ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ

ವಿಜಯಪುರ,ಏ.29:ಜಿಲ್ಲೆಯ ಹಿರಿಯ ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಶಾಸಕÀ ಶಿವಪುತ್ರಪ್ಪ ದೇಸಾಯಿ ಅವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರು ಭೇಟಿಯಾಗಿ ಉಭಯಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಶಿವಪುತ್ರಪ್ಪ ಅವರಿಂದ ಶುಭಾಶಯ ಹಾಗೂ ಅನೇಕ ಸಲಹೆಗಳನ್ನು ಆಲಗೂರರು ಪಡೆದರು. ನಿಮ್ಮ ಹಾಗೂ ಪಕ್ಷದ ಪರ ಒಳ್ಳೆಯ ವಾತಾವರಣ ಇದೆ. ಜನ ಈ ಸಲ ಬದಲಾವಣೆ ಬಯಸಿದ್ದಾರೆ. ಅವರು ಬಿಜೆಪಿ ದುರಾಡಳಿತಕ್ಕೆ ಬೇಸತ್ತಿದ್ದಾರೆ. ಜನಗಳಿಗೆ ಜಿಲ್ಲೆಯ ಅಭಿವೃದ್ಧಿ ಬೇಕಾಗಿದೆ. ನೀವು ಖಂಡಿತ ವಿಜಯಶಾಲಿಯಾಗುತ್ತೀರಿ ಎಂದು ದೇಸಾಯಿಯವರು ಹರಿಸಿದ್ದಾರೆ. ಹಾಗೆಯೇ ಅಂದಿನ ದಿನಗಳ ರಾಜಕಾರಣವನ್ನು ಅವರು ಮೆಲುಕು ಹಾಕಿದರು. ನೀವು ಸಂಸದರಾಗಿ ಆಯ್ಕೆಯಾದರೆ ಜನಹಿತ ಕಾಪಾಡಿ ಎಂದು ಕಿವಿ ಮಾತನ್ನು ಹೇಳಿದರು.
ಗುಂಡಕನಾಳ ಶ್ರೀಗಳು, ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಅನೇಕರು ಇದ್ದರು.