ಮಾಜಿ ಸಚಿವ ರಮೇಶ ಬಂಧನಕ್ಕೆ ಆಗ್ರಹ

ಧಾರವಾಡ,ಮಾ31 : ಸಿಡಿ ಪ್ರಕರಣದಲ್ಲಿ ಆರೋಪಿಯಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಹುಬ್ಬಳ್ಳಿ – ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರರಾದ ರಾಬರ್ಟ್ ದದ್ದಾಪುರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಈಗಾಗಲೇ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಹೇಳಿಕೆಯನ್ನು ನೀಡಿ ತಾನು ಈ ಹಿಂದೆ ನೀಡಿದ ಲಿಖಿತ ಹೇಳಿಕೆಗೆ ಬದ್ದಳೆಂದು ಹೇಳಿದ್ದಾಳೆ. ಇದರ ಅಥ9 ಮಾಜಿ ಸಚಿವ ರಮೇಶ ಜಾರಕಿಹೊಳಿ ಆರೋಪಿ ಎಂದು ತಿಳಿದುಬಂದಿದೆ ಎಂದರು.

ಯುವತಿಯ ಪೆÇೀಷಕರು ಯಾರಾದೂ ಒತ್ತಾಯಕ್ಕೆ ವರ್ತಿಸಿದ್ದು ಜಗಜ್ಜಾಹಿರಾಗಿದೆ. ದಿ. 29-03-2021 ರಂದು ಪುನಃ ಬೆಳಗಾಂವಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡಿ ವಿನಾಕಾರಣ ಕೆಪಿಸಿಸಿ ಅಧ್ಯಕ್ಷರ ಮೇಲೆ ಅಪಾದನೆಯನ್ನು ಮಾಡಿರುತ್ತಾರೆ. ಇದು ಖಂಡನೀಯ. ಬಿಜಾಪುರದ ಈ ಸಂತ್ರಸ್ತೆಯ ಪೆÇೀಷಕರು ಬೆಳಗಾಂವಿಯಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡಿರುವ ಔಚಿತ್ಯವೇನು ಎಂದು ರಾಬರ್ಟ್ ದದ್ದಾಪುರಿ ಪ್ರಶ್ನಿಸಿದ್ದಾರೆ.

ಸಂತ್ರಸ್ತೆಯ ಪೆÇೀಷಕರು ಯಾರ ಒತ್ತಡಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರ ಬೆದರಿಕೆಯಲ್ಲಿ ಮಾತನಾಡುತ್ತಿದ್ದಾರೆ. ಯಾರು ಬರೆದುಕೊಟ್ಟದ್ದನ್ನು ಓದುತ್ತಿದ್ದಾರೆ. ಸಂತ್ರಸ್ತೆಯ ಪೆÇೀಷಕರು ಮಗಳ ಹೇಳಿಕೆಗೆ ವಿರುದ್ಧವಾಗಿ ಏಕೆ ಮಾತನಾಡುತ್ತಿದ್ದಾರೆ. ಇದರಿಂದ ಪೆÇೀಷಕರು ಆರೋಪಿಯ ವಶದಲ್ಲಿರುವುದು ಸ್ಪಷ್ಟಪಡಿಸುತ್ತದೆ
ಎಂದರು.
ಸಂತ್ರಸ್ತೆಯ ಪೆÇೀಷಕರ ಕೌನ್ಸಲಿಂಗನ್ನು ತಕ್ಷಣವೇ ಮಾಡಬೇಕು. ಅಂದಾಗ ಮಾತ್ರ ಸಂತ್ರಸ್ತೆಗೆ ನ್ಯಾಯ ಸಿಗುತ್ತದೆ. ಆರೋಪಿಗಳ ಬಣ್ಣ ಬಯಲಾಗುತ್ತದೆ. ನಿರಪರಾಧಿಗಳಿಗೆ ನ್ಯಾಯ ಸಿಗುತ್ತದೆ. ಈ ಕೂಡಲೇ ಆರೋಪಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬಂಧಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ. ಬಂಧನ ವಿಳಂಬವಾದರೆ ಕಾಂಗ್ರೆಸ್ ಪಕ್ಷದ ಉಗ್ರ ಪ್ರತಿಭಟನೆಯನ್ನು ರಾಜ್ಯ ಸರ್ಕಾರವು ಎದುರಿಸಬೇಕಾಗುತ್ತದೆ ಎಂದು ದದ್ದಾಪುರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಕಿ ಯೂಗಾನಂದ, ಗಂಗಾಧರ ದೂಡವಾಡ, ನಾಗರಾಜ್ ಗುರಿಕಾರ, ಆನಂದ ಜಾಧವ ಉಪಸ್ಥಿತರಿದ್ದರು.