ಮಾಜಿ ಶಾಸಕ ಲೈಕೋದ್ದಿನ್ ಇನ್ನಿಲ್ಲ

ಬೀದರ :ಮೇ.1: ಕಾಂಗ್ರೆಸ್ ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಲೈಕುದ್ದೀನ್ ಸಾಹಬ್ (85) ಶುಕ್ರವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ‌ ಅನಾರೋಗ್ಯದಿಂದ ಬಳಲುತ್ತಿದ್ದ ಲೈಕುದ್ದೀನ್ ಅವರು ಬೀದರ್ ನ ಓಲ್ಡ್ ಸಿಟಿಯ‌ ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

ನಾಲ್ಕು‌ ದಿನಗಳ ಹಿಂದೆಯಷ್ಟೇ ಅವರ ಪತ್ನಿ ಸಾವನ್ನಪ್ಪಿದ್ದು, ಇದರಿಂದ‌ ನೊಂದಿದ್ದರು. ಮೃತರು ಇಬ್ಬರು ಗಂಡು, ಮೂರು ಹೆಣ್ಣು ಮಕ್ಕಳು ಸೇರಿ‌ ಅಪಾರ ಬಳಗವನ್ನು ಬಿಟ್ಟು‌ ಅಗಲಿದ್ದಾರೆ. ನಗರದ ಚಿದ್ರಿ ರಸ್ತೆಯ ದರ್ಗಾದಲ್ಲಿ‌ ಅವರ ಅಂತ್ಯಕ್ರಿಯೆ ನೆರವೇರಿತು.

1985ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಲೈಕುದ್ದೀನ್ ಅವರು ಒಟ್ಟು ಮೂರು ಬಾರಿ‌ ಸ್ಪರ್ಧಿಸಿದ್ದರು. ರಾಜ್ಯ ಮತ್ತು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.