ಮಾಜಿ ಶಾಸಕ ಜುಲ್ಫೇಕಾರ್ ಹಾಸ್ಮಿ ಇನ್ನಿಲ್ಲ

ಬೀದರ:ಏ.20: ಸ್ಥಳಿಯ ಮಾಜಿ ಶಾಸಕ ಸಯ್ಯದ್ ಜುಲ್ಫೀಕರ್ ಹಾಸ್ಮಿ (57) ಇಂದು ನಿಧನರಾಗಿದ್ದಾರೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಮಿ ಕಳೆದ 4 ತಿಂಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ

ಹಾಸ್ಮಿ 1994ರಲ್ಲಿ ಬಿಎಸ್‌ಪಿ ಶಾಸಕರಾಗಿ ಬೀದರ್‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ದಕ್ಷಿಣ ಭಾರತದಲ್ಲಿ ಬಿಎಸ್‌ಪಿ ಖಾತೆ ತೆರೆದ ಮೊದಲ ವ್ಯಕ್ತಿ ಎನ್ನುವ ಶ್ರೇಯಸ್ಸಿ ಇವರು ಪಾತ್ರವಾಗಿದ್ದರು. ನಂತರದ ದಿನಗಳಲ್ಲಿ ಅವರು ಜೆಡಿಎಸ್, ಕಾಂಗ್ರೆಸ್ ಪಕ್ಷಗಳಲ್ಲಿ ಸಹ ಗುರುತಿಸಿಕೊಂಡಿದ್ದರು.

ಅಲ್ಲದೆ ಅಪ್ಪಟ ಅಂಬೇಡ್ಕರವಾದಿಯಾಗಿದ್ದ ಹಾಸ್ಮಿ ಬಿಎಸ್ಪಿ ರಾಜ್ಯ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು.