
ಚಿಕ್ಕಬಳ್ಳಾಪುರ: ಅಧಿಕಾರ ಕಳೆದುಕೊಂಡ ಮಾಜಿ ಸಚಿವ ಡಾ. ಕೆ ಸುಧಾಕರ್ ಅವರು ಹತಾಶೆ ಮನೋಭಾವನೆಯಿಂದ ಮನ ಬಂದಂತೆ ಹಾಲಿ ಶಾಸಕ ಪ್ರದೀಪ್ ಈಶ್ವರ್ ಅವರ ವಿರುದ್ಧ ನಾಲಿಗೆ ಹರಿಯ ಬಿಡುತ್ತಿರುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ ಎಂದು ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ತಿಳಿಸಿದರು
ಅವರು ಚಿಕ್ಕಬಳ್ಳಾಪುರ ನಗರದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಮಾಜಿ ಸಚಿವ ಡಾ. ಕೆ ಸುಧಾಕರ್ ರವರು ರಾಜಕೀಯ ಸ್ವ ಹಿತಾಸಕ್ತಿಯಿಂದ ಅವರಿಗೆ ಬೇಕಾದ ವ್ಯಕ್ತಿಯೋಬ್ಬರಿಗೆ ಅಧಿಕಾರ ದೊರಕಿಸಿಕೊಡುವ ಹುನ್ನಾರ ಹೊಂದಿ ಅನವಶ್ಯಕತೆಯಿಂದ ಪೂರ್ವಗ್ರಹ ಪೀಡಿತರಾಗಿ ಹಾಲು ಒಕ್ಕೂಟವನ್ನು ಹೊಡೆದಿದ್ದು ಈ ವಿಚಾರವಾಗಿ ಹಾವೇರಿ ಜಿಲ್ಲೆಗೆ ಒಂದು ನ್ಯಾಯ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಂದು ನ್ಯಾಯವೇ ಎಂದು ಭರಣಿ ವೆಂಕಟೇಶ್ ಅವರು ನೇರವಾಗಿ ಆರೋಪ ಮಾಡಿದರು.
ಹಾವೇರಿಯ ಹಾಲು ಒಕ್ಕೂಟದಲ್ಲಿ ಕೇವಲ ಮೂರು ಮುಂದಿ ನಿರ್ದೇಶಕರ ಜೊತೆಗೆ ಇವರೊಂದಿಗೆ ನಾಮ ನಿರ್ದೇಶಕರನ್ನು ಸೇರಿಸಿಕೊಂಡು ಆಡಳಿತ ಮಂಡಳಿಯನ್ನು ರಚಿಸಿದರು ಆದ್ರೆ ಚಿಮುಲ್ ನಲ್ಲಿ ಎಂಟು ಮಂದಿ ನಿರ್ದೇಶಕರು ಇದ್ದರೂ ಸಹ ಅವರನ್ನ ಕಡೆಗಣಿಸಿ ಆಡಳಿತ ಮಂಡಳಿಯನ್ನು ಸ್ಥಾಪಿಸದೆ ಏಕಪಕ್ಷಿಯವಾಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದರು.
ಕೊಚಿಮುಲ್ ನ ಮಾಜಿ ನಿರ್ದೇಶಕರೊಬ್ಬರು ಬಜಾಜ್ ಲಾಮ್ ಲೆಡ್ ಬೈಕ್ ಹೊಂದಿದ್ದವರು ಇಂದು ಎಷ್ಟು ಕೋಟಿಗೆ ಇದ್ದಾರೆ ಎಂಬುದನ್ನು ಮೆಗಾ ಡೈರಿಯ ಕಿಟಕಿ ಬಾಗಲುಗಳ ಗೋಡೆಗೆ ಕಿವಿ ಕೊಟ್ಟು ಕೇಳಿಸಿಕೊಂಡರೆ ಇವರ ಕರ್ಮಕಾಂಡ ಬಯಲಾಗುತ್ತದೆ ಎಂದು ಕೋಚಿಮುಲ್ ಮಾಜಿ ನಿರ್ದೇಶಕ ಕೆ ವಿ ನಾಗರಾಜ್ ಅವರ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದ ಅವರು ಕೊಚಿಮಲ್ ಇಂದು ಆರ್ಥಿಕವಾಗಿ ಸದೃಢವಾಗಿದೆ ನಮ್ಮಲ್ಲಿ 200 ಕೋಟಿ ಫಂಡ್ ಇದೆ, ನಾವು ನಮ್ಮದೇ ಆದ ಸ್ವಾವಲಂಬನೆಯಿಂದ ಆರ್ಥಿಕ ಪ್ರಗತಿಯನ್ನು ಸಾಧಿಸಲಿದ್ದೇವೆ ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿಯೂ ಸಹ ಸುಮಾರು 40 ಕೋಟಿ ರೂಗಳಲ್ಲಿ ಐಸ್ ಕ್ರೀಮ್ ಘಟಕವನ್ನ ಸ್ಥಾಪಿಸಲಾಗುತ್ತಿದೆ ಇದಕ್ಕೂ ಸಹ ಮಾಜಿ ಸಚಿವ ಸುಧಾಕರ್ ಅವರು ಖ್ಯಾತೆ ತೆಗೆಯುತ್ತಿರುವುದು ಅವರ ಸಣ್ಣತನವನ್ನು ಎತ್ತಿ ತೋರಿಸುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ಇಲ್ಲಿನ ಮೆಗಾ ಡೈರಿಯಲ್ಲಿ ಹಾಲಿನ ಪಾಕೆಟ್ ಘಟಕವನ್ನು ಸಹ ಸ್ಥಾಪಿಸಲು ಮುಂದಾಗಿದ್ದೇವೆ ಹಾಗೂ 2024ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಯಲಿದೇ ಎಂದರು.
ದಸಂಸ ಮುಖಂಡ ಸುಧಾವೆಂಕಟೇಶ್ ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿನ ಬಡ ವಿದ್ಯಾರ್ಥಿಗಳ ಉದ್ದೇಶಕ್ಕಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೇವಲ ಅತಿಥಿಯಾಗಿ ಭಾಗವಹಿಸಿದ್ದರೇ ವಿನಹ ಮಾಜಿ ಸಚಿವ ಡಾ: ಕೆ.ಸುಧಾಕರ್ ಅವರಂತೆ ಅಧಿಕಾರದ ಆಸೆಗಾಗಿ ಬಾಂಬೆಗೆ ಮೋಜು-ಮಸ್ತಿಗಾಗಿ ಶ್ರೀಲಂಕಾ ಹಾಗೂ ಮಲೇಶಿಯಾಗೆ ಹೋಗಲಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಚೇನಹಳ್ಳಿ ಪ್ರಕಾಶ್ ಮಾತನಾಡಿ, ಇತ್ತೀಚಿಗೆ ಮಾಜಿ ಸಚಿವ ಡಾ. ಕೆ ಸುಧಾಕರ್ ಅವರಿಗೆ ಅಧಿಕಾರ ಕೈತಪ್ಪಿದ್ದು ಸುತ್ತಮುತ್ತಲು ಹೊಗಳು ಭಟ್ಟರು ಇಲ್ಲದೆ ವಿಲವಿಲ ಎಂದು ಒದ್ದಾಡುತ್ತಿದ್ದು ಈ ರೀತಿಯ ಅವರ ವರ್ತನೆಗೆ ಕಾರಣ ಅವರೇ ನಿರೀಕ್ಷಿಸದ ಸೋಲಾಗಲಿದ್ದು ಇವರು ಇನ್ನೂ ಬುದ್ಧಿ ಕಲಿಯದಿದ್ದರೆ ಜನರೇ ಅವರನ್ನು ಇನ್ನಷ್ಟು ತಿರಸ್ಕಾರ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದು ನಮಗೂ ಸಹ ಇಂತಹ ಹೋರಾಟಗಳನ್ನ ಮಾಡುವುದು ಗೊತ್ತಿದೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಇದೆಲ್ಲವನ್ನು ಸೂಕ್ಷ್ಮತೆಯಿಂದ ನೋಡುತ್ತಿದ್ದಾರೆ ಇದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರವನ್ನೂ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೆಸ್ ಸೂರಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಾಬಾಜಾನ್, ಮಾಜಿ ಸೈನಿಕ ಪಿಎಂ.ರಘು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನಾರಾಯಣಮ್ಮ, ಮುಖಂಡರುಗಳಾದ ಗವಿರಾಯಪ್ಪ, ಮಂಗಳಪ್ರಕಾಶ್, ಮಮತಾ ಮೂರ್ತಿ ಮೋಹನ್ ರೆಡ್ಡಿ, ಜಾವಿದ್ ಭಾಷಾ, ಸೇರಿದಂತೆ ಇನ್ನಿತರರು ಹಾಜರಿದ್ದರು