ಮಾಜಿ ಸಚಿವ ದಿವಾಕರ ಬಾಬು  ಜನ್ಮ ದಿನಾಚರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.07: ಮಾಜಿ ಸಚಿವ, ಕಾಂಗ್ರೆಸ್  ಮುಖಂಡ ಎಂ.ದಿವಾಕರ ಬಾಬು ಅವರ  65 ನೇ  ಜನ್ಮ‌ದಿನದ ಅಂಗವಾಗಿ  ದಿವಾಕರ ಬಾಬು ಅಭಿಮಾನಿ ಬಳಗದಿಂದ  ಇಂದು ಜನ್ಮ ದಿನ ಆಚರಿಸಲಾಯಿತು.
ಇದರಂಗವಾಗಿ ಜಿಲ್ಲಾ ಫುಟ್  ಬಾಲ್  ಕ್ರೀಡಾಂಗಣದಲ್ಲಿ ಫುಟ್ ಬಾಲ್ ಪಂದ್ಯಾವಳಿಯನ್ನು ಆಯೋಜಿಲಾಗಿತ್ತು ಇದರಲ್ಲಿ  ಜಿಂದಾಲ್, ಹೊಸಪೇಟೆ ನಗರ ಸೇರಿದಂತೆ 12 ತಂಡಗಳು ಭಾಗವಹಿಸಿದ್ದವು. ಇಂದು ಸಂಜೆ ಅಂತಿಮ ಪಂದ್ಯಾವಳಿ ನಡೆಯಲಿದೆ.
ನಗರದ ಗಂಗಪ್ಪ ಜಿನ್ ನಲ್ಲಿ  ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಸಿಹಿ ವಿತರಿಸಿತು. ಅಲ್ಲದೆ  ಅನ್ನದಾನ ಹಮ್ಮಿಕೊಂಡಿತ್ತು. 
ಕಾರ್ಯಕ್ರವದಲ್ಲಿ  ಕಾಂಗ್ರೆಸ್ ಮುಖಂಡರಾದ ಲಕ್ಷೀ ನಾರಯಣ ( ಬುಜ್ಜಿ) ಪಾಲಿಕೆ ಮಾಜಿ ಸದಸ್ಯ ಎಂ.ರಾಘವೇಂದ್ರ.ಎಂ.ಕ್ರಿಷ್ಣ ಕುಮಾರ್.ಎಂ ದುರ್ಗಾ ಪ್ರಸಾದ್.ದಾರದ ಮಿಲ್ ಶೇಖರ್ ಬಾಬು.ಸೂರಿ.ರಾಮಾಂಜಿನಿ ಮೊದಲಾದವರು  ಭಾಗವಹಿಸಿದ್ದರು.