ಮಾಜಿ ಸಚಿವ ದಿ. ಶ್ರೀ ರಂಗ ದೇವರಾಯಲು ಅವರ ನಿವಾಸಕ್ಕೆ ಭೇಟಿ

ರಾಯಚೂರು,ಸೆ.೦೨-
ಮಾಜಿ ಸಚಿವರು, ಹಿರಿಯ ರಾಜಕಾರಣಿಗಳಾದ ದಿ. ಶ್ರೀ ರಂಗ ದೇವರಾಯಲು ಅವರ ಅಗಲಿಕೆಯಿಂದಾಗಿ ಗಂಗಾವತಿಯಲ್ಲಿರುವ ಅವರ ನಿವಾಸಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೇಟಿ ನೀಡಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯರಾದ ಕೆ ಶಾಂತಪ್ಪ, ಜಯವಂತರಾವ್ ಪತಂಗೆ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.