ಮಾಜಿ ಶಾಸಕ ಬಿ.ಎಂ.ನಾಗರಾಜಗೆ ಟಿಕೇಟ್ ಘೋಷಣೆ : ಬೆಂಬಲಿಗರ ಸಂಭ್ರಮ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.16 : ಕಾಂಗ್ರೇಸ್  ಪಕ್ಷವು ಶನಿವಾರ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಬಿ.ಎಂ.ನಾಗರಾಜ ಅವರ ಹೆಸರು ಘೋಷಿಸುತ್ತಿದ್ದಂತೆ ಸಿರುಗುಪ್ಪ ನಗರದ ಮತ್ತು ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಬೆಂಬಲಿಗರು ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಬಣ್ಣ ಹಚ್ಚಿ ಸಂಭ್ರಮಿಸಿದರು.
ಮಾಜಿ ಶಾಸಕ ಬಿ.ಎಂ.ನಾಗರಾಜ ಅವರು ಬೆಂಬಲಿಗರೊಂದಿಗೆ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ಹೂಮಾಲೆ ಹಾಕಿದರು, ಬೆಂಬಲಿಗರು ಪರಸ್ಪರ ಬಣ್ಣವನ್ನು ಎರಚಿ, ಕುಣಿದು ಕುಪ್ಪಳಿಸಿ ಸಂಭ್ರಮದ ವಾತವರಣ ಕಂಡು ಬಂದಿತು.