
ಹುಮನಾಬಾದ್ :ಆ.14:ಪಟ್ಟಣದ ಕೈಗಾರಿಕಾ ಹೊರವಲಯದ ಪ್ರದೇಶದಲ್ಲಿ ವಿಷಯುಕ್ತ ತ್ಯಾಜ್ಯ ಹೊರಸೂಸುವ 8 ಕಾರ್ಖಾನೆಗಳು ಬಂದ್ ಆಗಿರುವುದು ಮಾಜಿ ಶಾಸಕ ರಾಜಶೇಖರ ಪಾಟೀಲ ಅವರ ಪರಿಶ್ರಮ ದಿಂದ ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಓಂಕಾರ ತುಂಬಾ ಹೇಳಿದರು. ಪಟ್ಟಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಸ್ಯೆ ಕುರಿತು ಹಾಲಿ ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದ ಹೇಳುತ್ತೇವೆ. ಇದೂ ಕೇವಲ 8 ಟೈರ್ ಕಾರ್ಖಾನೆ ಬಂದ್‍ಗೆ ಸೀಮಿತಗೊಳ್ಳದೇ ಸಮಸ್ಯೆ ಉದ್ಭವಕ್ಕೆ ಕಾರಣವಾದ ಇನ್ನೂ ಮೂರಾಲು ಕೆಮಿಕಲ್ ಕಾರ್ಖಾನೆ ಮುಚ್ಚಿಸಬೇಕು. ಸಮಸ್ಯೆ ಬಗೆಹರಿಯದಿದ್ದರೇ ಮುಂಬರುವ ದಿನಗಳಲ್ಲಿ ಮತ್ತೆ ಸಂತ್ರಸ್ತ ಸಮಿತಿಯಿಂದ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು
ಹೇಳಿದರು.
ಈ ಸಂದರ್ಭದಲ್ಲಿ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫಸರಮಿಯ್ಯ, ಮಾಣಿಕರಾವ ಮೋಳಕೇರಿ, ನಿಜಾಮೋದ್ದಿನ್, ಶಿವರಾಯಪ್ಪ ಪಡಪಳ್ಳಿ , ದಿಲೀಪ ಮರಪಳ್ಳಿ, ವೀರಪ್ಪ ಬಿರಾದಾರ, ಮಾನವ ಹಕ್ಕುಗಳ ಆಯೋಗದ ರಾಜ್ಯಾಧ್ಯಕ್ಷ ಬಜರಂಗ್ ತಿವಾರಿ ,ಸೇರಿದಂತೆ ಇತರರು ಇದ್ದರು.