ಮಾಜಿ ಸಭಾಪತಿ ರಮೇಶ್ ಕುಮಾರ್ ಹೇಳಿಕೆ ಖಂಡನೀಯ

ಮಾಲೂರು ಏ.೨೫- ಹಿಂದುಳಿದ ವರ್ಗಗಳ ರಾಷ್ಟ್ರ ನಾಯಕ ಈ ದೇಶ ಕಂಡ ಶ್ರೇಷ್ಠ ಅಭಿವೃದ್ಧಿಯ ನೇತಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂಬ ಶನಿ ಜೂ.೪ ಯಾವಾಗ ಬರುತ್ತದೆ ಆಗ ದೇಶಕ್ಕೆ ಹಿಡಿದಿರುವ ಶನಿ ತೊಲಗುತ್ತದೆ ಎಂಬ ಹೇಳಿಕೆಯನ್ನು ನೀಡಿರುವ ವಿಧಾನ ಸಭೆಯ ಮಾಜಿ ಸಭಾಪತಿ ಕೆ.ಆರ್. ರಮೇಶ್ ಕುಮಾರ್ ಅವರ ಹೇಳಿಕೆಯನ್ನು ತಾಲೂಕು ಗಾಣಿಗರ ಸಂಘ ಹಾಗೂ ಯುವಕ ಸಂಘ ಖಂಡಿಸುತ್ತದೆ ಎಂದು ಅಧ್ಯಕ್ಷ ಎಸ್‌ಎಂ ರಮೇಶ್ ತಿಳಿಸಿದ್ದಾರೆ
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿಕೊಟ್ಟ ಸಂವಿಧಾನದ ಆಶಯದಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗೆ ಹಗಲಿರಲು ಶ್ರಮಿಸುತ್ತಿದ್ದಾರೆ ಈ ದೇಶದ ಜನರ ಆಶೀರ್ವಾದದಿಂದ ಎರಡು ಬಾರಿ ಪ್ರಧಾನಮಂತ್ರಿಯಾಗಿ ಬಡವರು ಮಹಿಳೆಯರು ರೈತರು ದೀನ ದಲಿತರು ಹಿಂದುಳಿದ ವರ್ಗದವರು ಕಾರ್ಮಿಕರ ಪರವಾಗಿ ಹಲವಾರು ಯೋಜನೆಗಳನ್ನು ರೂಪಿಸುವುದರ ಮೂಲಕ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಶಕ್ತಿಯನ್ನು ತುಂಬುತ್ತಿದ್ದಾರೆ ನರೇಂದ್ರ ಮೋದಿಯವರ ಆಡಳಿತ ಕಾರ್ಯವೈಖರಿಯನ್ನು ಸಹಿಸದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಶ್ರೀನಿವಾಸಪುರ ತಾಲೂಕಿನ ಮಾಜಿ ಶಾಸಕ ಹಾಗೂ ಸಚಿವರಾದ ಕೆ ಆರ್ ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಸಭೆಯಲ್ಲಿ ಜೂನ್ ನಾಲ್ಕು ಯಾವಾಗ ಬರುತ್ತದೆ ಈ ದೇಶದ ಉನ್ನತ ಪದವಿಯಲ್ಲಿ ಇಂದಿರಾ ಗಾಂಧಿ ಕುಳಿತಿದ್ದ ಪ್ರಧಾನ ಮಂತ್ರಿ ಆಸನದಲ್ಲಿ ಶನಿಯಾಗಿ ಕುಳಿತಿದ್ದು ಈ ದೇಶದಿಂದ ಯಾವಾಗ ತೊಲಗುತ್ತದೆ ಆಗ ದೇಶಕ್ಕೆ ಉಂಟಾಗಿರುವ ಶನಿ ಬಿಡುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದು ಈ ಹೇಳಿಕೆಯಿಂದ ಗಾಣಿಗ ಸಮುದಾಯಕ್ಕೆ ತೀವ್ರ ನೋವುಂಟಾಗಿದ್ದು ಗಾಣಿಗ ಸಮಾಜದವರು ಕೆಆರ್ ರಮೇಶ್ ಕುಮಾರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಸಾರ್ವಜನಿಕವಾಗಿ ನರೇಂದ್ರ ಮೋದಿ ಅವರ ಕ್ಷಮೆ ಯಾಚಿಸುತ್ತಿದ್ದಲ್ಲಿ ಮುಂಬರುವ ದಿನಗಳಲ್ಲಿ ಗಾಣಿಗ ಸಮಾಜದವರು ಜಿಲ್ಲೆಯಾದ್ಯಂತ ಹೋರಾಟವನ್ನೇ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ತಾಲೂಕು ಗಾಣಿಗ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸುರೇಶ್ ಮಂಜುನಾಥ್ ನಾಗರಾಜ್ ಯುವಕ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ರವಿಚಂದ್ರ, ಸುನಿಲ್ ಶ್ರೀನಿವಾಸ್, ಮನೋಜ್ ಇನ್ನಿತರರು ಹಾಜರಿದ್ದರು.