ಮಾಜಿ ಸಚಿವೆ ಉಮಾಶ್ರೀ ಮನೆ ಕಳವು: ಇಬ್ಬರು ಆರೋಪಿಗಳ ಸೆರೆ

ಬಾಗಲಕೋಟೆ,ನ.8-ಮಾಜಿ ಸಚಿವೆ ಉಮಾಶ್ರೀ ಮನೆ ಕಳವು ಪ್ರಕರಣ ಸಂಬಂಧ ಒಂದೇ ವಾರದಲ್ಲಿ ಖದೀಮರನ್ನು
ತೇರದಾಳ ಪೊಲೀಸರು ಬಂಧಿಸಿದ್ದಾರೆ. ಜಮಖಂಡಿಯ ಯಲ್ಲಪ್ಪ ಗಡ್ಡಿ ಹಾಗೂ ಹಾಗೂ ಮುಧೋಳದ ದುರ್ಗಪ್ಪ ವಾಲ್ಮೀಕಿ ಬಂಧಿತ ಆರೋಪಿಗಳಾಗಿದ್ದಾರೆ.
ನಗರದ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀಯವರ ನಿವಾಸದಲ್ಲಿ ನವೆಂಬರ್ 2 ರಂದು ಕಳ್ಳತನವಾಗಿತ್ತು. ಮಾಜಿ ಸಚಿವೆ ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಗೆ ಉಮಾಶ್ರೀ ದೂರು ಕೊಟ್ಟಿದ್ದರು.
ಸದ್ಯ, ಬಂಧಿತರಿಂದ 1.94 ಲಕ್ಷ ರೂಪಾಯಿಯನ್ನು ತೇರದಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರಲ್ಲಿ ಓರ್ವ ಬಂಧಿತ ಆರೋಪಿ ಯಲ್ಲಪ್ಪ ಗಡ್ಡಿ ಅಂತರ್ ಜಿಲ್ಲಾ ಕಳ್ಳನೆಂದು ಸಹ ಮಾಹಿತಿ ಸಿಕ್ಕಿದೆ.