ಮಾಜಿ ಸಚಿವ ದಿ. ಸಿ.ಎಸ್ ಶಿವಳ್ಳಿಯವರ ಹುಟ್ಟುಹಬ್ಬ ಆಚರಣೆ

ಕುಂದಗೋಳ,ನ13: ತಾಲೂಕಿನ ಮಾಜಿಸಚಿವ ದಿ ಸಿ.ಎಸ್ ಶಿವಳ್ಳಿಯವರ ಜನ್ಮ ದಿನಾಚರಣೆಯನ್ನು ಹುಬ್ಬಳ್ಳಿಯ ಹಾಗೂ ಯರಗುಪ್ಪಿ ಗ್ರಾಮದ ನಿವಾಸದಲ್ಲಿ ಶಾಸಕಿ ಕುಸುಮಾವತಿ ಸಿ ಶಿವಳ್ಳಿಯವರು ಹಾಗೂ ಕುಟುಂಬಸ್ಥರು ಕೇಕ್ ಕತ್ತರಿಸುವುದರ ಮುಖಾಂತರ ನೆರವೇರಿಸಿದರು.
ಸಿ ಎಸ್ ಶಿವಳ್ಳಿಯವರ ಧರ್ಮ ಪತ್ನಿ ಶಾಸಕಿ ಕುಸುಮಾವತಿ ಸಿ ಶಿವಳ್ಳಿಯವರು ಹಾಗೂ ಅವರ ಮಕ್ಕಳು ಸಿ.ಎಸ್ ಶಿವಳ್ಳಿಯವರ ಸಮಾಧಿಗೆ ಭೇಟಿ ನೀಡಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಂಜೆ ಯರಗುಪ್ಪಿ ಗ್ರಾಮದಲ್ಲಿ ಸಹೋದರರಾದ ಅಡಿವೆಪ್ಪ, ಷಣ್ಮುಖ ಮುತ್ತಪ್ಪ ಅವರ ನೇತೃತ್ವದಲ್ಲಿ ಕುಟುಂಬದ ಸದಸ್ಯರು ಹಾಗೂ ಸಿ.ಎಸ್ ಶಿವಳ್ಳಿಯವರ ಅಭಿಮಾನಿ ಬಳಗದವರು ಕೇಕ್ ಕತ್ತರಿಸಲಾಯಿತು.

ಈ ಸಂದರ್ಭದಲ್ಲಿ ಕುಂದಗೋಳ ಕಲ್ಯಾಣಪುರ ಬಸವನ್ನಜ್ಜನವರು ಅರವಿಂದ ಕಟಗಿ ಉಮೇಶ ಹೇಬಸುರ.ಜಗದೀಶ ಉಪ್ಪಿನ ವೆಂಕನಗೌಡ ಪೆÇಲೀಸ್ ಪಾಟೀಲ ದಯಾನಂದ ಕುಂದುರ್. ಸಕ್ರಪ್ಪ ಲಮಾಣಿ.ಬಾಬಣ್ಣ ಬೆಟಗೇರಿ.ಬಿ.ಎಂ ಕೋರಿ.ಮಂಜುರೆಡ್ಡಿ ಬಿಡನಾಳ ದೃತಿ ಸಾಲ್ಮನಿ. ಗೀರಿಜಾ ಧೂಳಿಕೊಪ್ಪ.ಇರ್ಷಾದ್ ಹುಳಗುರ ರಾಯೆಸಾಬ ಕಳ್ಳಿಮನಿ, ರಾಯೆಸಾಬ ಕಳ್ಳಿಮನಿ, ಮೋಹನ ಪಾಟೀಲ, ನಿಂಗಪ್ಪ ಹಳ್ಳಿಕೇರಿ, ಜಗದೇವಯ್ಯ ಮಠದ, ಜಿ.ಡಿ ಘೋರ್ಪಡೆ, ಮಾಂತೇಶ ತಡಸದ, ಗಂಗಾಧರ ಪಾನಿಗಟ್ಟಿ ಸೇರಿದಂತೆ ಸಮಸ್ತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸಿ ಎಸ್ ಶಿವಳ್ಳಿಯವರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.