ಮಾಜಿ ಸಚಿವ ಪಿಟಿಪಿ ಕೃಷಿ ಸಹಕಾರಿ ನಿರ್ದೇಶಕ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ:ಜು,13- ಡಿಸಿಸಿ ಬ್ಯಾಂಕ್ ಅಧಿಕಾರ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಇದೀಗ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಈಚೆಗೆ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಅವರು ಹಿರೇಮಲ್ಲನಕೆರೆ ಗ್ರಾಮದ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹಿರೇಮಲ್ಲನಕೆರೆ ಸಹಕಾರಿ ಸಂಘದಲ್ಲಿ ರಾಜೀನಾಮೆಯಿಂದ ಎರಡು ಸ್ಥಾನಗಳು ತೆರವಾಗಿದ್ದವು. ಆಡಳಿತ ಮಂಡಳಿಯವರು ಬದಲಿ ನಿರ್ದೇಶಕರ ಆಯ್ಕೆಗಾಗಿ ವಿಶೇಷ ಸಭೆ ನಡೆಸಿ, ಪಿ.ಟಿ.ಪರಮೇಶ್ವರನಾಯ್ಕ ಮತ್ತು ತಳವಾರ ಶಿವಮ್ಮ ಅವರನ್ನು ನಿರ್ದೇಶಕರನ್ನಾಗಿ ಕೋಅಪ್ ಮಾಡಿಕೊಂಡಿದ್ದಾರೆ.
ಈ ಸಹಕಾರಿಯ ಪ್ರತಿನಿಧಿಯಾಗಿ ಅವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ನಿರ್ದೇಶರಾಗಲು ಬಯಸಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.