ಸಂಜೆವಾಣಿ ವಾರ್ತೆ
ದಾವಣಗೆರೆ- ಜು.11;ಕಲಘಟಗಿ ಕ್ಷೇತ್ರದ ಮಾಜಿ ಶಾಸಕರೂ ಮತ್ತು ಧರ್ಮನಿಷ್ಠರಾದ ಸಿ.ಎಂ.ನಿಂಬಣ್ಣನವರ (76) ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಅವರು ದಾವಣಗೆರೆ ಶ್ರೀ ರೇಣುಕ ಮಂದಿರದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಸರಳ ಸಜ್ಜನಿಕೆ ವ್ಯಕ್ತಿತ್ವ ಸಂಪಾದಿಸಿಕೊAಡಿದ್ದ ಸಿ.ಎಂ.ನಿAಬಣ್ಣನವರು ಶಿಕ್ಷಣ ಪ್ರೇಮಿಗಳಾಗಿ ಗ್ರಾಮೀಣ ಭಾಗದ ಜನತೆಗೆ ಬಹಳಷ್ಟು ಪ್ರೋತ್ಸಾಹಿಸುತ್ತ ಬಂದ ಜೀವ. ಮಿಶ್ರಿಕೋಟಿ ಕಾಲೇಜಿನ ಪ್ರಾಚಾರ್ಯರಾಗಿ ಮತ್ತು ಆಧುನಿಕ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳು ಹೊಂದಿ ಮುಂದೆ ಬರಬೇಕೆಂದು ಕಳಕಳಿಯಿಂದ ಶ್ರಮಿಸಿದವರಾಗಿದ್ದರು. ವೃತ್ತಿಯಿಂದ ವಕೀಲರಾಗಿದ್ದರೂ ಎಲ್ಲಾ ರಂಗಗಳಲ್ಲಿ ಅಪಾರ ಕಳಕಳಿ ಹೊಂದಿದವರಾಗಿದ್ದರು. ಬಾಳೆಹೊನ್ನೂರು ಜಗದ್ಗುರುಗಳ ಜೊತೆ ನಿಕಟವಾದ ಸಂಬAಧ ಹೊಂದಿದ ಸಿ.ಎಂ.ನಿAಬಣ್ಣನವರು ಕಲಘಟಗಿ ಹನ್ನೆರಡು ಮಠದ ಮಡಿವಾಳ ಶಿವಾಚಾರ್ಯರ ಆಶೀರ್ವಾದವನ್ನು ಪಡೆದಿದ್ದರು. ಅವರ ಅಕಾಲಿಕ ಅಗಲಿಕೆ ಅವರ ಕುಟುಂಬ ವರ್ಗದವರಿಗೆ ಮತ್ತು ಜನತೆಗೆ ಅಪಾರ ದು:ಖವನ್ನು ಉಂಟು ಮಾಡಿದೆ. ಅವರ ಪವಿತ್ರ ಆತ್ಮಕ್ಕೆ ಭಗವಂತ ಮತ್ತು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಚಿರಶಾಂತಿಯಿತ್ತು ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬದವರಿಗೆ ಅವರ ಅಭಿಮಾನಿಗಳಿಗೆ ಕರುಣಿಸಲೆಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.