ಮಾಜಿ ಸಚಿವ ಅರಗಜ್ಞಾನೇಂದ್ರ ಬಂಧನಕ್ಕೆ ಆಗ್ರಹ

ಇಂಡಿ:ಆ.7: ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಇವರು ಕೇಂದ್ರ ವಿರೋಧ ಪಕ್ಷದ ನಾಯಕ , ಎ.ಐ.ಸಿ.ಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಹೇಳಿಕೆ ನೀಡಿರುವದರ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂಡಿ, ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ಮಾಡಿ ನೂರಾರು ಕಾರ್ಯಕರ್ತರು ಸೇರಿ ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಮುಜಗೊಂಡ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಡಿ.ಎಸ್ ಎಸ್ ಸಂಚಾಲಕ ರಮೇಶ ನಿಂಬಾಳಕರ್ ಮಾತನಾಡಿ ಕೇಂದ್ರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಇಡೀ ದಲಿತ ಸಮುದಾಯ ಶ್ರೇಷ್ಠ ನಾಯಕ , ಹಿಂದಿನ ಬಿಜೆಪಿ ಸರಕಾರದ ಗೃಹ ಸಚಿವ ಅರಗಜ್ಞಾನೇಂದ್ರ ಖರ್ಗೇಜಿ ಸುಟ್ಟ ಕರಕಲ ಕಟ್ಟಿಗೆಗೆ ಹೋಲಿಸಿದ್ದಾರೆ. ಉತ್ತರ ಕರ್ನಾಟಕದ ಜನರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಇಂತಹ ವ್ಯಕ್ತಿಯ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಬಂಧಿಸಬೇಕು ಎಸ್.ಸಿ ಎಸ್.ಟಿ ದೌರ್ಜನ್ಯ ಕಾಯ್ದೆಯಡಿ ಶಿಕ್ಷೆಗೆ ಒಳಪಡಿಸಬೇಕು .

ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಬಿಹಾರ, ಉತ್ತರ ಪ್ರದೇಶಜೊತೆಗೆ ಇತರೆ ರಾಜ್ಯಗಳಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಳಾಗುತ್ತಿವೆ. ಇತೀಚಿಗೆ ಮಣಿಪುರದಲ್ಲಿ ಮಹಿಳೆಯರನ್ನು ಅತ್ಯಾಚಾರವೇಸಗಿ  ಕೊಲೆ ಮತ್ತು ಬೆತ್ತಲೆ ಮೇರವಣಿಗೆ ಮಾಡಿದ ದುಸ್ಕರ್ಮಿಗಳನ್ನು ಕೂಡಲೇ ಕಠೀಣ ಶಿಕ್ಷೆಗೆ ಒಳಪಡಿಸಬೇಕು,  ಜಾರ್ಖಂಡ ರಾಜ್ಯದಲ್ಲಿ ದಲಿತ ಮಹಿಳೆಗೆ ಬೆತ್ತಲೆ ವಿವಸ್ತ್ರಗೋಳಿಸಿ  ದೌರ್ಜನ್ಯಗೋಳಿಸಿದ ಆರೋದಡಿ ಗಡಿ ಪಾರು ಮಾಡಿ  ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸರಕಾರದಿಂದ 10 ಲಕ್ಷ ರೂ ಕುಟುಂಬದ ಒಬ್ಬ  ಸದಸ್ಯರಿಗೆ ಉದ್ಯೋಗ ಕೊಡಬೇಕು.

 ಸ್ಥಳೀಯ ತಾಲೂಕಾಢಳಿತ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ  ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಿಜೆಪಿ ಇಂಡಿ ದಲಿತ ಸಂಘಟನೆಗಳು ಹಪ್ತಾವಸೂಲಿ ಸಂಘಟನೆಗಳಾಗಿವೆ  ಎಂದು  ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ ಹೇಳಿಕೆ ನೀಡಿದ್ದಾರೆ. ಕೆಳ ಸಮುದಾಯಕ್ಕೆ ನ್ಯಾಯ ನೀಡುವ ಸಮಾಜ ಕಲ್ಯಾಣ ಇಲಾಖೆಯ ಒಬ್ಬ ಅಧಿಕಾರಿಯೇ ಇಂತಹ ಲಿಕೀಳುಮಟ್ಟದ ಮಾತುಗಳಾಡಿರುವುದು  ಇಡೀ ದಲಿತ ಸಂಘಟನೆಗಳಿಗೆ ನೋವನ್ನುಂಟ್ಟು ಮಾಡಿದಂತಾಗಿದೆ. ಕೂಡಲೆ ಸಮಾಜ ಕಲ್ಯಾಣ ಇಲಾಖೆಯಿಂದ ತಗೆದು ಹಾಕಿ ವರ್ಗಾವಣೆಗೋಳಿಸಡಬೇಕು ಎಂದು ಒಂದು ವೇಳೆ ವರ್ಗಾವಣೆ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂಧರ್ಬದಲ್ಲಿ ರೇವಣಸಿದ್ದಮಸಳಿಕೇರಿ, ಧರೇಪ್ಪ ಮಂದೋಲಿ, ರಾಮಚಂದ್ರ ಗುಡಮಿ, ರಾಜು ಸಾಲೋಟಗಿ ಹಾಗೂ ಅನೇಕ ಮುಖಂಡರು ಇದ್ದರು.