾಡರಜಿಗಿ, ರವಿ ಕೂಂಬಿನ್, ಸಿದ್ಧಾರ್ಥ ಬಂದು, ಬಸವರಾಜ ನಿಂಗದಳ್ಳಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು, ಮಹಿಳೆಯರು, ಕಾರ್ಯಕರ್ತರು ಇದ್ದರು.